23.5 C
Karnataka
April 4, 2025
ಮುಂಬಯಿ

ಕುಲಾಲ ಸಂಘದ ಮುಂಬಯಿಯ ನವಿ ಮುಂಬಯಿ ಸ್ಥಳೀಯ ಸಮಿತಿ, ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ , ಭಜನೆ 



  ನವಿ ಮುಂಬಯಿ  :  ಕುಲಾಲ ಸಂಘದ ನವಿ ಮುಂಬಯಿ ಸ್ಥಳೀಯ ಸಮಿತಿ ಮಹಿಳಾ ವಿಭಾಗದ ಹಳದಿ ಕುಂಕುಮ ಕಾರ್ಯಕ್ರಮವು ಜ 27 ರಂದು ವಾಶಿ ಪ್ರಭಾಕರ ಬಂಗೇರ ರವರ ನಿವಾಸ ದಲ್ಲಿ ನಡೆಯಿತು.

      ಸತ್ಯನಾರಾಯಣ ಪೂಜೆ ಮತ್ತು ಗುರುವಂದನಾ ಭಜನಾ ಮಂಡಳಿಯ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ 130ನೇ ಭಜನೆ ಕಾರ್ಯಕ್ರಮ, ಮಂಗಳಾರತಿಯ ನಂತರ ಹಳದಿ ಕುಂಕುಮ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು. 

   ಸತ್ಯನಾರಾಯಣ ಪೂಜೆ ಯ ಮಂಗಳಾರತಿ ನಡೆಸಿದ  ವಾಶಿ ರಾಮಮೂರ್ತಿ ಭಟ್ ನಡೆಸಿದರು.

ಹಳದಿ ಕುಂಕುಮ ಕಾರ್ಯಕ್ರಮಕ್ಕೆ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಹಿರಿಯರು ಹಿಂಗಾರ ಹೂವು ಅರಳಿಸಿ ಕಾರ್ಯಕ್ರಮಕ್ಕೇ ಚಾಲನೆ ನೀಡಿದರು.

     ಕಾರ್ಯಕ್ರಮದಲ್ಲಿ ಗೌರವಧ್ಯಕ್ಷರಾದ  ದೇವದಾಸ್ ಕುಲಾಲ್.ಉಪಾಧ್ಯಕ್ಷರು  ಡಿ ಐ ಮೂಲ್ಯ ,  ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯ  ಧ್ಯಕ್ಷ ಸುನಿಲ್ ಸಾಲಿಯಾನ್ ,ಕೋಶಾಧಿಕಾರಿ ಜಯ ಅಂಚನ್, ಉಪಕಾರ್ಯಾಧ್ಯಕ್ಷರಾದ ಸದಾನಂದ್ ಕುಲಾಲ್ ,ಜೊತೆ ಕಾರ್ಯದರ್ಶಿ ಕೃಪೇಶ್ ಕುಲಾಲ್ ,ಯುವ ವಿಭಾಗದ ಅಕ್ಷತ್ ಶೀನ ಮೂಲ್ಯ.,ಸಾಕಿನಾಕ ಶ್ರೀನಿವಾಸ ಕುಲಾಲ್ ಉಪಸ್ಥಿತರಿದ್ದರು.

   ನವಿ ಮುಂಬೈ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಏಸ್ ಕುಲಾಲ್ ,ಉಪ ಕಾರ್ಯಾಧ್ಯಕ್ಷೆ  ದೇವಕಿ ಏಸ್ ಸಾಲಿಯಾನ್.ಕಾರ್ಯದರ್ಶಿ ಬೇಬಿ ಬಂಗೇರ , ಉಷಾ ಆರ್ ಮೂಲ್ಯ ,ಮಾಲತಿ ಜೆ ಅಂಚನ್.ಶೋಭಾ ಬಂಗೇರ ,ಸುಜಾತ ಬಂಗೇರ, ಸುಚೇತಾ ವಿ ಮೂಲ್ಯ,ಪ್ರೇಮ ಎಲ್ ಮೂಲ್ಯ ,ಶಶಿಕಲಾ ಮೂಲ್ಯ , ಚಂದ್ರಕಲಾ ಡಿ ಮೂಲ್ಯ ,ಹರಿಣಾಕ್ಷಿ ಸಾಲಿಯಾನ್,ರೇಖಾ ಎಲ್ ಮೂಲ್ಯ, ಸುನೀತಾ ಏಸ್ ಮೂಲ್ಯ,ಭವ್ಯ ಕೆ ಕುಲಾಲ್,ಉಪಸ್ತಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು. ಕಡೆಗೆ ಎಳ್ಳು ಬೆಲ್ಲ ಮತ್ತು ನೆನಪಿನ ಕಾಣಿಕೆಯನ್ನು ಹಂಚಿ , ಮಹಾಪ್ರಸಾದವನ್ನು ವಿತರಿಸಿದ ಪ್ರಭಾಕರ್ ಡಿ ಬಂಗೇರ ದಂಪತಿಯವರಿಗೆ  ಧನ್ಯವಾದವನ್ನು ಅರ್ಪಿಸಿದರು.

ಹಿಂದು ಧರ್ಮದಲ್ಲಿ ಅರಸಿನ ಕುಂಕುಮಕ್ಕೇ ಪವಿತ್ರ ಸ್ಥಾನವಿದ್ದು ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇದನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ .ಇದಕ್ಕೆ ಪೂಜನೀಯ ಸ್ಥಾನವನ್ನು ನೀಡುತ್ತಾರೆ. ಅರಶಿನ ಕುಂಕುಮ ತನ್ನದೇ ಅದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ,ಅರಸಿನವು ಬರಿಯ ಅಲಂಕಾರಿಕ ಇಲ್ಲವೇ ಪೂಜನೀಯ ಸಮಾಗ್ರಿಯವಾಗಿ ಹೆಸರು ಪಡೆದುಕೊಂಡಿದ್ದು , ಅರೋಗ್ಯಕ್ಷೇತ್ರದಲ್ಲಿ ಸಹ ಅರಸಿನ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ.ಇದು ಒಂದು ರೀತಿಯ ಸಂಜೀವಿನಿ. ಸೌಭಾಗ್ಯ ಮತ್ತು ಅದೃಷ್ಟದ ಸಂಕೇತವಾಗಿ ಕುಂಕುಮವನ್ನು ಕಾಣಲಾಗುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ಅರಶಿನದ ಪಾತ್ರ ಬೆಚ್ಚನೆಯ ಹಾಲಿನಲ್ಲಿ ಅರಿಶಿನವನ್ನು ಮಿಶ್ರಮಾಡಿ ಸೇವಿಸುವುದು ನಮ್ಮನ್ನು ಹಿತವಾಗಿಸಿರುತ್ತದೆ. ಇದು ಒಂದು ರೀತಿಯ ಸಂಜೀವಿನಿ ಎನ್ನಬಹುದು.ಇದರ ಸಂಕೇತವಾಗಿ ಜನವರಿ ತಿಂಗಳಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ಎಲ್ಲ ಕಡೆಯಲ್ಲೂ ನಡೆಯುತ್ತಿರುತ್ತದೆ.

Related posts

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

Mumbai News Desk

ಪ್ರಣವ್ ಬಿ.ಕೋಟ್ಯಾನ್ ಗೆ ಶೇ. 95.60 ಅಂಕ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಕಾಲೇಜಿನ ದಶಮಾನೋತ್ಸವ ಸಂಭ್ರಮ

Mumbai News Desk

ಬಿಲ್ಲವರ ಅಸೋಸಿಯೇಶನಿನ ಭಾಂಡುಪ್ ಸ್ಥಳೀಯ ಕಚೇರಿಯಲ್ಲಿ ಆಟಿದ ನೆನಪು ಕಾರ್ಯಕ್ರಮ.

Mumbai News Desk

ತೀಯಾ ಸಮಾಜ ಮುಂಬಯಿ 79ನೇಯ ವಾರ್ಷಿಕ ಮಹಾಸಭೆ; ಪ್ರತಿಭಾ ಪುರಸ್ಕಾರ ವಿತರಣೆ ಅಧ್ಯಕ್ಷರಾಗಿ ಕೃಷ್ಣ ಎನ್. ಉಚ್ಚಿಲ್ ಪುನಾರಾಯ್ಕೆ

Mumbai News Desk

ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ, ಶತಮಾನೋತ್ಸವಾಚರಣೆಗೆ ಪಾದಯಾತ್ರೆಯ ಮೂಲಕ ಚಾಲನೆ. 

Mumbai News Desk