
ಮಂಜೇಶ್ವರ : ನಾಡಿನಲ್ಲಿ ಜಾತಿ,ಮತ,ಧರ್ಮದ,ರಾಜಕೀಯದ ನೆಪದಲ್ಲಿ ಪರಸ್ಪರ ಜನ ಕಚ್ಚಾಡುತ್ತಿರುವಾಗ ಮಂಜೇಶ್ವರದ ಮಣ್ಣಿನಲ್ಲಿ ಮತ ಸೌಹರ್ದತೆಯನ್ನು ಕಾಪಿಡುವಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಶತಾಯ ಗತಾಯ ಪ್ರಯತ್ನಿಸುತ್ತಿದೆ ಎಂಬುದಕ್ಕೆ ಇದೀಗ ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರವು ಪಟ್ಟತ್ತೂರು ಜುಮಾ ಮಸ್ಜಿದಿಯು ಸಾಕ್ಷಿಯಾಗಿ ನಾಡಿಗೆ ಮಾದರಿಯಾಗಿದೆ.
ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದಲ್ಲಿ ಫೆ.24 ರಿಂದ ಫೆ.26 ರ ವರೆಗೆ ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ ಹಾಗೂ ಮಾ.1 ರಿಂದ ಮಾ.8 ರ ವರೆಗೆ ಕಳಿಯಾಟ ಮಹೋತ್ಸವ ಜರಗಲಿದೆ. ಇದರ ಪ್ರಯುಕ್ತ ಆಸ್ತಿಕ ಬಂಧುಗಳನ್ನು ಆಹ್ವಾನಿಸುವ ಅದೇ ರೀತಿಯಲ್ಲಿ ಪಟ್ಟತ್ತೂರು ಜುಮಾ ಮಸ್ಜಿದಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ವಿಶೇಷ ಆಹ್ವಾನ ನೀಡಲು ಶುಕ್ರವಾರದ ಜುಮಾ ನಮಾಜು ನಡೆಯುವ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಮಸೀದಿಯ ಆವರಣಕ್ಕೆ ತಲುಪಿ ಆಮಂತ್ರಣ ನೀಡಿದರು.
ಮಸೀದಿ ಪದಾಧಿಕಾರಿಗಳು ಬಂದ ಅತಿಥಿಗಳನ್ನು ಸಂಪ್ರದಾಯಿಕವಾಗಿ ಸ್ವಾಗತಿಸಿ ನಾಡಿನ ಧಾರ್ಮಿಕ ಶ್ರದ್ಧಾ ಕೇಂದ್ರದ ಪರಸ್ಪರ ಐಕ್ಯತೆಯನ್ನು ಯುವ ಪೀಳಿಗೆಗೆ ಸ್ಪೂರ್ತಿಯಾಗಿಸುವ ನಿಟ್ಟಿನಲ್ಲಿ ಸಾಮೂಹಿಕ ಪೋಟೊ ಸೇಸನ್ ನಡೆಸಿ ಧಾರ್ಮಿಕ ಬಾಂಧವ್ಯತೆಯನ್ನು ಇನ್ನಷ್ಡು ಗಟ್ಟಿಯಾಗಿಸಿ ಅವಿಸ್ಮರಣೀಯಗೊಳಿಸಿದರು.
ಈ ಸಂದರ್ಭದಲ್ಲಿ ಬಲ್ಲಂಗುಡೇಲು ಕ್ಷೇತ್ರ
ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ರವೀಂದ್ರ ಶೆಟ್ಟಿ ಕರಿಬೈಲ್, ಕಾರ್ಯದರ್ಶಿ ಜಗದೀಶ್ ಮೂಡಂಬೈಲ್, ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ರಮೇಶ್ ಸುವರ್ಣ, ಕಾರ್ತಿಕ್ ಶೆಟ್ಟಿ ಮಜಿಬೈಲ್,ರಾಜೇಶ್ ಬಲ್ಲಂಗುಡೇಲು, ಪ್ರದೀಪ್ ಶೆಟ್ಟಿ ಬಲ್ಲಂಗುಡೇಲು,ಅಖಿಲೇಶ್ ಕಂಗುಮೆ ,ಶಿವಪ್ರಸಾದ್ ಉಪಸ್ಥಿತರಿದ್ದರು.ಮಸೀದಿಯ ಅಧ್ಯಕ್ಷರಾದ ಅಬ್ದುಲ್ಲ ಕೆ., ಮೂಸ ಪಿ.ಅಜ್ಜಿಹಿತ್ತಲು,ಮೂಸ ಎ. ವೆಳಿಯಲಿಪ್ಪು,ಅಬ್ದುಲ್ ರಹಮಾನ್, ಬಶೀರ್ ಮೂಡಂಬೈಲ್, ಅಬುಬಕ್ಕರ್ ಪಟ್ಟತ್ತೂರು, ಮಹಮ್ಮದ್ ಅಶ್ರಫ್ ಮೂಡಂಬೈಲ್, ಇಬ್ರಾಹಿಂ ಆಶೀಕ್ ಮೂಡಂಬೈಲ್ ಮೊದಲಾದವರು ಹಿಂದೂ ಬಾಂಧವರನ್ನು ಸ್ವಾಗತಿಸಲು ನೇತೃತ್ವವಹಿಸಿದರು.