32 C
Mumbai
March 7, 2026
Mumbai News Kannada
ಸುದ್ದಿ

ತಿರುಮಲದಲ್ಲಿ ವಿಜೃಂಭಣೆಯಿಂದ ನಡೆದ ಪುರಂದರ ದಾಸರ ಆರಾಧನ ಮಹೋತ್ಸವ





ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಬಾಗಿ.

ಶ್ರೀ ಉಮಾ ಮಹೇಶ್ವರಿ ಭಜನ ಮಂಡಳಿ, ಜರಿಮರಿ ಮುಂಬಯಿ ಇವರು ಸತತ 9 ನೇ ವರ್ಷದ ತಿರುಪತಿ ಯಲ್ಲಿ ಹರಿನಾಮ ಸಂಕೀರ್ತನೆಯಲ್ಲಿ ತಾರೀಕು 8,9 ಹಾಗೂ 10 ರಂದು ತಿರುಪತಿ, ತಿರುಮಲ ದಲ್ಲಿ ದಾಸ ಸಾಹಿತ್ಯ ಪ್ರೊಜೆಕ್ಟ್ ನ ಅಡಿಯಲ್ಲಿ ನಡೆದ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಮೂರು ದಿವಸ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡುರು.

ಶ್ರೀ ಬಗಡಾಲ ಆನಂದತೀರ್ಥ ಆಚಾರ್ಯ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 150 ಕಿಂತಲು ಅಧಿಕ ತಂಡಗಳು 5000 ಕಿಂತಲೂ ಅಧಿಕ ಭಜಕರು ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದರು. ವಿವಿಧ ಗಣ್ಯರು, ಯತಿಗಳು, ಭಾಗವಹಿಸಿದ್ದ ಈ 3 ದಿನಗಳಲ್ಲಿ ಕುಕ್ಕೆ ಸುಬ್ರಮಣ್ಯ ಮಠದಿಶಾರು ಹಾಗೂ ಪಲಿಮಾರು ಮಠದ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ದೇಶದ ಸುಪ್ರಸಿದ್ದ ಕಲಾವಿದರು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನೀಡಿದರು.

ಸುಮಾರು 20 ಸದಸ್ಯರ ತಂಡ ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸ್ವಾಮೀಜಿಗಳ ಆಶೀರ್ವಾದ ಪಡೆದು, 3 ದಿವಸ ವಿವಿಧ ಕಾರ್ಯಕ್ರಮಗಳಲ್ಲಿ, ಹಾಗೂ ಆರಾಧನ ಮಹೋತ್ಸವ, ಭಜನೆ, ಮೆರವಣಿಗೆ ಹಾಗೂ ಪೂಜೆಯಲ್ಲಿ ಪಾಲ್ಗೊಂಡು, ದೇವರ ದರ್ಶನ ಪಡೆದರು.



Related posts

“ಡ್ರಾಗನ್–ಆನೆ ಒಗ್ಗಟ್ಟಿಗೆ ಕರೆಯೊಡ್ಡಿದ ಷಿ, ಸಹಕಾರಕ್ಕೆ ಬದ್ಧತೆ ತೋರಿದ ಮೋದಿ”

Mumbai News Desk

ಕುಂದಾಪುರ : ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

Mumbai News Desk

ಮುಲುಂಡ್‌ :    ಲ!  ಜಯರಾಮ್ ಮೂಲ್ಯ ನಿಧನ

Mumbai News Desk

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಗುರುಪೂರ್ಣಿಮೆ.

Mumbai News Desk

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಂ ಕೃಷ್ಣ ನಿಧನ

Mumbai News Desk

ಮುಲ್ಕಿ ಹೊಸ ಆಂಗಣ ತಿಂಗಳ ಬೆಳಕು ಕಾರ್ಯಕ್ರಮ, ದೈವ ಪಾತ್ರಿ ಮಾನಂಪಾಡಿ ಯಾದವ ಪೂಜಾರಿಗೆ ಸನ್ಮಾನ.

Mumbai News Desk