
ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಶಾಲೆ ಪರಿಸರದ ಪ್ರತಿಯೊಂದು ಕುಟುಂಬದ ಅದಾರ ಸ್ಥಂಭವಾಗಲಿದೆ. – ದೆವೇಶ್ ಪಾಟೀಲ್
ಚಿತ್ರ ವರದಿ: ರವಿ.ಬಿ.ಅಂಚನ್ ಪಡುಬಿದ್ರಿ
ಗಣೇಶಪುರಿ,ಫೆ 18: ಭಗವಾನ್ ನಿತ್ಯಾನಂದರಿಗೆ ಮಕ್ಕಳೆಂದರೆ ಬಹಳ ಪ್ರೀತಿ, ಅಂಬಾಡಿ, ವಜ್ರೇಶ್ವರಿ, ವಿರಾರ್, ನಲಾಸೋಪರ ಪರಿಸರದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಭಗವಾನ್ ಶ್ರೀ ನಿತ್ಯಾನಂದರ ಕೃಪೆಯಿಂದ ಶ್ರೀ ನಿತ್ಯಾನಂದರ ಪರಮ ಭಕ್ತರಾದ ಸುರೇಂದ್ರ ಕಲ್ಯಾಣ್ ಪುರ್ ಅವರಿಂದ ನೂತನ ಶಾಲೆ ನಿರ್ಮಾಣವಾಗಿದೆ. ಪರಿಸರದ ಮಕ್ಕಳ ಭವಿಷ್ಯ ನಿರ್ಮಾಣ ಮಾಡುವ ಈ ಶಾಲೆ ಪ್ರತಿಯೊಂದು ಕುಟುಂಬದ ಅದಾರ ಸ್ಥಂಭವಾಗಲಿದೆ. ಸುರೇಂದ್ರ ಕಲ್ಯಾಣ್ ಪುರ್ ತಾನು ಸಂಪಾದಿಸಿದ ಕೆಲವು ಅಂಶವನ್ನು ತಾನು ನಂಬಿದ ದೇವರಾದ ನಿತ್ಯಾನಂದರ ತತ್ವಕ್ಕೆ ವಿನಿಯೋಗಿಸುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿ ತಾನು ಕಲಿತ ಶಾಲೆಯನ್ನು ಎಂದೂ ಮರೆಯದೆ ಅದರ ಅಭಿವೃದ್ಧಿಗೆ ಪಣತೊಟ್ಟಾಗ ಶಿಕ್ಷಣ ಸಂಸ್ಥೆಗಳು ಉದ್ದಾರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕ್ಷೇತ್ರದ ಸಂಸದರಾದ ಕಪಿಲ್ ಪಾಟೀಲ್ ಪುತ್ರ ದೆವೇಶ್ ಪಾಟೀಲ್ ನುಡಿದರು.
ಅವರು ಫೆ. 17 ರ ಸಂಜೆ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್ ಗಣೇಶಪುರಿಯಲ್ಲಿ ನಿತ್ಯಾನಂದ ಭಕ್ತರಾದ ಸುರೇಂದ್ರ ಕಲ್ಯಾಣಪುರ್ ಅವರ ವತಿಯಿಂದ ವಜ್ರೇಶ್ವರಿ ಶಿಕ್ಷಣ ಪ್ರಸಾರಕ ಮಂಡಳಿಗೆ ದಾನವಾಗಿ ನೀಡಿದ ನೂತನ ಕಟ್ಟಡ ಹಸ್ತಾಂತರದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ವಿನೋದ್ ಪಾಟೀಲ್ ಮಾತನಾಡುತ್ತಾ ನಿತ್ಯಾನಂದರ ನಿಜವಾದ ತತ್ವವನ್ನು ಸುರೇಂದ್ರ ಕಲ್ಯಾಣ್ ಪುರ್ ಮಾಡುತ್ತಿದ್ದಾರೆ. ಅನ್ನದಾನ, ಮಕ್ಕಳಿಗೆ ಬರೆಯಲು ಪುಸ್ತಕ, ಕಲಿಯಲು ಶಾಲೆ ನಿರ್ಮಿಸಿ ಕೊಟ್ಟಿದ್ದಾರೆ ಅವರು ಬಲ ಕೈಯಲ್ಲಿ ಕೊಟ್ಟ ದಾನವನ್ನು ಎಡ ಕೈಗೆ ತಿಳಿಸುವುದಿಲ್ಲ ಇಂತಹ ದಾನಿಗಳು ಇನ್ನಷ್ಟು ಬರಲಿ ಎಂದರು.
ಶ್ರಮ ಜೀವಿ ಸಂಘಟನೆಯ ಸ್ನೇಹಾ ಪಂಡಿತ್ ಗುಪ್ತೆ ಮಾತನಾಡುತ್ತಾ ದಾನಗಳಲ್ಲಿ ಶ್ರೇಷ್ಠ ದಾನ ಅನ್ನದಾನ ತದನಂತರ ವಿದ್ಯಾದಾನ ಇಂತಹ ಶ್ರೇಷ್ಠ ದಾನವನ್ನು ಸುರೇಂದ್ರ ಕಲ್ಯಾಣ್ ಪುರ್ ಮಾಡುತ್ತಿದ್ದಾರೆ. ವಜ್ರೇಶ್ವರಿ ಪರಿಸರದ ವಿದ್ಯಾರ್ಥಿಗಳಿಗೆ ವಿದ್ಯಾಮಂದಿರ ನಿರ್ಮಿಸಿ ಕೊಟ್ಟ ಶ್ರೇಯಸ್ಸು ಕಲ್ಯಾಣ್ ಪುರ್ ಸರ್ ಗೆ ಸಲ್ಲುತ್ತದೆ ಈ ವ್ಯಕ್ತಿಯಿಂದ ನಮಗೆ ಸಮಾಜ ಸೇವೆ ಮಾಡುವ ಪ್ರೇರಣಾ ಶಕ್ತಿ ಲಭಿಸಿದೆ ಎಂದರು.

ಶ್ರಮಜೀವಿ ಸಂಘಟನೆಯ ಕಾರ್ಯದರ್ಶಿ ಬಲರಾಮ್ ಮಾತನಾಡುತ್ತಾ ಸುರೇಂದ್ರ ಕಲ್ಯಾಣ್ ಪುರ್ ವಜ್ರೇಶ್ವರಿ, ಗಣೇಶಪುರಿ ಪರಿಸರದ ನಾಗರಿಕರ ಮನಗೆದ್ದಿದ್ದಾರೆ ನಮ್ಮ ಪರಿಸರದ ಅದಿವಾಸಿ ಮಕ್ಕಳಿಗೆ ಸ್ನಾನ ಮಾಡಲು ಬಿಸಿ ನೀರಿನ ವ್ಯವಸ್ಥೆಗಾಗಿ ಸುಮಾರು17 ಲಕ್ಷಕ್ಕೂ ಮಿಕ್ಕಿ ನೀಡಿರುವರಲ್ಲದೆ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ಅನ್ನದಾತರಾಗಿ, ವಿರಾರ್, ಜವಹಾರ್,ವಸಯಿ ಪರಿಸರದ ನಾಗರಿಕರಿಗೆ ಶಿಕ್ಷಣಕ್ಕೆ ಸಹಾಯ ಮಾಡಿರುವರು ಶಾಲೆ ನಿರ್ಮಿಸುವ ಸಂದರ್ಬದಲ್ಲಿ ಬಹಳಷ್ಟು ಜನರು ತೊಂದರೆ ನೀಡಿದ್ದಾರೆ ಈ ಎಲ್ಲಾ ತೊಂದರೆಯನ್ನು ಮೆಟ್ಟಿ ನಿಂತು ಕಲ್ಯಾಣದ ಪುರ್ ರವರಿಂದ ಸುಂದರ ಶಾಲೆ ನಿರ್ಮಾಣವಾಗಿದೆ. ನಮ್ಮವರು ನೀರು, ಮಣ್ಣು, ಕಲ್ಲುಗಳನ್ನು ಮಾರಟ ಮಾಡಿ ಹಣ ಸಂಪಾದಿಸಿದ್ದಾರೆ ಅದರೆ ದಾನ ನೀಡುವ ಗುಣ ಅವರಲ್ಲಿಲ್ಲ ಈ ಎಲ್ಲಾ ಉತ್ತಮ ಗುಣಗಳು ಕನ್ನಡಿಗರಲ್ಲಿದೆ ಎಂದರು.

ಚಂದ್ರಕಾಂತ್ ಭೋಯಿರ್ ಪ್ರಸ್ತಾವಿಕ ಮಾತುಗಳನ್ನಾಡುತ್ತಾ 1958 ರಲ್ಲಿ ಪ್ರಾರಂಭವಾದ ಈ ಎರಡು ಶಾಲೆ ಮತ್ತು ಜೂನಿಯರ್ ಕಾಲೇಜ್ ನಲ್ಲಿ ಸುಮಾರು3000 ಸಾವಿರ ಮಕ್ಕಳು ವೇಳೆ ವಿದ್ಯಾರ್ಜನೆ ಮಾಡುತ್ತಿದ್ದಾರೆ ಈ ಶಾಲೆಯ ನೂತನ ಕಟ್ಟಡ ನಿರ್ಮಾಣವನ್ನು ದಾನಿಗಳಾದ ಸುರೇಂದ್ರ ಕಲ್ಯಾಣ್ ಪುರ್ ನೀಡಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ ಈ ಕಾರ್ಯಕ್ಕೆ ನಮ್ಮೊಂದಿಗೆ ಸದಾ ಸಹಕಾರ ನೀಡುತ್ತಿರುವ 108 ಮಹಾಮಂಡಲೇಶ್ವರ ನಿತ್ಯಾನಂದ ಸರಸ್ವತಿ ಸ್ವಾಮೀಜಿಗೆ ವಂದನೆಗಳು ಎಂದರು.
ಇದಕ್ಕೂ ಮೊದಲು ನಿತ್ಯಾನಂದರ ಅರತಿ ಯೊಂದಿಗೆ ವೇದಿಕೆ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ, ದೇವರಿಗೆ ಅರತಿ ಬೆಳಗಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ನೂತನ ಕಟ್ಟಡವನ್ನು 108 ಮಹಾಮಂಡಲೇಶ್ವರ ನಿತ್ಯಾನಂದ ಸರಸ್ವತಿ ಸ್ವಾಮೀಜಿ ಕಲ್ಪವೃಕ್ಷ ಒಡೆದು, ರಿಬ್ಬನ್ ಕತ್ತರಿಸಿ ಉದ್ಗಾಟಿಸಿದರು.
ಸುರೇಂದ್ರ ಕಲ್ಯಾಣ್ ಪುರ್ ರವರ ಸುಪುತ್ರ ಅಕ್ಷಯ ಕಲ್ಯಾಣ್ ಪುರ್ ಕಟ್ಟಡದ ಕೀ ಯನ್ನು ಶಾಲಾ ಟ್ರಸ್ಟಿಗಳಿಗೆ ಹಸ್ತಾಂತರಿಸಿದರು.
ವೇದಿಕೆಯ ಮೇಲೆ ದೇವೇಶ್ ಪಾಟೀಲ್, ಶ್ರೀ ನಿತ್ಯಾನಂದ ಸರಸ್ವತಿ ಸ್ವಾಮೀಜಿ, ಸುರೇಂದ್ರ ಕಲ್ಯಾಣ್ ಪುರ್, ಅಕ್ಷಯ ಕಲ್ಯಾಣ್ ಪುರ್, ಸ್ನೇಹಾ ಕಲ್ಯಾಣ್ ಪುರ್, ಅಮೃತಾ ಕಲ್ಯಾಣ್ ಪುರ್, ಬಲಿರಾಮ್ ಜಾಧವ್, ಸಾಯಿ ಪ್ಯಾಲೇಸ್ ರವಿ. ಶೆಟ್ಟಿ, ಕಿಶೋರ್ ಅವರ್ಸೆಕರ್, ತೋನ್ಸೆ ನವೀನ್ ಶೆಟ್ಟಿ,ದಿವಾಕರ್ ಶೆಟ್ಟಿ, ಜ್ನಾನನಂದ ಸರಸ್ವತಿ ಸ್ವಾಮೀಜಿ, ವಿನೋದ್ ಪಾಟೀಲ್, ರಾಮು ನಾಯಕ್,ಬಳರಾಮ್ ಬೋಯಿರ್, ರಮೇಶ್ ಜಾದವ್, ಮಂಜೀತಾ ಪಾಟೀಲ್, ದಿಲೀಪ್ ಕೆ.ಪಾಟೀಲ್, ಸುಭಾಷ್ ಎಸ್.ಪಾಟೀಲ್, ಚಂದ್ರಕಾಂತ್ ಬಿ. ಬೋಯಿರ್, ಕಥೊಡ್ ಎಲ್. ದೇಸಲ್, ಸುರೇಶ್.ಕೆ. ಪಾಟೀಲ್, ಅರುಣ್ ಪಾಟೀಲ್, ಕಥೊಡ್ ಡಿ.ಪಾಟೀಲ್ ಬಬನ್ ಶೇಠ್ ಅರ್.ಕಡ್ಬನೆ, ಹರಿಭಾವು ಎಂ.ಪಾಟೀಲ್, ಸುಭಾಷ್ ಬಿ.ಬೋಯಿರ್, ಮದುಕರ್ ಕೆ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಸಾಧನಾ ಜೋಶಿ ಕಾರ್ಯಕ್ರಮ ನಿರೂಪಿಸಿದರು ಸುಭಾಷ್ ಪಾಟೀಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ಗಣೇಶಪುರಿ, ವಜ್ರೇಶ್ವರಿ ಪರಿಸರದ ನಾಗರಿಕರು, ಶಾಲಾ ಟ್ರಸ್ಟಿಗಳು, ಹಿತೈಷಿಗಳು, ಉಡುಪಿ ಸಾಯಿರಾಧ ಡೆವಲಪರ್ಸ್ ನ ಮನೋಹರ್ ಶೆಟ್ಟಿ ಸಿಎ ಗಣೇಶ್ ಶೆಟ್ಟಿ, ಓಂದಾಸ್ ಕಣ್ಣಂಗಾರ್ ಮತ್ತಿತರರು ಉಪಸ್ಥಿತರಿದ್ದರು.

ಅಶೀರ್ವಚನ ಮತ್ತು ಉದ್ಘಾಟಕರ ಮಾತು:-
ಭಗವಾನ್ ನಿತ್ಯಾನಂದರ ತತ್ವದಂತೆ ನಡೆಯುವ ಸುರೇಂದ್ರ ಕಲ್ಯಾಣ್ ಪುರ್ ನೀಡಿದ ದಾನ ಇನ್ನೂ ಆನೇಕ ವರ್ಷಗಳ ತನಕ ಕಾಣಸಿಗಲಿದೆ. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಅದನ್ನು ಪ್ರತಿಯೊಬ್ಬರೂ ಪಡೆಯ ಬೇಕು, ಭಗವಾನ್ ನಿತ್ಯಾನಂದರು ಸಮಾಧಿ ಪಡೆದ ಈ ಪರಿಸರದ ಎಲ್ಲಾ ಶಾಲೆಗಳು ಅಭಿವೃದ್ಧಿಯಾಗ ಬೇಕಾಗಿದೆ. ನಿತ್ಯಾನಂದರ ನುಡಿಯಂತೆ ವಿಶಾಲ ಮನ್, ನಿರ್ಮಲ ಮನ್, ಈ ನುಡಿಯನ್ನು ನಾವೆಲ್ಲರೂ ನಮ್ಮಲ್ಲಿ ಅಳವಡಿಸಿ ಕೊಂಡಲ್ಲಿ ಎಲ್ಲರೂ ದಾನಶೂರರಾಗುವರು. ಈ ಶಾಲೆ ನಿತ್ಯಾನಂದರ ಪ್ರೇರಣೆಯಿಂದ ನಿರ್ಮಾಣ ಗೊಂಡಿದೆ ಸರಕಾರ ಮಾಡುವ ಕೆಲಸ ನಿತ್ಯಾನಂದರ ಭಕ್ತರಿಂದ ಅಗುತ್ತಿದೆ ಎನ್ನಲು ಅಭಿಮಾನವಾಗುತ್ತಿದೆ ಸುರೇಂದ್ರ ಕಲ್ಯಾಣ್ ಪುರ್ ಕುಟುಂಬಕ್ಕೆ ಭಗವಾನ್ ನಿತ್ಯಾನಂದರ ಸಂಪೂರ್ಣ ಅನುಗ್ರಹ ಲಭಿಸಲಿ ಕಲ್ಯಾಣ್ ಪುರ್ ಕುಟುಂಬದಿಂದ ಗಣೇಶಪುರಿ ಅಭಿವೃದ್ಧಿಯ ಕೆಲಸ ನಿರಂತ ನಡೆಯುತ್ತಿರಲಿ —-ಶ್ರೀ ಸ್ವಾಮಿ ನಿತ್ಯಾನಂದ ಸರಸ್ವತಿ ಸ್ವಾಮೀಜಿ
( 108 ಮಹಾಮಂಡಲೇಶ್ವರ ಸ್ವಾಮಿ)
ನಮ್ಮ ತಂದೆ ಮಾಡುತ್ತಿರುವ ಗುರುದೇವರ ಸಮಾಧಿ ಮಂದಿರದ ಕೆಲಸ ಕಾರ್ಯ ಹಾಗೂ ಸಮಾಜ ಸೇವೆ, ಶೈಕ್ಷಣಿಕ ಸೇವೆಗಳು ನಮಗೆ ಸ್ಪೂರ್ತಿಯಾಗಿದೆ. ನಮ್ಮ ತಂದೆಯಿಂದ ಸ್ಪೂರ್ತಿ ಪಡೆದು ಗಣೇಶಪುರಿಯಲ್ಲಿ ನಾವು ಸದಾ ಸೇವೆ ಮಾಡಲು ಬದ್ಧರಾಗಿದ್ದೇವೆ — (ಅಕ್ಷಯ್ ಕಲ್ಯಾಣ್ ಪುರ್, ಸುರೇಂದ್ರ ಕಲ್ಯಾಣ್ ಪುರ್ ರವರ ಸುಪುತ್ರ )