24.7 C
Karnataka
April 3, 2025
ಪ್ರಕಟಣೆ

ಫೆ. 25 : ಗೋರೆಗಾಂವ್ ಕರ್ನಾಟಕ ಸಂಘದ 63ನೇ ನಾಡಹಬ್ಬ, ವಿಚಾರಗೋಷ್ಠಿ, ಕೃತಿ ಬಿಡುಗಡೆ



ಮುಂಬಯಿ : 2023ರ ಗಡಿನಾಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಗೋರೆಗಾಂವ್ ಕರ್ನಾಟಕ ಸಂಘದ 63ನೇ ನಾಡಹಬ್ಬ ಸಮಾರಂಭ, ವಿಚಾರಗೋಷ್ಠಿ, ಕೃತಿ ಬಿಡುಗಡೆ ಕಾರ್ಯಕ್ರಮ ಫೆ. 25ರ ರವಿವಾರ ಬೆಳಿಗ್ಗೆ 9:30 ರಿಂದ ಸಂಜೆ 6:30 ತನಕ ಗೋರೆಗಾಂವ್ ಪೂರ್ವ ಜಯಪ್ರಕಾಶ್ ನಗರದ ನಂದಾದೀಪ ಹೈಸ್ಕೂಲ್ ಸಭಾಗೃಹ  ಇಲ್ಲಿ ಸಂಘದ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕರ್ಮ ಯೋಗಿ ಜಯ ಸುವರ್ಣ ವೇದಿಕೆಯಲ್ಲಿ ನಡೆಯಲಿರುವ ಈ ಸಮಾರಂಭದ ಉದ್ಘಾಟನೆಯು  ಅಂದು ಬೆಳಿಗ್ಗೆ 10:30ಕ್ಕೆ ನಡೆಯಲಿದ್ದು ಉದ್ಘಾಟಕರಾಗಿ ಸಾಯಿ ಪ್ಯಾಲೇಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ರವಿ ಎಸ್ ಶೆಟ್ಟಿ  ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸುರೇಖಾ ಶೆಟ್ಟಿಯವರ ’ಮುಂಬಯಿಯಲ್ಲಿ ಕನ್ನಡದ ಕಂಪು ಸೂಸುವ ಗೋರೆಗಾಂವ್ ಕರ್ನಾಟಕ ಸಂಘ’ ಕೃತಿ ಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ ಎನ್ ಉಪಾಧ್ಯ ಅವರು ಬಿಡುಗಡೆಗೊಳಿಸಲಿದ್ದಾರೆ. ತ್ರಿಕೋನ ಪಾಲಿಮರ್ಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಅನಿಲ್ ಶೆಟ್ಟಿ ಇವರು ಸಂಘದ ವಾರ್ಷಿಕ ಸಂಚಿಕೆ ’ಮುಂಬೆಳಕು’  ಬಿಡುಗಡೆಗೊಳಿಸಲಿದ್ದಾರೆ.  ಸಾಯಿಕೇರ್  ಲಾಜಿಸ್ಟಿಕ್ಸ್ ಲಿ.  ಸಿಎಂಡಿ ಸುರೇಂದ್ರ ಎ ಪೂಜಾರಿಯವರು ಅತಿಥಿ ಅಬ್ಯಾಗತರಾಗಿ ಉಪಸ್ಥಿತರಿರುವರು.

ಮಧ್ಯಾಹ್ನ 12 ರಿಂದ ’ಸಂಘ-ಸಂಸ್ಥೆಗಳಲ್ಲಿ ಯುವಕರ ಪಾತ್ರ ಅಂದು- ಇಂದು -ನಾಳೆ’ ಈ ಬಗ್ಗೆ ವಿಚಾರ ಗೋಷ್ಟಿ ನಡೆಯಲಿದ್ದು ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲತ್ತಾಡಿಯವರು  ಅಧ್ಯಕ್ಷತೆಯನ್ನು ವಹಿಸಲಿರುವರು. ಅತಿಥಿ ಅಭ್ಯಾಗತರಾಗಿ ಬಾಂಬೆ ಬಂಟ್ಸ್ ಅಸೋಷಿಯೇಶನಿನ ಅಧ್ಯಕ್ಷರಾದ ಸಿಎ ಸುರೇಂದ್ರ  ಕೆ. ಶೆಟ್ಟಿ , ಮಾಲಾಡ್ ಕನ್ನಡ ಸಂಘದ ಅಧ್ಯಕ್ಷರಾದ ನ್ಯಾ.  ಜಗದೀಶ್ ಹೆಗ್ಡೆ ಆಗಮಿಸಲಿರುವರು.  ಉಪನ್ಯಾಸಕರಾಗಿ ಮೊಗವೀರ ಮಾಸಪತ್ರಿಕೆಯ ಸಂಪಾದಕ ಅಶೋಕ್ ಸುವರ್ಣ, ಅಕ್ಷಯ ಮಾಸಪತ್ರಿಕೆಯ ಸಂಪಾದಕ ಹರೀಶ್ ಹೆಜ್ಮಾಡಿ,  ಉದಯವಾಣಿ ಯ ಉಪಮುಖ್ಯ ಸಹಾಯಕ ಸಂಪಾದಕರಾದ ಡಾ. ದಿನೇಶ್ ಶೆಟ್ಟಿ ರೇಂಜಾಳ ಪಾಲ್ಗೊಳ್ಳಲಿರುವರು.

ಸಂಜೆ 3.45 ಕ್ಕೆ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಅತಿಥಿ ಅಭ್ಯಾಗತರಾಗಿ ಭಾರತ್ ಬ್ಯಾಂಕ್ ನ  ಕಾರ್ಯಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಒಕ್ಕಲಿಗ ಸಂಘ ಮಹಾರಾಷ್ಟ್ರದ  ನಿಕಟಪೂರ್ವ ಅಧ್ಯಕ್ಷ ಜಿತೇಂದ್ರ ಜೆ ಗೌಡ, ಜನಪ್ರಿಯ ವೈದ್ಯ ಡಾ. ಗೌತಮ್ ಎಂ ಶೆಟ್ಟಿ,  ಹೆಚ್ ಡಿ ಎಫ್ ಸಿ ಬ್ಯಾಂಕಿನ ಹಿರಿಯ ಉಪಾಧ್ಯಕ್ಷ ಶಂಕರ್ ಕೋಟ್ಯಾನ್  ಆಗಮಿಸಲಿರುವರು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಸಾಧಕರನ್ನು ಗೌರವಿಸಲಾಗುವುದು.

ದಿನಪೂರ್ತಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ  ಸಂಘದ ಉಪವಿಭಾಗಗಳು ಮತ್ತು ಮುಂಬೈಯ ವಿವಿಧ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಯ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಸಂಘದ ಮಹಿಳಾ ಸದಸ್ಯರಿಂದ ’ಶ್ರೀ ಕೃಷ್ಣ ರಾಯಭಾರ” ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಭಾಗವತಿಗೆ ಶ್ರೀಮತಿ ಜಯಲಕ್ಷ್ಮಿ ದೇವಾಡಿಗ , ನಿರ್ದೇಶನ ವಾಸುದೇವ ಮಾರ್ನಾಡು, ಚೆಂಡೆ ಹರೀಶ್ ಸಾಲ್ಯಾನ್ ಮತ್ತು  ಆಶೀಷ್ ದೇವಾಡಿಗ, ಅರ್ಥದಾರಿಗಳು ಶ್ರೀಮತಿ ರಮಾದೇವಿ, ಶ್ರೀಮತಿ ಲೀಲಾ ಗಣೇಶ್ ಪೂಜಾರಿ, ಶ್ರೀಮತಿ ವಾಣಿ ಶೆಟ್ಟಿ,  ಶ್ರೀಮತಿ ವಿಜಯಲಕ್ಷ್ಮಿ ಪೂಜಾರಿ,  ಪ್ರಕಾಶ್ ಪಣಿಯೂರು,  ವಾಸುದೇವ ಮಾರ್ನಾಡು, ನಾಗೇಶ್ ಪೊಳಲಿ.

ಈ ಕಾರ್ಯಕ್ರಮಕ್ಕೆ ಸಂಘದ ಎಲ್ಲಾ ಸದಸ್ಯರು ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಗೊರೆಗಾಂವ್ ಕರ್ನಾಟಕ ಸಂಘದ ಪರವಾಗಿ ಅಧ್ಯಕ್ಷರಾದ ನಿತ್ಯಾನಂದ ಡಿ ಕೋಟ್ಯನ್,  ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್,  ಗೌ. ಕೋಶಾಧಿಕಾರಿ  ಎಂ ಆನಂದ ಶೆಟ್ಟಿ, ಪಾರುಪತ್ಯಗಾರರಾದ ಮುಂಡ್ಕೂರು ಸುರೇಂದ್ರ  ಸಾಲ್ಯಾನ್ ,  ಜಿ ಟಿ ಆಚಾರ್ಯ,  ದೇವಲ್ಕುಂದ ಭಾಸ್ಕರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಮತ್ತು ಉಪಸಮಿತಿಗಳ ಎಲ್ಲಾ ಪದಾಧಿಕಾರಿಗಳೂ ಮತ್ತು ಸದಸ್ಯರು ವಿನಂತಿಸಿದ್ದಾರೆ.

Related posts

ಡಿ.18 ರಂದು ಬಂಟರ ಸಂಘ ಕುರ್ಲಾ ದಲ್ಲಿ ಸಮಾಜರತ್ನ ಲೀಲಾಧರ ಶೆಟ್ಟಿ, ಕಾಪು ಅವರ ಶ್ರದ್ಧಾಂಜಲಿ ಸಭೆ

Mumbai News Desk

ಫೆ 29 ರಿಂದ ಮಾ 2 ರ ವರಗೆ ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ

Mumbai News Desk

ಮೈಸೂರು ಅಸೋಸಿಯೇಷನ್,  ಮುಂಬಯಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ*

Mumbai News Desk

ಕರ್ನಾಟಕ ಸಂಘ ಡೊಂಬಿವಲಿ – ಲಲಿತ ಕಲಾ ವಿಭಾಗದ ವತಿಯಿಂದ ಭಜನಾ ಸ್ಪರ್ಧೆ ಹಾಗೂ ಕುಣಿತ ಭಜನಾ ಸ್ಪರ್ಧೆಗೆ ಆಹ್ವಾನ

Mumbai News Desk

ನಾಳೆ (ಆ. 25)ಚಿತ್ರಾಪು ಕೆ.ಎಮ್.ಕೋಟ್ಯಾನ್ ಅಭಿನಂದನಾ ಸಮಾರಂಭ.

Mumbai News Desk

ಡಿ.17 ರಿಂದ 21 ರ ವರಗೆ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ.

Mumbai News Desk