30.9 C
Mumbai
June 8, 2026
Mumbai News Kannada
ಸುದ್ದಿ

ಮುಲುಂಡ್‌ :    ಲ!  ಜಯರಾಮ್ ಮೂಲ್ಯ ನಿಧನ





 

ಕುಲಾಲ ಸಂಘ ಮುಂಬಯಿ ಇದರ,ಪ್ರಾಪರ್ಟಿ ಅಭಿವೃದ್ಧಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ದಾನಿ ಲ |ಜಯರಾಮ್ ಮೂಲ್ಯ(79) ಅವರು ೨೬.೪.೨೦೨೫ ರಂದು  ಅನಾರೋಗ್ಯದಿಂದ ಅವರ ನಿವಾಸವಾದ
ಶ್ರೀ ವರ್ಧನ್, ವಿಬಿ ಫಡಕೆ ರಸ್ತೆ, ಕೇಳ್ಕರ್ ಕಾಲೇಜು ಹತ್ತಿರ, ಮುಲುಂಡ್ ಪೂರ್ವ ಇಲ್ಲಿ ನಿಧನರಾದರು.
ಅವರು ಮೂಲತ  ಬಜ್ಪೆಯ ಅದ್ಯಪಾಡಿಯವರು,ಮೃತರು ಪತ್ನಿ , ಒರ್ವ ಪುತ್ರ. ಒಬ್ಬಳು ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಜಯರಾಮ್ ಮೂಲ್ಯ ಅವರು ಮುಲುಂಡ್ ಮಿತ್ರವೃಂದ ದ  ಪದಾಧಿಕಾರಿಯಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕಲೆ, ಕಲಾವಿದರಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದವರು. ಮುಂಬಯಿ ಕುಲಾಲ ಸಂಘದ ಸೇವಾದಳದಲ್ಲಿ ಸೇವಾ ಕರ್ತರಾಗಿ, ಆಸ್ತಿ ಅಭಿವೃದ್ಧಿ ಸಮಿತಿಯ ಕಾರ್ಯ ಧ್ಯಕ್ಷರಾಗಿ,ಸಂಘದ ಥಾಣೆ ಗೊಡ್ ಬಂದರ್ ನಲ್ಲಿರುವ ಜಾಗದ ಅಭಿವೃದ್ಧಿಗಾಗಿ ದಿವಂಗತ ಪಿ ಕೆ ಸಾಲಿಯಾನ್ ಅವರೊಂದಿಗೆ ಅಪಾರವಾಗಿ ಶ್ರಮಿಸಿದವರು. ಸಂಘದ ವಿವಿಧ ಯೋಜನೆಗಳಿಗೆ ಸದಾ ಸಹಕಾರವನ್ನು ನೀಡುತ್ತಾ, ವಿವಿಧ ಪದವಿಗಳನ್ನು ಅಲಂಕರಿಸಿಕೊಂಡವರು.ಮುಲುಂಡ್‌ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿಕೊಂಡವರು.
ಅವರ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಕುಲಾಲ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

   ಲ !ಜಯರಾಮ್ ಮೂಲ್ಯ ನಿಧಾನಕ್ಕೆ ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ. ಗೌರವಾಧ್ಯಕ್ಷ ದೇವದಾಸ್ ಕುಲಾಲ್. ಮತ್ತಿತರ ಪದಾಧಿಕಾರಿಗಳು. ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲಿಯಾನ್ ಮತ್ತಿತರ ಸದಸ್ಯರು ದುಃಖ ಸಂತಾಪ ಸೂಚಿಸಿರುವರು.

B. Dinesh Kulal

Mob.: 9821868674



Related posts

ಸಮಾಜ ಸೇವೆಗೆ ಕನ್ಯಾನ ಸದಾಶಿವ ಶೆಟ್ಟಿ ಭಾವುಕ ವಿದಾಯ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ನಿಡ್ಲೆ ಗೋವಿಂದ ಭಟ್ ಮತ್ತು ಪುತ್ತಿಗೆ ಕುಮಾರ ಗೌಡ ರಿಗೆ ಕಾಂತಾವರ ಯಕ್ಷದೇಗುಲ ಪ್ರಶಸ್ತಿ

Mumbai News Desk

*ವಿಜಯ ಕಾಲೇಜು ಮುಲ್ಕಿ*,*ಜಾಗತಿಕ ಹಳೆ ವಿದ್ಯಾರ್ಥಿ ಸಂಘ,ಮುಂಬಯಿ*-ನೂತನ ಅಧ್ಯಕ್ಷರಾಗಿ ಅಡ್ವೊಕೇಟ್ ಶೇಖರ್ ಭಂಡಾರಿ ಆಯ್ಕೆ.

Mumbai News Desk

“ಆನಂದವನ್ನು ನಮ್ಮೊಳಗೆ ಹುಡುಕಬೇಕು” : ಪೂಜ್ಯ ಒಡಿಯೂರು ಶ್ರೀಗಳವರಿಂದ ಸಂದೇಶ

Mumbai News Desk

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮುಂಬಯಿ ಭೇಟಿ.

Mumbai News Desk