31 C
Mumbai
September 1, 2026
Mumbai News Kannada
ಮುಂಬಯಿ

ಶ್ರೀ ಬಾಟ್ಲಾ ದೇವಿ ಅಯ್ಯಪ್ಪ ಭಕ್ತವೃಂದ ಭಾಟ್ಲಾ ದೇವಿ ಮಂದಿರ ದಹಿಸರ್ ಪೂರ್ವ 35ನೇ ಅಯ್ಯಪ್ಪ ಮಹಾಪೂಜೆ,  ಅನ್ನ ಸಂತರ್ಪಣೆ





ಚಿತ್ರ, ವರದಿ : ರಮೇಶ್ ಉದ್ಯಾವರ 

 ದಹಿಸರ್, ಡಿ. 8:  ಶ್ರೀ  ಭಾಟ್ಲದೇವಿ ಮಂದಿರ ದಹಿಸರ್ ಪೂರ್ವ ಇಲ್ಲಿನ ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದ ಇದರ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ಡಿ. 7ರಂದು ದಹಿಸರ್ ನ ವಿನಾಯಕ ಗುರುಸ್ವಾಮಿ ಅವರ ದಿವ್ಯಹಸ್ತದಿಂದ ಸಕಲ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಿತು.

 ಬೆಳಿಗ್ಗೆ ಗಣ ಹೋಮ, ಪ್ರತಿಷ್ಠಾಪನೆ ನೆರವೇರಿತು. ಆ ಬಳಿಕ ಹನುಮಾನ್ ಭಜನಾ ಮಂಡಳಿ ಅಶೋಕವನ ದಹಿಸರ್ ಪೂರ್ವ ಸಂಗಡಿಗರಿಂದ ಮತ್ತು ಅಯ್ಯಪ್ಪ ಸ್ವಾಮಿಯವರಿಂದ ಭಜನೆ ಕೀರ್ತನೆ ಶರಣಘೋಷದೊಂದಿಗೆ ಜರುಗಿತು. 

      ಮಧ್ಯಾಹ್ನ ಮಹಾಪೂಜೆ ಮೊದಲು ಹಿರಿಕಿರಿಯ ಅಯ್ಯಪ್ಪ ಸ್ವಾಮಿ ಶಿಬಿರಾರ್ಥಿಗಳಿಂದ  ಶರಣು ಘೋಷದೊಂದಿಗೆ ಪಡಿಪೂಜೆ ನೆರವೇರಿತು. ಬಳಿಕ ಶ್ರೀ ವಿನಾಯಕ ಗುರುಸ್ವಾಮಿಯವರಿಂದ ಮಹಾಪೂಜೆ ಮಂಗಳಾರತಿ ಜರುಗಿತು.

ಪ್ರಾರಂಭದಲ್ಲಿ ಸನ್ನಿಧಾನ ದೇವತೆ ಬಾಟ್ಲಾದೇವಿಗೆ ವಿಶೇಷ ಪೂಜೆ ಮಹಾಪ್ರಸಾದ ಸಮರ್ಪಿಸಿದ ಬಳಿಕ ಅಯ್ಯಪ್ಪ ಮಹಾಪೂಜೆಗೆ ಚಾಲನೆ ನೀಡಲಾಯಿತು.  ಈ ಸಂದರ್ಭದಲ್ಲಿ ವಿಶೇಷ ಅಲಂಕೃತ ಶ್ರೀ ಗಣಪತಿಯ  ಹಾಗೂ ಶ್ರೀ ಕಟಿಲೇಶ್ವರಿ ದೇವಿಯ ಪ್ರತಿಬಿಂಬಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗೌ. ಪ್ರ. ಕಾರ್ಯದರ್ಶಿ ಮನ್ಮಥ ಆರ್. ಹೆಗ್ಡೆ ಪಲ್ಲ ಪೂಜೆ ನೆರವೇರಿಸಿದ ಬಳಿಕ ಅಯ್ಯಪ್ಪ ಶಿಭಿರಾರ್ಥಿಯ ವ್ರತಧಾರಿಗಳು ಸಾವಿರಾರು ತುಳು ಕನ್ನಡಿಗ ಭಕ್ತಾಧಿಗಳು ದೇವಸ್ಥಾನದ ಸದಸ್ಯರು ಮಹಾಪ್ರಸಾದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.

 ಗೌರವಾಧ್ಯಕ್ಷರಾದ ಕೃಷ್ಣ ಎಂ ಶೆಟ್ಟಿ ಮತ್ತು ವಿನಾಯಕ ಗುರುಸ್ವಾಮಿಯವರು ಪೂಜೆಯಲ್ಲಿ ಭಾಗವಹಿಸಿದ ಪರಿಸರದ ವಿವಿಧ ಉದ್ಯಮಿಗಳು ಗಣ್ಯರಿಗೆ ಮತ್ತು ವಿವಿಧ ಶಿಬಿರಾರ್ಥಿಯ ಗುರುಸ್ವಾಮಿಯವರಿಗೆ ಪ್ರಸಾದ ವಿತರಿಸಿದರು.

    ಸಾಯಂಕಾಲ ಬೊರಿವಿಲಿ ಮಹಿಷಮರ್ದಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಕಾರ್ಯಕ್ರಮ  ಜರುಗಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತ್ರಿಶಾ ಸನತ್ ಶೆಟ್ಟಿಯವರಿಂದ ಗಣೇಶ ವಂದನ ಕಟೀಲ ದುರ್ಗೆಯ ನೃತ್ಯ ರೂಪಕ ಅಯ್ಯಪ್ಪ ಸ್ತುತಿ ಹರಿವರಸನಂ ಪ್ರಸ್ತುತಪಡಿಸಿದರು. ಬಳಿಕ ವಿಜಯ ಸಾಲ್ಯಾನ್ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು.

 ಈ ಸಂದರ್ಭದಲ್ಲಿ ಸಂಸ್ಥೆ ಯ ಮಾಜಿ ಅಧ್ಯಕ್ಷ ದಹಿಸರ್ ಪರಿಸರದ ಹೋಟೆಲ್ ಉದ್ಯಮಿ  . ಸಮಾಜ ಸೇವಕ ಸದಾನಂದ ಕೆ ಶೆಟ್ಟಿ ಅವರನ್ನು ಅಧ್ಯಕ್ಷೆ ಲತಾ ಸಿ ಪೂಜಾರಿ ಗೌರವ ಅಧ್ಯಕ್ಷ ಕೃಷ್ಣ ಎಂ ಶೆಟ್ಟಿ ಕಾರ್ಯಕಾರಿ ಸಮಿತಿ ಸದಸ್ಯ ರೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ಶಾಲು ಹೊದೆಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

 ಅಂತರಾಷ್ಟ್ರೀಯ ಕ್ರೀಡಾಪಟು ಕಿಕ್ ಬಾಕ್ಸರ್ ಪ್ರಶಸ್ತಿ ವಿಜೇತ ಬಾಲಕೃಷ್ಣ ಶೆಟ್ಟಿ, ದಂಪತಿಗಳು,   ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನೃತ್ಯ ಸಾದರ ಪಡಿಸಿದ ತ್ರಿಶಾ ಸನತ್ ಶೆಟ್ಟಿ ಅವರನ್ನು ವೇದಿಕೆಯಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ವಿಶೇಷವಾಗಿ ಗೌರವಿಸಲಾಯಿತು.

 ವೇದಿಕೆಯಲ್ಲಿ ಗೌರವಾಧ್ಯಕ್ಷ ಕೃಷ್ಣ ಎಂ ಶೆಟ್ಟಿ ಅಧ್ಯಕ್ಷೆ ಲತಾ ಸಿ ಪೂಜಾರಿ ಗೌ. ಪ್ರಧಾನ ಕಾರ್ಯದರ್ಶಿ ಗೌ. ಪ್ರಧಾನ ಕೋಶಾಧಿಕಾರಿ ಉಷಾ ಸಿ ಪೂಜಾರಿ ಉಪಾಧ್ಯಕ್ಷರಾದ ಶ್ರೀಧರ್ ಕೆ  ಪೂಜಾರಿ ಜೊತೆ ಕಾರ್ಯದರ್ಶಿ ರವೀಂದ್ರ ಎಂ ಭಟ್ ಜೊತೆ ಕೋಶಾಧಿಕಾರಿ ಸ್ವಪ್ನ ಎ ಶೆಟ್ಟಿ ಕಾನೂನು ಸಲಹೆಗಾರರಾದ ನ್ಯಾಯವಾದಿ ಎಚ್ ಎಂ ಶೆಟ್ಟಿ ಉಪಸ್ಥಿತರಿದ್ದರು.

 ಕಾರ್ಯಕಾರಿ ಸಮಿತಿಯ ಸದಸ್ಯರಾದ ಸದಾನಂದ ಕೆ ಶೆಟ್ಟಿ,  ರಾಮಚಂದ್ರ ಎಸ್ ಶೆಟ್ಟಿ ವಾಸುದೇವ ಕೋಟ್ಯಾನ್ ಕರುಣಾಕರ ವಿ ಶೆಟ್ಟಿ ರುಕ್ಮಯ ಎಸ್ ಶೆಟ್ಟಿಗಾರ್ ಸುನಂದಾ ಎಸ್ ಶೆಟ್ಟಿ ವಿಲಾಸಿನಿ ಆರ್ ಶೆಟ್ಟಿ ಮೋಹಿನಿ ಎಂ ಹೆಗ್ಡೆ ದಿನಪೂರ್ತಿ ಜರಗಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.ಕಾರ್ಯಕಾರಿ ಸಮಿತಿಯ ಸದಸ್ಯರಾದ ಪರಮೇಶ್ವರ ಎಂ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Related posts

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ಚೈತನ್ಯ ಕಲಾವಿದರು ಬೈಲೂರು ತಂಡದಿಂದ ‘ಅಷ್ಟೆಮಿ’ ನಾಟಕ ಪ್ರದರ್ಶನ

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಭಕ್ತಿಪೂರ್ವಕ ಮಹಾಶಿವರಾತ್ರಿ ಮತ್ತು ಭಜನೋತ್ಸವ

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ

Mumbai News Desk

ಗೋಕುಲದಲ್ಲಿ ಅತ್ಯಂತ ಸಂಭ್ರಮದಿಂದ ವೈಭವೀಕರಿಸಿದ  “ಪುರುಷರ ಮಹಾ ದಿನ” – ಪ್ರತಿಭಾ ಪ್ರದರ್ಶನ”

Mumbai News Desk