July 23, 2026
Mumbai News Kannada
ಸುದ್ದಿ

‘ನೆಲೆ ಫೌಂಡೇಶನ್ ‘ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿ 2025







ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಪ್ರತಿ ವರ್ಷ ನೀಡುವ ಮೂಲತ್ವ ವಿಶ್ವ ಪ್ರಶಸ್ತಿಗೆ ಈ ಬಾರಿ , ಅವಕಾಶ ವಂಚಿತ ಮಕ್ಕಳನ್ನು ಮತ್ತು ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ ಸೇವಾ ನಿರತವಾದ ಬೆಂಗಳೂರಿನ ನೆಲೆ ಫೌಂಡೇಶನ್ ಆಯ್ಕೆಯಾಗಿದೆ.
ನವಂಬರ್ 16ರಂದು ಬೆಳಿಗ್ಗೆ 10ಗಂಟೆಗೆ ಮಂಗಳೂರು ಕೊಡಿಯಲ್ ಬೈಲ್ ನ ಶಾರದಾ ವಿದ್ಯಾಲಯದ ಸಭಾಗ್ರಹದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನೆಲೆ ಫೌಂಡೇಶನ್ ಗೆ 11ನೇ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಪ್ರಧಾನಿಸಲಾಗುವುದು.
ದಕ್ಷಿಣ ಮಧ್ಯ ಕ್ಷೇತ್ರ ಮಾನ್ಯ ಸಂಘ ಚಾಲಕರಾದ ಡಾ.ವಿ. ಪಿ ವಾಮನ್ ಶಣೈ, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ನಾಡೋಜ ಡಾ.ಜಿ ಶಂಕರ್, ಭಾರತ್ ಕೋ- ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಶಾರದಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ ಬಿ ಪುರಾಣಿಕ್, ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ರವಿ ರೈ ಕಳಸ ಇವರೆಲ್ಲರ ಗಣ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಪ್ರಧಾನಿಸಲಾಗುವುದು.
ಮೂಲತ್ವ ವಿಶ್ವ ಪ್ರಶಸ್ತಿಯ ತೀರ್ಪುಗಾರರಾಗಿ ಪ್ರಕಾಶ್ ಮೂಲತ್ವ ಹಾಗೂ ಎಲ್ಲಾ ಟ್ರಸ್ಟಿಗಳು, ಪ್ರೊ. ರಾಜ್ ಮೋಹನ್ ರಾವ್, ಸಿಎ ಶಿವಕುಮಾರ್ ಕೆ, ಸುನಿಲ್ ಆಚಾರ್, ನವೀನ್ ಕುಮಾರ್ ಗುಳಿಬೆಟ್ಟು, ಗೌತಮ್ ಸಾಲ್ಯಾನ್ ಕೊಡೈಕೆಲ್, ಸಂತೋಷ್ ಬಂಗೇರ ಎಸ್ ಕರ್ತವ್ಯ ನಿರ್ವಹಿಸಿರುವರು.

ಇಷ್ಟರ ತನಕ ಮೂಲತ್ವ ವಿಶ್ವ ಪ್ರಶಸ್ತಿ ಪಡೆದ ಸಾಧಕರು :

ಪದ್ಮಶ್ರೀ ಹರೇಕಳ ಹಾಜಬ್ಬ, ಮಂಗಳೂರು (2015), ಪದ್ಮಶ್ರೀ ಸುಹಾಸಿನಿ ಮಿಸ್ತ್ರಿ ವೆಸ್ಟ್ ಬೆಂಗಾಲ್ (2016), ಪದ್ಮಶ್ರೀ ದಿ. ಸಿಂಧೂ ತಾಯಿ ಸಕ್ಪಲ್ ಮಹಾರಾಷ್ಟ್ರ (2017) ಟಿ ಆಟೋ ರಾಜ ಬೆಂಗಳೂರು (2018), ಪದ್ಮಶ್ರೀ ಡಾ.ಪ್ರಕಾಶ್ ಅಮ್ಟೆ – ಡಾ. ಮಂದಾಕಿನಿ ಅಮ್ಟೆ ನಾಗಪುರ,ಮಹಾರಾಷ್ಟ್ರ (2019), ರವಿ ಕಟಪಾಡಿ, ಉಡುಪಿ ಕರ್ನಾಟಕ (2020), ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅಂಕೋಲಾ ಕಾರವಾರ ಕರ್ನಾಟಕ (2021), ಪದ್ಮಶ್ರೀ ಶ್ರೀಮತಿ ಸುನಿತಾ ಕೃಷ್ಣನ್ ತೆಲಂಗಾಣ(2022), ಪದ್ಮಶ್ರೀ ಶ್ರೀಮತಿ ಪೂಲನ್ ಬಾಸನ್ ಬಾಯಿ ಯಾದವ್ ರಾಜ ನಂದಗಾವ್ ಛತ್ತಿಸ್ ಘಡ್ (2023), ಜೀವ ರಕ್ಷಕ, ಈಜು ತಜ್ಞ ಈಶ್ವರ್ ಮಲ್ಪೆ (2024)

ಕಾರ್ಯಕ್ರಮ :

ಬೆಳಿಗ್ಗೆ 10ಗಂಟೆಯಿಂದ – 11.30ರ ಮೂಲತ್ವ ವಿಶ್ವ ಪ್ರಶಸ್ತಿ ಪ್ರಧಾನ – 2025
11.30ರಿಂದ – 12 ರ ತನಕ – ನೆಲೆ ಫೌಂಡೇಶನ್ ನ ಅಧ್ಯಕ್ಷ ಶಿವಕುಮಾರ್ ಅವರೊಂದಿಗೆ ಸಂವಾದ.

ನೆಲೆ ಫೌಂಡೇಶನ್ ಬಗ್ಗೆ :

ನೆಲೆ ಫೌಂಡೇಶನ್ ಆಗಸ್ಟ್ 2000 ರಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿತು, ಇದು ಬಡ ಮಕ್ಕಳಿಗೆ ಪ್ರೀತಿಯ ಮತ್ತು ಸುರಕ್ಷಿತ ವಾತಾವರಣದಲ್ಲಿ ವಸತಿ ಆರೈಕೆಯನ್ನು ಒದಗಿಸುತ್ತದೆ. ಈ ಮಕ್ಕಳು ಹೆಚ್ಚಿನ ಸಮಯ ದೌರ್ಜನ್ಯ ಮತ್ತು ಬಡತನದ ಜೀವನದಿಂದ ರಕ್ಷಿಸಲ್ಪಡುತ್ತಾರೆ.
ಈ ಪ್ರತಿಷ್ಠಾನವು 12 ಕೇಂದ್ರಗಳನ್ನು ನಡೆಸುತ್ತಿದೆ – ಬೆಂಗಳೂರಿನಲ್ಲಿ ಆರು ಮತ್ತು ಮೈಸೂರಿನಲ್ಲಿ ಎರಡು ಮತ್ತು ತುಮಕೂರು, ಮಂಡ್ಯ, ಹೊಸಪೇಟೆ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು. ಈ ಕೇಂದ್ರಗಳಲ್ಲಿ ಮಾಡಿದ ಕೆಲಸದ ಮೂಲಕ ಪ್ರತಿಷ್ಠಾನವು 4000 ಕ್ಕೂ ಹೆಚ್ಚು ಮಕ್ಕಳ ಜೀವನವನ್ನು ಬದಲಾಯಿಸಿದೆ. ಪ್ರಸ್ತುತ 400 ಕ್ಕೂ ಹೆಚ್ಚು ಮಕ್ಕಳಿಗೆ ಆಹಾರ ಮತ್ತು ಆರೈಕೆ ಮಾಡುತಿದೆ.. ನೆಲೆಯಲ್ಲಿ, ಮಗುವಿಗೆ ಉತ್ತಮ ಭವಿಷ್ಯ ಮತ್ತು ಉತ್ತಮ ಅವಕಾಶಗಳನ್ನು ಒದಗಿಸುವುದು ಸಂಸ್ಥೆಯ ಗುರಿ ಮತ್ತು ಬದ್ಧತೆಯಾಗಿದೆ.

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಪ್ರಕಾಶ್ ಮೂಲತ್ವ, ಶ್ರೀಮತಿ ಕಲ್ಪನಾ ಪಿ ಕೋಟ್ಯಾನ್ ಶ್ರೀಮತಿ ಶೈನಿ ಮೂಲತ್ವ, ಲಕ್ಷ್ಮೀಶ ಪಿ ಕೋಟ್ಯಾನ್, ಶ್ರೀಮತಿ ಅಕ್ಷತಾ ಕದ್ರಿ , ಡಿ. ಎಂ ಜಯಕುಮಾರ್ ಮತ್ತು ಸದಸ್ಯರು, ಸಮಾರಂಭಕ್ಕೆ ಸ್ವಾಗತ ಕೋರಿದ್ದಾರೆ.
ಹೆಚ್ಚಿನ ವಿವರಗಳಿಗೆ ಮೊಬೈಲ್ ಕ್ರಮಾಂಕ : 9036478093, ಸಂಪರ್ಕಿಸಬಹುದು.



Related posts

ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ 

Mumbai News Desk

ಭವಾನಿ ಗಿರಿಯಾ ಪೂಜಾರಿ (ಭವಾನಿ ಟೀಚರ್) ನಿಧನ

Mumbai News Desk

ಕೊಂಕಣ ರೈಲ್ವೆಯಿಂದ ಮಾನ್ಸೂನ್ ಪೂರ್ವ ಸಿದ್ಧತೆ: ಸುರಕ್ಷಿತ ಪ್ರಯಾಣಕ್ಕಾಗಿ ಹಳಿಗಳ ನವೀಕರಣ ಕಾಮಗಾರಿ ಚುರುಕು, ರೈಲು ಸಂಚಾರ ವಿಳಂಬ ಸಾಧ್ಯತೆ

Mumbai News Desk

ಪೇಜಾವರ ಮಠದಲ್ಲಿ ಶ್ರೀ ಕೃಷ್ಣನವಮಿ ಪ್ರತಿಷ್ಠಾ ವರ್ಧಂತಿ ಉತ್ಸವ ಆಚರಣೆ.

Mumbai News Desk

ಸುರತ್ಕಲ್: ಸಿಲಿಂಡರ್ ಸ್ಫೋಟ ಪ್ರಕರಣ ತೀವ್ರವಾಗಿ ಗಾಯಗೊಂಡ ಮಹಿಳೆಯರಿಬ್ಬರ ಸಾವು

Mumbai News Desk

ವಿದ್ಯಾರ್ಥಿಗಳ ಹೆಸರಿನಲ್ಲಿ ಅರಾಜಕತೆ: ಆರ್ ಎ ಎಫ್, ಪೊಲೀಸರ ಮೇಲಿನ ದಾಳಿ ಖಂಡನೀಯ: ಬಿಜೆಪಿ ಮುಖಂಡ ಶ್ರೀನಿಧಿ ಹೆಗ್ಡೆ

Mumbai News Desk