
ಗಜಲ್ ಸಂಗೀತದ ಮೂಲಕ ಜನಪ್ರಿಯತೆಯನ್ನು ಪಡೆದಿದ್ದ ಖ್ಯಾತ ಗಾಯಕ ಪಂಕಜ್ ಉಧಾಸ್ (72 ವರ್ಷ) ಇಂದು (ಫೆ.26)ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದೀರ್ಘ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಗಜಲ್ ಗಾಯಕರಾಗಿ ತನ್ನ ತನ್ನ ವೃತ್ತಿ ಜೀವನ ಆರಂಭಿಸಿದ ಅವರು ಅಲ್ಪ ಕಾಲದಲ್ಲಿ, ತನ್ನ ಕಂಠ ಸಿರಿಯ ಮೂಲಕ ಸಂಗೀತ ಪ್ರಿಯರನ್ನು ಆಕರ್ಷಿಸಿದ್ದರು.
1980 ರಲ್ಲಿ ಅವರು ಹೊರ ತಂದ “ಅಹಟ್ ” ದ್ವನಿ ಸುರುಳಿ ಅವರಿಗೆ ಮತ್ತಷ್ಟು ಖ್ಯಾತಿ ತಂದಿತು.
ಮಹೇಶ್ ಭಟ್ ಅವರ “ನಾಮ್” ಚಿತ್ರದ ಚಿಟ್ಟಿ ಆಯಿ ಹೈ,…. ಗೀತೆ ಹಿಟ್ ಆದ ಬಳಿಕ ಅನೇಕ ಬಾಳಿವುಡ್ ಸೂಪರ್ ಹಿಟ್ ಹಾಡುಗಳಿಗೆ ದ್ವನಿ ನೀಡಿದ್ದರು.
ಅವರ ಸಾಧನೆಯನ್ನು ಗುರುತಿಸಿದ ಭಾರತ ಸರಕಾರ ಅವರಿಗೆ 2006 ರಲ್ಲಿ ಪದ್ಮ ಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.
ಕನ್ನಡ ಚಿತ್ರ ರಂಗದ ಸೂಪರ್ ಸ್ಟಾರ್ ಸುಧೀಪ್ ಅವರ “ಸ್ವರ್ಶ” ಚಿತ್ರದ “ಬರೆಯದ ಮೌನದ ಕವಿತೆ” ಹಾಗೂ “ಚಂದಕ್ಕಿಂತ ಚಂದ ನೀನೇ ಸುಂದರ” ಗೀತೆಗಳು ಉಧಾಸ್ ಅವರ ಕಂಠದಲ್ಲಿ ಉತ್ತಮವಾಗಿ ಮೂಡಿಬಂದಿತ್ತು.
ಅವರ ನಿಧನಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು, ಕರುನಾಡಿನ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.