23.5 C
Karnataka
April 4, 2025
ಪ್ರಕಟಣೆ

ಕುಮಾರ  ಕ್ಷತ್ರಿಯ ಸಂಘ  ಮುಂಬಯಿ: ಫೆಬ್ರವರಿ 11 : 58 ನೇ ವಾರ್ಷಿಕ ಮಹಾಸಭೆ , ಸತ್ಯನಾರಾಯಣ ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ



  ಮುಂಬಯಿ  ಪೆ 6.  ಮಹಾ ನಗರದಲ್ಲಿರುವ ಪ್ರತಿಷ್ಠಿತ ಜಾತೀಯ ಸಂಸ್ಥೆಯಲ್ಲೊಂದಾದ ಕುಮಾರ ಕ್ಷತ್ರಿಯ, ಮುಂಬಯಿಯು ಫೆಬ್ರವರಿ , ರವಿವಾರ ದಿನಾಂಕ 11 ರಂದು ಸಾಂತಕ್ರೂಜ್ ಪೂರ್ವದ ಪೇಜಾವರ ಮಠ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಂ.ಡಿ. ರಾವ್/ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲು ಎಂ. ರಾವ್ ಅವರ ನೇತೃತ್ವದಲ್ಲಿ  ಬೆಳಿಗ್ಗೆ 10.00 ಗಂಟೆಗೆ  ಸರಿಯಾಗಿ ಶ್ರೀ ಸತ್ಯನಾರಾಯಣ ಮಹಾಪೂಜೆ  ನಂತರ  ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ  ನೆರವೇರಲಿದೆ. ಮಧ್ಯಾಹ್ನ 12.15 ಗಂಟೆಗೆ ಕುಮಾರ ಕ್ಷತ್ರಿಯ ಸಂಘ, ಮುಂಬಯಿಯ ಅಧ್ಯಕ್ಷ ಎಂ ಡಿ ರಾವ್  ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಶಾಲು ಎಂ. ರಾವ್ ಇವರ ಉಪಸ್ಥಿತಿಯಲ್ಲಿ ವಾರ್ಷಿಕ ಮಹಾಸಭೆಯು ನೆರವೇರಲಿದೆ.

   ಇದೇ ಸಂದರ್ಭದಲ್ಲಿ ಸಮಾಜ ಬಾಂಧವರ ಶಾಲಾ ಕಾಲೇಜಿನಲ್ಲಿ ಉತ್ತೀರ್ಣರಾದ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವದು ಮತ್ತು ಸಂಘದ  ಪ್ರಗತಿಗೋಸ್ಕರ ಶ್ರಮಿಸಿದ ದಿವಂಗತ ಕಾರ್ಯಕರ್ತರ ಕುಟುಂಬದ ವರನ್ನು ಸನ್ಮಾನಿಸಲಾಗುವದು. ಸಂಘದ ಪ್ರಗತಿಕೋಸ್ಕರ ಶ್ರಮಿಸಿದ ಮಾಜಿ ಆಧ್ಯಕ್ಷರಾದ ಪ್ರಕಾಶ ನಾಥರವರನ್ನು “Life Time Achievement” ಪ್ರಶಸ್ತಿ ನೀಡಿ ಸನ್ಮಾನಿಸಲಾಗುವದು. ಹಾಗೂ ಕಾರ್ಯಕ್ರಮಕೊಸ್ಕರವೇ ಊರಿನಿಂದ ಬಂದ ಸಮಾಜ ಬಾಂಧವರನ್ನೂ  ಗೌರವಿಸಲಾಗುವದು.

ಮಧ್ಯಾಹ್ನ 2.45 ರಿಂದ  ಇದೇ ಸಭಾಗೃಹದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ. ರೇಣುಕಾ ಬಿ. ಅಮೀನ್ ಮತ್ತು ಅವರ ಬಳಗದವರಿಂದ ” ಸ್ವರಲೀಲೆ ಆರ್ಕೆಸ್ಟ್ರಾ” ಜರಗಲಿದ್ದು   ಸಮಾಜದ ಮಕ್ಕಳಿಗೂ ಇದರಲ್ಲಿ ಭಾಗವಹಿಸುವ ಅವಕಾಶ ಕೊಡಲಾಗುವದು. ಅಂದು ‘ಚೆಂಬೂರ್ ಕರ್ನಾಟಕ ಹೈಸ್ಕೂಲ್’ ಶಾಲೆಯ ವಿದ್ಯಾರ್ಥಿಗಳು  ಜಾನಪದ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ. ಜೊತೆಗೆ ಡಾ. ರೇಣುಕಾ ಬಿ. ಅಮೀನ್ ಅವರು ‘ಆರೋಗ್ಯ’ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಗಳನ್ನೂ ನೀಡಲಿದ್ದಾರೆ. 

ಈ ಸಂದರ್ಭದಲ್ಲಿ ಲಘು ಉಪಹಾರ ಹಾಗೂ ಮಧ್ಯಾಹ್ನ ಪ್ರೀತಿ ಭೊಜನದ ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕುಮಾರ ಕ್ಷತ್ರಿಯ ಸಂಘ ಮುಂಬಯಿವತಿಯಿಂದ ಉಪಾಧ್ಯಕ್ಷ  ರವಿ ಜಿ. ಚಂದ್ರಗಿರಿ, ಗೌ. ಪ್ರ. ಕಾರ್ಯದರ್ಶಿ    ಉಮಾನಾಥ ವಿ. ರಾವ್, ಕೋಶಾಧಿಕಾರಿ ಶಾಂತಾರಾಮ್ ಜೆ. ಮಾಂಗಾಡ್, ಜೊತೆ ಕೋಶಾಧಿಕಾರಿ ಸುರೇಂದ್ರ ಎಚ್. ಎ. ಮತ್ತು ಜೊತೆ ಕಾರ್ಯದರ್ಶಿ ಸಾಗರ  ಪಿ. ರಾವ್ ಮತ್ತು  ಸಮಿತಿ ಸದಸ್ಯರಾದ ಕೆ. ಎಂ. ರಾವ್,  ರವಿ ಎಸ್. ಕಲ್ನಾಡ್, ವಿವೇಕ್ ಜಿ. ರಾವ್, ಅನಿಲ್ ಜಿ. ರಾವ್,  ಪ್ರಶಾಂತ್ ನಾಥ್, ಪ್ರಶಾಂತ ಆರ್. ರಾವ್, ಅನುಪ್ ಜೆ.ರಾವ್ ಮಹಿಳಾ ವಿಭಾಗದವತಿಯಿಂದ  ಕಾರ್ಯಾಧ್ಯಕ್ಷೆ ಶಾಲು ಎಂ.‌ ರಾವ್, ಉಪ ಕಾರ್ಯಾಧ್ಯಕ್ಷೆ  ಉಮಾ ಎಸ್. ರಾವ್,  ಗೌ. ಪ್ರ. ಕಾರ್ಯದರ್ಶಿ ಕವಿತಾ ರೋಹನ್, ಜೊತೆ ಕಾರ್ಯದರ್ಶಿ ಕಲ್ಪನಾ ಎಸ್. ರಾವ್, ಸಲಹೆಗಾರರಾದ ಪ್ರಭಾ ಎಂ. ರಾವ್  ಮತ್ತು ಕೋಶಾಧಿಕಾರಿ ಇಂದುಮತಿ ಎ. ರಾವ್ ಹಾಗೂ  ಮಹಿಳಾ ಸಮಿತಿ ಸದಸ್ಯರಾದ ವಿಶಾಲಾಕ್ಷಿ ಎ. ಚಂದ್ರಗಿರಿ, ಛಾಯಾ ಯತೀಶ್ ಕುಮಾರ್, ಬಿಂದು ಕುಂದರ್ ,‌ ರಮ್ಯಾ ಎಸ್. ಮಾಂಗಾಡ್ , ಶಯಾತ್ರಿ ವಿ. ರಾವ್ ಮತ್ತು ರೇಖಾ ಸಾವಂತ್ ಇವರೆಲ್ಲರೂ ಪತ್ರಿಕಾ ಪ್ರಕಟನೆಯ ಮೂಲಕ ವಿನಂತಿಸಿ ಕೊಂಡಿದ್ದಾರೆ.

————

 

Related posts

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.

Mumbai News Desk

ಬಂಟರ ಸಂಘ ಮುಂಬಯಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ವತಿಯಿಂದ ಆರ್ಥಿಕ ಸಹಾಯ:* ವಸಾಯಿ-ದಹಾಣು ಪ್ರಾದೇಶಿಕ ಸಮಿತಿಯಿಂದ ಮಾ. 24 ಕ್ಕೆ ಅರ್ಜಿ ವಿತರಣೆ

Mumbai News Desk

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ

Mumbai News Desk

ಭಾಯಂದರ ಶ್ರೀ  ಮೂಕಾಂಬಿಕಾ ಶಾಂತ ದುರ್ಗೆಗೆ ದೇವಸ್ಥಾನ, ಎ 14 ರಂದು ವಾರ್ಷಿಕ ಮಹಾಪೂಜೆ,

Mumbai News Desk

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ

Mumbai News Desk

ಡಿ. 8 ಗೋರೆಗಾಂವ್ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ ಉದ್ಘಾಟನಾ ಸಮಾರಂಭದ, ಆಮಂತ್ರಣ ಪತ್ರಿಕೆ ಬಿಡುಗಡೆ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk