30.9 C
Mumbai
June 8, 2026
Mumbai News Kannada
ಸುದ್ದಿ

ಪೆರುವಾಯಿ ನಾರಾಯಣ ಭಟ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ.





ಮಂಗಳೂರು- ಆಗಸ್ಟ್ 2 ರಂದು ಸಂಜೆ 7 ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಯೋಜನೆಯ ಭ್ರಾಮರೀ ಯಕ್ಷವೈಭವ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಹಿಮ್ಮೇಳ ಕಲಾವಿದ ಪೆರುವಾಯಿ ಬಿ ನಾರಾಯಣ ಭಟ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ಹದಿನೈದು ಸಾವಿರ ನಗದು ,ಪ್ರಶಸ್ತಿ ಪತ್ರ, ಬೆಳ್ಳಿಯ ಪದಕವನ್ನು ಒಳಗೊಂಡಿರುತ್ತದೆ.

ನಾರಾಯಣ ಭಟ್ ಅವರು ಕಲಾಸೇವೆ ಮೂಲಕ ಕಳೆದ 45 ವರುಷಗಳಲ್ಲಿ ಮುಖ್ಯಹಿಮ್ಮೇಳವಾದಕರಾಗಿ, ಯಕ್ಷಗಾನ ಕಲಾಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಸೂರ್ನಾಡು ಗಣೇಶದುರ್ಗಾ ಯಕ್ಷಗಾನ ಮಂಡಳಿ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲಿನಲ್ಲಿ ಸೇವೆ ಸಲ್ಲಿಸಿದ್ದಾರೆ, ಯಕ್ಷಗಾನ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ, ಆಕಾಶವಾಣಿ, ದೂರದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು.ಯಕ್ಷಗಾನ ಗುರುಗಳಾಗಿ ಅಪಾರ ಶಿಷ್ಯಂದಿರನ್ನು ಹೊಂದಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದ ನೇಪಥ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ವಸಂತ ವಾಮದಪದವು ಹಾಗೂ ಕಳೆದ 25 ವರುಷಗಳಿಂದ ನಿರಂತರವಾಗಿ ಪೂರ್ತಿರಾತ್ರಿಯ ಯಕ್ಷಗಾನ ತಾಳಮದ್ದಳೆ ಆಯೋಜಿಸಿಕೊಂಡು,ಯಕ್ಷಗಾನ ಕಲಾವಿದರನ್ನು ಗೌರವಿಸಿಕೊಂಡು ಬಂದಿರುವ ಯಕ್ಷಸಂಗಮ‌ ಮೂಡುಬಿದಿರೆ ಸಂಸ್ಥೆಗೆ ಈ ಬಾರಿಯ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಭ್ರಾಮರೀ ಯಕ್ಷಸೇವಾ ಪುರಸ್ಕಾರವು ,ತಲಾ ಆರು ಸಾವಿರ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಇಡೀ ರಾತ್ರಿ ತೆಂಕು ಬಡಗಿನ ಪ್ರಸಿದ್ದ ಕಲಾವಿದರ ಒಗ್ಗೂಡುವಿಕೆಯಲ್ಲಿ ಶ್ರೀಮತಿ ಪರಿಣಯ, ಸಾಧ್ವಿ ಸೈರಂದ್ರಿ, ವೈಜಯಂತಿ ಪರಿಣಯ ಯಕ್ಷಗಾನ ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.



Related posts

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಜವಾಬ್ದಾರಿ: ಮಹಾತ್ಮ ಜ್ಯೋತಿರಾವ್ ಫುಲೆ 200ನೇ ಜನ್ಮ ದಿನಾಚರಣೆಯ ಉನ್ನತ ಮಟ್ಟದ ಸಮಿತಿಗೆ ನಾಮನಿರ್ದೇಶನ

Mumbai News Desk

ಮಂಗಳೂರಿನ ಕುಲಾಲ ಭವನ ಲೋಕಾರ್ಪಣೆ; 

Mumbai News Desk

ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ಪ್ರತಿಷ್ಠಿತ ‘ಮಂತ್ರಾಲಯ ಪರಿಮಳ’ ಪ್ರಶಸ್ತಿ ಪ್ರದಾನ

Mumbai News Desk

*2025-26ನೆಯ ಸಾಲಿನ SSLC ಪರೀಕ್ಷೆಯಲ್ಲಿ ಮೂಲ್ಕಿ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗೆ 100% ಫಲಿತಾಂಶ**.

Mumbai News Desk

ಮುಂಬಯಿ : ಥಾಣೆಯ ಮುಂಬ್ರಾ ಬಳಿ ಚಲಿಸುವ ರೈಲಿನಿಂದ ಬಿದ್ದು ಕನಿಷ್ಠ 5 ಪ್ರಯಾಣಿಕರು ಸಾವು

Mumbai News Desk

ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪಕ ಎನ್ ವಿನಯ ಹೆಗ್ಡೆ ನಿಧನ

Mumbai News Desk