April 2, 2025
ಮುಂಬಯಿ

ತುಳು ಸಂಘ ಬೊರಿವಲಿ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ

ಅರಸಿನ ಕುಂಕುಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ಕರುಣಾಕರ ಎಂ. ಶೆಟ್ಟಿ

ಮುಂಬಯಿ : ನಮ್ಮ ತುಳು ನಾಡು ಶ್ರೀಮಂತ ಸಂಸ್ಕೃತಿಯನ್ನು ಹೊಂದಿಕೊಂಡಿದ್ದು ಹೊರನಾಡಲ್ಲಿ ನಮ್ಮ ತುಳು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮವು ನಮ್ಮವರಿಂದ ನಿರಂತರವಾಗಿ ನಡೆಯುತಿರುವುದು ನಿಜಕ್ಕೂ ಪ್ರಶಂಸನೀಯ ತುಳು ಸಂಘ ಬೊರಿವಲಿ ಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿ ಯವರು ನುಡಿದರು.

ತುಳು ಸಂಘ ಬೊರಿವಲಿ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. ೧8 ರಂದು ಮಹಿಷ ಮರ್ಧಿನಿ ದೇವಸ್ಥಾನ, ಜಯರಾಜ್ ನಗರ, ಬೊರಿವಲಿ(ಪ), ಇಲ್ಲಿ ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಅವರು ನಮ್ಮ ಸಂಘವು ತುಳು ಬಾಷೆ ಸಂಸ್ಕೃತಿಯನ್ನು ಉಳಿಸಲು ಆರಂಭದಿಂದಲೇ ಹಲವಾರು ಸಮಾಜಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಹಿಳಾ ವಿಭಾಗದ ವತಿಯಿಂದ ಪ್ರತೀ ವರ್ಷ ಅರಸಿನ ಕುಂಕುಮ ಕಾರ್ಯಕ್ರಮ ನಡೆಯುತ್ತಿದ್ದು ಪರಿಸರದ ತುಳು ಕನ್ನಡ ಮಹಿಳೆಯರು ಒಂದಾಗುತ್ತಿರುವುದು ಅಭಿನಂದನೀಯ ಎನ್ನುತ್ತಾ ಸಂಘದ ಚಟುವಟಿಕೆಗಳ ಬಗ್ಗೆ ಮಾಯಿತಿಯಿತ್ತರು. 

ಹಿರಿಯ ಸಾಹಿತಿ ಸೀಮಂತೂರು ಚಂದ್ರಹಾಸ  ಸುವರ್ಣ ಮಾತನಾಡುತ್ತಾ ಯುವ ಜನಾಂಗವು ತುಳು ಭಾಷೆಯನ್ನು ಕಲಿಯುವಂತಾಗಲು ಅವರಿಗೆ ಹಿರಿಯರು ಪ್ರೋತ್ಸಾಹಿಸಬೇಕು. ತುಳು  ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯ ಇದೆ. ಇದಕ್ಕಾಗಿ ಯುವ ಜನಾಂಗಕ್ಕೆ ತುಳು ಬಾಷೆಯನ್ನು ಕಲಿಯಲು ಪ್ತೋತ್ಸಾಹಿಸಬೇಕಾರಿದೆ ಎಂದರು. 

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದೇವಾಡಿಗ ಸಂಘ ಮುಂಬಯಿಯ  ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರತಿಭಾ ಗಣೇಶ್ ದೇವಾಡಿಗ ಅವರು ಈ ಸಂದರ್ಭದಲ್ಲಿ ಮಾತನಾಡಿ ಹಳದಿ ಕುಂಕುಮದ ಮಹತ್ವದ  ಬಗ್ಗೆ  ಮಾಹಿತಿಯಿತ್ತು ಕಾರ್ಯಕ್ರಮಕ್ಕೆ ಶುಭ ಕೋರಿದರು. 

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ ಎಲ್ಲರನ್ನು ಸ್ವಾಗತಿಸಿ ಮಹಿಳಾ ವಿಭಾಗದ ಚಟುವಟಿಕೆಗಳ ಬಗ್ಗೆ ತಿಳಿಸಿದರು.

ಮಹಿಷ ಮರ್ಧಿನಿ ದೇವಸ್ಥಾನದ ಕಾರ್ಯನಿರ್ವಾಹಕ ಟ್ರಷ್ಟಿ ಪ್ರದೀಪ್ ಎಸ್. ಶೆಟ್ಟಿ, ಉಷಾ ಗೋಪಾಲ್ ಶೆಟ್ಟಿ, ರತಿ ಶಂಕರ್ ಶೆಟ್ಟಿ ಮೊದಲಾದವರನ್ನು ಗೌರವಿಸಲಾಯಿತು.  

ಪ್ರಾರಂಭದಲ್ಲಿ ಮಹಿಳಾ ಸದಸ್ಯರಿಂದ ಭಜನೆ, ಸಭಾ ಕಾರ್ಯಕ್ರಮದ ನಂತರ ಉಪಸ್ಥಿತರಿದ್ದ ಎಲ್ಲಾ ಮಹಿಳೆಯರು ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಬಾಗವಹಿಸಿದರು. ತುಳು ಸಂಘದ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ, ಉಪಾದ್ಯಕ್ಷರಾದ ಹರೀಷ್ ಮೈಂದನ್, ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ,  ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಕುಸುಮಾ ಶೆಟ್ಟಿ, ಸವಿತ ಶೆಟ್ಟಿ, ಕಸ್ತೂರಿ ಶೆಟ್ಟಿ, ಶೋಭಾ ಶೆಟ್ಟಿ ಹಾಗೂ ಸಮಿತಿಯ ಮತ್ತು ಉಪಸಮಿತಿಗಳ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗ ದನ್ಯವಾದ ಸಮರ್ಪಿಸಿದರು.

Related posts

ಶ್ರೀ ರಜಕ ಸಂಘ ಮುಂಬಯಿಯ 85ನೇ ವಾರ್ಷಿಕ ಮಹಾಸಭೆ

Mumbai News Desk

ಕನ್ನಡ ಕಲಾ ಸಮಾಜ (ರಿ) ಮುಂಬಾಯಿ*(ಕೋಟೆ) ಇದರ ಸದಸ್ಯರಿಂದ ಸ್ನೇಹ ಸಮ್ಮಿಲನ “-

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ  ನಿಧಿ ಸಂತೋಷ್ ಶೆಟ್ಟಿ, ಗೆ ಶೇ 91.80 ಅಂಕ.

Mumbai News Desk

ತುಳು ಸಂಘ ಬೊರಿವಲಿ ; ವಾರ್ಷಿಕ ವಿಹಾರ ಕೂಟ

Mumbai News Desk

ಮುಂಬಯಿ : ಹೋಟೆಲ್ ಉದ್ಯಮಿಗೆ ಕೊಲೆ ಬೆದರಿಕೆ ಗ್ಯಾಂಗ್ ಸ್ಟರ್ ಡಿ. ಕೆ ರಾವ್ ಬಂಧನ

Mumbai News Desk

ಬಿಲ್ಲವರ  ಎಸೋಸಿಯೇಶನ್, ಮುಂಬಯಿ ಇದರ 2024-27ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ, ಹರೀಶ್ ಜಿ. ಅಮೀನ್, ನೇತೃತ್ವದ ಸ್ವಾಭಿಮಾನಿ ಬಿಲ್ಲವವರು ಬಣಕ್ಕೆ ಜಯ

Mumbai News Desk