
ಮುಂಬೈ ಕನ್ನಡ ಲೇಖಕಿಯರ ಬಳಗ ಸೃಜನಾ ಮುಂಬಯಿ ಇದರ ವತಿಯಿಂದ ಸಾಹಿತ್ಯ ವಿಮರ್ಶೆ, ಕ್ರತಿ ಬಿಡುಗಡೆ ಹಾಗೂ ಜನಪದ ಹಾಡುಗಳ ಪ್ರಸ್ತುತಿ ಕಾರ್ಯಕ್ರಮವು ಫೆಬ್ರವರಿ 17ರಂದು ಶನಿವಾರ, ಸಂಜೆ 4 ರಿಂದ, ಮಾಟುಂಗಾ ಪೂರ್ವ ಮೈಸೂರು ಅಸೋಸಿಯೇಷನ್ನ ನ ಮೊದಲನೇ ಮಹಡಿಯ ಕಿರು ಸಭಾಗ್ರಹದಲ್ಲಿ ಜರಗಲಿದೆ.
ಅಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪತ್ರಕರ್ತ,ಸಾಂಸ್ಕೃತಿಕ ಸಂಘಟಕ ದಯಾಸಾಗರ ಚೌಟ, ಗೌರವ ಅತಿಥಿಯಾಗಿ ಸ್ಪರೋ ದ ನಿರ್ದೇಶಕಿ, ಡಾ. ಸಿ ಎಸ್ ಲಕ್ಷ್ಮಿ, ಆಗಮಿಸಲಿದ್ದು ಸೃಜನಾ ದ ಸಂಚಾಲಕಿ ಪದ್ಮಜಾ ಮಣ್ಣೂರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಅಂದು ಮುಂಬೈ ಖ್ಯಾತ ಲೇಖಕಿ,ಅನುವಾದಕಿ,ಸೃಜನಾದ ಮಾಜಿ ಸಂಚಾಲಕಿ ಶಾಮಲಾ ಮಾಧವ್ ಅವರ ಎರಡು ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.
ಸಾಹಿತಿ,ಅಕ್ಷಯ ಮಾಸಿಕದ ಮುಖ್ಯ ಸಂಪಾದಕ ಡಾ. ಈಶ್ವರ ಅಲೆಯೂರು ವಿಮರ್ಶೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ಸಂದರ್ಭ ಸೃಜನಾದ ಸದಸ್ಯರಿಂದ ಜನಪದ ಹಾಡುಗಳ ಪ್ರಸ್ತುತಿ ನಡೆಯಲಿದೆ.
ಸಾಹಿತ್ಯ ಪ್ರೇಮಿಗಳು,ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸೃಜನಾ ಮುಂಬೈ ಕನ್ನಡ ಲೇಖಕಿಯರ ಬಳಗದವರು ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.