
ಡೊಂಬಿವಲಿ ಫೆ 23: ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ ಡೊಂಬಿವಲಿ ಸ್ಥಳೀಯ ಸಮಿತಿ ಕುಂದರಂಜನಿ – 2024 ಕಾರ್ಯಕ್ರಮವು ರವಿವಾರ ದಿನಾಂಕ 03-03-2024 ರಂದು ಸಂಜೆ 4.00 ಗಂಟೆಗೆ ಸರಿಯಾಗಿ ಡೊಂಬಿವಲಿ ಪೂರ್ವದ ದತ್ತ ನಗರದ ಡಿ.ಎನ್.ಸಿ ರಸ್ತೆಯಲ್ಲಿರುವ ಲೇವಾ ಭವನದಲ್ಲಿ ಜರಗಲಿದೆ.

ಸಂಘದ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಇವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಆರ್. ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಎಮ್. ಕುಂದರ್ ಉಪಸ್ಥಿತಿತರಿರುವರು ಅತಿಥಿಗಳಾಗಿ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ಬಂಟರ ಸಂಘ ಮುಂಬಯಿ ಇದರ ಪೂರ್ವ ವಲಯದ ಸಮನ್ವಯಕರಾದ ಸುಕುಮಾರ್ ಎನ್. ಶೆಟ್ಟಿ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಡಿ. ಶೆಟ್ಟಿ ಎಕ್ಕಾರ್ , ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಡೊಂಬಿವಲಿ ಶಾಖೆಯ ಮಾಜಿ ಕಾರ್ಯಾಧ್ಯಕ್ಷ ಯಧುವೀರ್ ಪುತ್ರನ್, ಜಗಜ್ಯೋತಿ ಕಲಾವೃಂದ ಮುಂಬಯಿ ಇದರ ಅಧ್ಯಕ್ಷ ರಮೇಶ್ ಎ. ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ ಮಾಜಿ ಅಧ್ಯಕ್ಷ ರಮೇಶ ಬಂಗೇರ ಉಪಸ್ಥಿತರಿರುವರು

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೂಜಾ ನೃತ್ಯ ಹಾಗೂ ನೃತ್ಯ ವೈಭವ ಜರಗಲಿದ್ದು ವಿಶೇಷ ಅಕರ್ಷಣೆಯಾಗಿ ಕುಂದ ಕನ್ನಡದ ಕುಂದ ರಂಜನೀಯ ಹಾಸ್ಯ ರಸಾಯನ ನ್ಯೆಗಿ ನಾಗಣ್ಣ ಖ್ಯಾತಿಯ ನಾಗರಾಜ ಮೊಗವೀರ ತೆಕ್ಕಟ್ಟೆ ಸಾರಥ್ಯದ ಕಲಾಶಕ್ತಿ ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ಕೊಪ್ಪರಿಗೆ ಜರಗಲಿದೆ.

ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಹಿತೈಷಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸ ಬೇಕೆಂದು ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಇದರ ಗೌ.ಪ್ರ.ಕಾರ್ಯದರ್ಶಿ ಗಣೇಶ್ ಮೆಂಡನ್, ಗೌ.ಪ್ರ ಕೋಶಾಧಿಕಾರಿ ಸತೀಶ್ ಶ್ರಿಯಾನ್, ಡೊಂಬಿವಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್ ಎನ್. ಕಾಂಚನ್, ಕಾರ್ಯಾದ್ಯಕ್ಷ ರಾಜು ಎ. ಮೊಗವೀರ, ಕಾರ್ಯದರ್ಶಿ ಸಂತೋಷ್ ಪುತ್ರನ್, ಶೇಖರ್ ಎಸ್.ನಾಯ್ಕ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶ್ರಿಯಾನ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಕೇಂದ್ರ ಕಾರ್ಯಾಲಯ ಕುಂದಾಪುರ,ಮೀರಾ ರೋಡ್ , ಥಾಣೆ ಸ್ಥಳೀಯ ಸಮಿತಿ ಮತ್ತು ಮಹಿಳಾ ವಿಭಾಗದ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.