26.4 C
Karnataka
April 2, 2025
ಸುದ್ದಿ

ಕಲಂಬೋಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಇದರ ಮಹಿಳಾ ವಿಭಾಗದ ಹರಸಿನ ಕುಂಕುಮ ಕಾಯ೯ಕ್ರಮ.



  ನವಿಮುಂಬೈಯ ಪೆ 20. ಶ್ರೀ ಅಯ್ಯಪ್ಪ ಸ್ವಾವಿು ಭಕ್ತಾ ಸಂಸ್ಥ ಕಲಂಬೋಳಿಇದರ ಮಹಿಳಾ ವಿಭಾಗದ ಅರಶಿನ ಕುಂಕುಮ ಕಾಯ೯ಕ್ರಮವು    ಸನ್ ರೈಸ್ ನ ಬ್ಯಾಂಕ್ವೆಟ್ ಹಾಲ್ನಲ್ಲಿ ಸಂಸ್ಥೆಯ ಮಹಿಳಾ ಅಧ್ಯಕ್ಷೆ  ರೇವತಿ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ವಿಜ್ರಂಭಣೆಯಿಂದ ಜರಗಿತು.

ಮಧ್ಯಾಹ್ನ  ಶ್ರೀ ಸತ್ಯನಾರಾಯಣ ಮಹಾ ಪೂಜೆ ನಡೆಯಿತು , ಸಂಜೆ ಸಂಸ್ಥೆಯ ಭಜನಾ ಮಂಡಳಿಯಿಂದ ಭಜನೆ ಸಂಕೀ೯ತನೆ ನಡೆಯಿತು.ಆ ಬಳಿಕ  ಸಂಸ್ಥೆಯ ಮಹಿಳಾ ಅಧ್ಯಕ್ಷರು ಕಾಯ೯ಕ್ರಮಕ್ಕೆ  ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿನಗರ ಸೇವಕರು ನೆರೊಲ್   ಅನಿತಾ ಸಂತೋಷ್ ಶೆಟ್ಟಿ ,ಹಾಗೂ ಶ್ರೀ ಶನೇಶ್ವರ ಮಂದಿರ ನೆರುಲ್ ಇದರ ಮಹಿಳಾ ಅಧ್ಯಕ್ಷೆ ಸರೋಜಿನಿ ಜಯಕರ್ ಪೂಜಾರಿ, ಮತ್ತು ಸಮಾಜ ಸೆವಕಿ  ಅನಿತಾ ಉಮೇಶ್ ಪೂಜಾರಿ ಕಾಂದ ಕಾಲೋನಿ, ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ  ಶಿವರಾಮ್ ಎ ಕೋಟ್ಯಾನ್ , ಸಂಸ್ಥೆಯ ಪ್ರಧಾನ ಗುರುಸ್ವಾಮಿ, ವಿಠ್ಠಲ್ ಕೆ ಬಂಗೇರ ಇವರುಗಳನ್ನು   ದೀಪ ಪ್ರಜ್ವಲನೆಯ  ಮೂಲಕ ಹಾಗೂ  ಪ್ರೇಮಲತಾ ರಘು ಕೋಟ್ಯಾನ್ ಅವರ ಪ್ರಾರ್ಥನೆ ಯೊಂದಿಗೆ  ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು,

   ವೇದಿಕೆಯಲ್ಲಿ ನೆರೆದ ಗಣ್ಯರಿಗೆ ಶಾಲು  ಹೊದಿಸಿ ಪುಷ್ಪ ಗೌರವವನ್ನು ನೀಡಿ ಗೌರವಿಸಲಾಯಿತು  ಸಂಸ್ಥೆಯ ಗೌರವಾಧ್ಯಕ್ಷರು ಸದಾನಂದ ಡಿ ಶೆಟ್ಟಿ,, ಅವರ ಧರ್ಮಪತ್ನಿ ಸುನೀತ ಎಸ್ ಶೆಟ್ಟಿ ದಂಪತಿಯರು ಸತ್ಯನಾರಾಯಣ ಪೂಜೆ ಯ ಯಜಮಾನಿಕೆಯನ್ನು  ವಯಿಸಿದರು, ಸ್ಥಳ ಅವಕಾಶ ಹಾಗೂ ಪ್ರೀತಿ ಭೋಜನದ ವ್ಯವಸ್ಥೆಯನ್ನು ಅವರು ಆಯೋಜಿಸಿದ್ದರು  ಅವರೆ    ಗೌರವಿಸಲಾಯಿತು,

  ಸಭಾ ಕಾಯ೯ಕ್ರಾಮದಲ್ಲಿ ಸಂಸ್ಥೆಯ ಉಪಾಧ್ಯಾಕ್ಷರಾದ  ಶಿವರಾಮ್ ಎ ಕೋಟ್ಯಾನ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ಸಂಸ್ಥೆಯ ಬಗ್ಗೆ ವಿವರಣೆಯನ್ನು ಕೊಟ್ಟರು.

ನಂತರ ಅಥಿತಿಯಾದ ಸಮಾಜ ಸೇವಕಿ  ಅನಿತಾ ಉಮೇಶ್ ಪೂಜಾರಿಯವರು ಮಾತನಾಡುತ್ತ ತಾನು ಮಲೆನಾಡಿನವಳು ಅಲ್ಲಿ ಬೇಗ ಎದ್ದು ಮನೆಯ ಹೊಸ್ತಿಲಿಗೆ ರಂಗೋಲಿಯನ್ನು ಹಾಕಿ ಅರಶಿನ ಕುಂಕುಮ ಹಾಕುವ ಕ್ರಮ ಮೊದಲಿನಿಂದಲೂ ನಡೆಯುತ್ತಾ ಬಂದಿದೆ.

ಇಂತಹ ಸನಾತನ ಧಮ೯ದ ಬಗ್ಗೆ ನಮ್ಮ ಮಕ್ಕಳಿಗೂ ಮುಂದಿನ ಯುವ ಪೀಳಿಗೆಗೂ ತಿಳಿದು ಸಡೆಸುವುದು ಮುಖ್ಯವಾದುದು ಎಂದು ಹೇಳಿದರು

  .ಆ ಬಳಿಕ ಅಥಿತಿಯಾದ ಶ್ರೀ ಶನೀಶ್ವರ ಮಂದಿರ ನೇರುಲ್ ನ  ಮಹಿಳಾ ಅಧ್ಯಕ್ಷೆ  ಸರೋಜಿನಿ ಜಯಕರ್ ಪೂಜಾರಿ ಮಾತನಾಡುತ್ತ ಅರಶಿನ ಕುಂಕುಮ ಹಣೆಗೆ ಹಚ್ಚುದರಿಂದ ಆಯ್ಯುಷ್ಯ ಹೆಚ್ಚಾಗುದಲ್ಲದೆ ಶ್ರೀಲಕ್ಮ್ಷಿದೇವಿಯು ಸದಾ ನೆಲೆಸಿರುತ್ತಾರೆ ಎಂಬುದಾಗಿ ತಿಳಿಸಿದರು ಇವರು ತುಳು ಕನ್ನಡ ವೆಲ್ಫೇರ್  ಅಸೋಸಿಯೇಷನ್ ಕಮೊಠೆ ಇದರ ಮಾಜಿ ಮಹಿಳಾ ಅಧ್ಯಕ್ಷೆ ಕೂಡ ಆಗಿರುತ್ತಾರೆ. 

    ಮಾಜಿ ಕಾಪೋ೯ರೇಟರ್  ಅನಿತಾ ಸಂತೋಷ್ ಶೆಟ್ಟಿಯವರು ಮಾತನಾಡುತ್ತಾ ಅರಶಿನ ಕುಂಕುಮ ಎಂಬುದು ನಮ್ಮ ಊರಿನಿಂದಲೇ  ಬಂದುದು ಸೂಯ೯ ದೇವ ಹಳದಿ ಬಣ್ಣದಲ್ಲಿ ರಾರಾಜಿಸುತ್ತಿದ್ದರೆ 

ಭೂಮಿತಾಯಿ ಕೇಸರಿ ಬಣ್ಣದಲ್ಲಿ ಇರುತ್ತಾರೆ ಆದ್ದರಿಂದ ಪ್ರಕೃತಿ ಧೈವಿ ಶಕ್ತಿಯು ಸಿಗುತ್ತದೆ ಎಂದರು ಅಲ್ಲದೆ ಇದು ಮಹಾರಾಷ್ಟ್ರದ  ಸಂಪ್ರಾದಾಯವಲ್ಲ ಬದಲಾಗಿ ಹಿಂದು ಸನಾತನ ಧಮ೯  ಎಂದು ಸಭೆಗೆ ಹೇಳಿದರು. ಕೊನೆಗೆ ನಮ್ಮ ಸಂಸ್ಥೆಯ ಮಹಿಳಾ ಅಧ್ಯಕ್ಷ ಸಭಾಧ್ಯಕ್ಷರು ಮಾತನಾಡುತ್ತಾ ಒಂದು ಯಶಸ್ವಿ ಕಾರ್ಯಕ್ರಮ ಮೂಡಿಬರಲು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆಯ ಎಲ್ಲಾ ಪದಾಧಿಕಾರಿ ಹಾಗೂ ಸದಸ್ಯರು, ಮಹಿಳಾ ವಿಭಾಗದ ನನ್ನ ಅಕ್ಕ ತಂಗಿಯರಂತಿರುವ ಎಲ್ಲಾ ಮಹಿಳೆಯರು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಚಂದ ಕಾಣಿಸಿಕೊಟ್ಟಿರಿ ಅಲ್ಲದೆ ನಮ್ಮ ಸಂಸ್ಥೆಯ ಅಧ್ಯಕ್ಷರು ರವೀಶ್ ಜಿ ಶೆಟ್ಟಿ ಅವರ ಮುಂದಾಳುತ್ವದಿಂದ, ಕಾರ್ಯದರ್ಶಿ, ಕೋಶಾಧಿಕಾರಿ, ಇವರುಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂತು ಹಾಗೆ ಇನ್ನು ಮುಂದೆಯೂ ಇದೇ ರೀತಿ ಒಳ್ಳೆಯ ಕಾರ್ಯಕ್ರಮವನ್ನು ಮಾಡಲು ನಾವೆಲ್ಲರೂ ಒಗ್ಗಟ್ಟಾಗಿ ಸಹಕರಿಸೋಣ ಮತ್ತು ನಮ್ಮ ಯುವ ಜನಾಂಗಕ್ಕೂ ಕೂಡ ಈ ಹರಿಶಿನ ಕುಂಕುಮದ ವಿಶೇಷತೆಯನ್ನು ಹಾಗೂ ಸನಾತನ ಧರ್ಮದ ಸಾಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವನ್ನು ಮಾಡೋಣ ಎಂದು ತಿಳಿಸಿ ಹೃದಯ ತುಂಬಿ ಕೃತಜ್ಞತೆಯನ್ನು ಅರ್ಪಿಸಿದರು,  ಮಾಜಿ ಅಧ್ಯಕ್ಷರಾದ  ಶ್ರೀಯುತ  ಭರತ್ ರೈಯವರು ಅರಶಿನ ಕುಂಕುಮ ಕಾಯ೯ಕ್ರಮಕ್ಕೆಉಡುಗೊರೆಯನ್ನು ನೀಡಿದ್ದರು  ಅವರನ್ನೂ ದಂಪತಿ ಸಮೇತ ಪುಷ್ಪಗೌರವವನ್ನು ಮಾಡಲಾಯಿತು ನಮ್ಮ ಸಂಸ್ಥೆಯ ಯುವ ವಿಭಾಗದ ಅಧ್ಯಕ್ಷ ಭವಿತ್ ಕೋಟ್ಯಾನ್ ಅವರಿಗೂ ಪುಷ್ಪ ಗೌರವ ಮಾಡಲಾಯಿತು

ನಂತರ ಕಾಮೋಟೆ, ಕಾಂದಕೊಲನಿ, ಪನ್ವೇಲ್, ನ್ಯೂ ಪನ್ವೆಲ್, ಹಾಗು ಭ್ರಾಮರಿ ಯಕ್ಷನಿಲಯ,ಮತ್ತು ನವಿಮುಂಬಯಿಯ ಸಂಘ ಸಂಸ್ಥೆಯ ಪದಾದಿಕಾರಿಗಳಿಗೆ ಪುಷ್ಪಗೌರವವನ್ನುನೀಡಲಾಯಿತು 

ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಜೊತೆ ಕಾರ್ಯದರ್ಶಿ  ಜಯಶ್ರೀ ವಿಠ್ಠಲ ಬಂಗೇರ ಇವರು ಅಚ್ಚುಕಟ್ಟಾಗಿ ನಿರೂಪಿಸಿದರು,

ಕೊನೆಯದಾಗಿ   ಜಯಂತಿ ಕೋಟ್ಯಾನ್ ಅವರ ಧನ್ಯವಾದಗಳೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು

Related posts

ತುಳುರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದ ಜೋಡು ಜೀಟಿಗೆ, – ಒಂದೇ ದಿನ ಎರಡು ಮಹಾನಗರಿಯ ಭವ್ಯ ವೇದಿಕೆಯಲ್ಲಿ ನಾಟಕ ಪ್ರದರ್ಶನ

Mumbai News Desk

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಡಾ.ರವಿರಾಜ್ ಸುವರ್ಣ ನೇಮಕ.

Mumbai News Desk

ಶ್ರೀ ಸ್ವಾಮಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್, ಕಲ್ಯಾಣ್ ವತಿಯಿಂದ ಗಣೇಶಪುರಿಯಲ್ಲಿ  ಭಂಡಾರ ಸೇವೆ ಸಂಪನ್ನ

Mumbai News Desk

ಅಮೂಲ್ಯ ಪತ್ರಿಕೆಯ 25ರ ಸಂಭ್ರಮಾಚರಣೆಯಲ್ಲಿ ಸಂಭ್ರಮಿಸಿದ ಕವಿ ಗೋಷ್ಠಿ.

Mumbai News Desk

ಪಾಣೆಮಂಗಳೂರಲ್ಲಿ ಶ್ರೀನಿವಾಸ ಸಾಫಲ್ಯ ದಂಪತಿಗೆ ಸನ್ಮಾನ 

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. 16 ನೇ ವರ್ಷದ ವರಮಹಾಲಕ್ಷ್ಮಿ ಪೂಜಾಯ ಆಮಂತ್ರಣ ಪತ್ರಿಕೆ ಬಿಡುಗಡೆ,

Mumbai News Desk