
ಮುಂಬಯಿ ಪೆ 20 ನಗರದ ಹಿರಿಯ ಧಾರ್ಮಿಕ ಸಂಘಟನೆಯಾದ ಶ್ರೀಮದ್ಭಾರತ ಮಂಡಳಿಯ ೧೪೬ನೇ ವಾರ್ಷಿಕ ಮಂಗಳೋತ್ಸವವು ಫೆಬ್ರವರಿ ೧೭ ಮತ್ತು ೧೮ ರಂದು ಮಂಡಳಿಯ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಫೆ.೧೭ ರಂದು ಸಾಯಂಕಾಲ ದೇವರ ಮೂರ್ತಿಯನ್ನು ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ವಿವಿಧ ಸಂಸ್ಥೆಗಳು ದಾನವಾಗಿ ನೀಡಿದ್ದ ಬಂಗಾರದ ಸರಗಳನ್ನು ಆಯಾ ಸಂಘಟನೆಯ ಪ್ರತಿನಿಧಿಗಳು ದೇವರಿಗೆ ಅಲಂಕರಿಸಿದರು. ಬಳಿಕ ಬ್ರಾಹ್ಮಣ ಸತ್ಕಾರ, ಹೋಮ ನಡೆಯಿತು.
ಗ್ರಂಥ ಪಾರಾಯಣ ಸಮಾಪ್ತಿ ನಿಮಿತ್ತ ಗ್ರಂಥ ಪಾರಾಯಣ ನಡೆದು ಮಂಗಳಾರತಿ ಮತ್ತು ಪ್ರಸಾದ ವಿತರಣೆ ಜರಗಿತು. ಮರುದಿನ ಫೆ.೧೮ ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮವು ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ,ಶ್ರೀ ಹನುಮಾನ್ ಭಜನಾ ಮಂಡಳಿ, ದಹಿಸರ್, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಫೋರ್ಟ್, ಶ್ರೀ ಮದ್ಭಾರತ ಭಜನಾ ಮಂಡಳಿ ಅಂಧೇರಿ, ಇವರಿಂದ ಸಾದರಗೊಂಡಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಯ ಹಾಗೂ ವಾಚನ, ಪ್ರವಚನದಲ್ಲಿ ಸಾಧನೆ ಗೈದ ಪುಷ್ಪ ಗೋಪಾಲ ಬಂಗೇರ ಅವರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ಮತ್ತು ಸನ್ಮಾನ ಪತ್ರದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ಪಿ. ಪುತ್ರನ್, ಉಪಾಧ್ಯಕ್ಷರಾದ ಗೋವಿಂದ ಎನ್. ಪುತ್ರನ್ ಮತ್ತು ನಾಗೇಶ್ ಎಲ್. ಮೆಂಡನ್, ಪ್ರಧಾನ ಕಾರ್ಯದರ್ಶಿ ಲೋಕನಾಥ್ ಪಿ. ಕಾಂಚನ್ , ಜತೆ ಕಾರ್ಯದರ್ಶಿಗಳಾದ ಮೋಹನದಾಸ ಓಡಿ ಮೆಂಡನ್ ಮತ್ತು ಹರಿಶ್ಚಂದ್ರ ಸಿ. ಕಾಂಚನ್, ಪ್ರಧಾನ ಕೋಶಾಧಿಕಾರಿ ಕೇಶವ ಆರ್. ಪುತ್ರನ್, ಜತೆ ಕೋಶಾಧಿಕಾರಿಗಳಾದ ಶ್ಯಾಮ ಕೆ. ಪುತ್ರನ್ ಮತ್ತು ಅಶೋಕ ಎನ್. ಸುವರ್ಣ, ಸಮಿತಿ ಸದಸ್ಯರಾದ ಜಗನ್ನಾಥ ಆರ್. ಕಾಂಚನ್, ಹೊಸಬೆಟ್ಟು ಮಹಾಬಲ, ದೇವದಾಸ್ ಎಲ್. ಅಮೀನ್, ಪುರಂದರ ಅಮೀನ್, ಮೋಹನ್ ಅಮೀನ್, ಹರೀಶ್ ಪುತ್ರನ್, ಪ್ರಶಾಂತ್ ತಿಂಗಳಾಯ, ರಮೇಶ್ ಅಮೀನ್, ಚಂದ್ರಕಾಂತ ಕೋಟ್ಯಾನ್ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು, ಪೂಜಾ ಸಮಿತಿಯ ಸಂಜೀವ ಚಂದನ್, ವಾಸು ಉಪ್ಪೂರು, ಸುರೇಂದ್ರನಾಥ ಹಳೆಯಂಗಡಿ ಉಪಸ್ಥಿತರಿದ್ದರು. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.ಈ ವರ್ಷ ಪಾರಾಯಣದ ದೀಕ್ಷೆಯನ್ನು ಗ್ರಂಥ ವಾಚನಕ್ಕೆ ಶ್ರೀಮತಿ ಶೋಭಾ ವಿ. ಬಂಗೇರ, ಅರ್ಥ ವಿವರಣೆ ಶ್ರೀಮತಿ ಪುಷ್ಪ ಗೋಪಾಲ ಬಂಗೇರ, ಅರ್ಚಕ ಭಟ್ ರಾಗಿ ಅಳಿಕೆ ಪುರಂದರ ಅಮೀನ್, ಚಾಮರ ಸೇವೆಗೆ ಎಚ್. ಮಹಾಬಲ ಮತ್ತು ಮೋಹನ್ ಮೆಂಡನ್, ಜನಮೇಜಯರಾಗಿ ಹರಿಶ್ಚಂದ್ರ ಸಿ. ಕಾಂಚನ್ ವಹಿಸಿಕೊಂಡಿದ್ದರು. ಸಾಯಂಕಾಲ ದೇವರನ್ನು ಮೆರವಣಿಗೆಯಲ್ಲಿ ಚೌಪಾಟಿ ಕಡಲ ಕಿನಾರೆಗೆ ಅವಭೃತ ಸ್ನಾನಕ್ಕೆ ಕೊಂಡೊಯ್ಯಲಾಯಿತು. ಮೊಗವೀರ ಗಾರ್ಡ್ಸ್ ಸಹಕರಿಸಿದರು.
