
ವಿಜಯ ಕಾಲೇಜಿ ವಿದ್ಯೆಯನ್ನು ನೀಡಿದ ಅಲ್ಲ ಬದುಕು ರೂಪಿಸಲು ದಾರಿ ತೋರಿದೆ, ,:ಮೋಹನ್‌ದಾಸ್ ಹೆಜ್ಜಾಡಿ
ಚಿತ್ರ ವರದಿ ದಿನೇಶ್ ಕುಲಾಲ್
ಮುಂಬಯಿ, ಮಾ. 4: ವಿಜಯಾ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿ ಯೇಶನ್ ಮುಂಬಯಿ ವಾರ್ಷಿಕ ಸ್ನೇಹ ಸಮ್ಮಿ ಲನವು ಮಾ. 2ರಂದು ಸಂಜೆ ಸಾಕಿನಾಕ ದಲ್ಲಿರುವ ಮುಂಬಯಿ ಮೆಟ್ರೋ ಹೋಟೇಲ್‌ನಲ್ಲಿ ಅಸೋಸಿ ಯೇಶನ್ ಮುಂಬಯಿ ಗೌರವಾಧ್ಯಕ್ಷ ಆನಂದ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅಸೋಸಿಯೇಷನ್ನ ಅಧ್ಯಕ್ಷ ವಾಸುದೇವ್ ಎಂ. ಸಾಲ್ಯಾನ್ ಮುಲ್ಕಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು,
ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ಡಾ|ಶ್ರೀಮಣಿ ಶೆಟ್ಟಿ, ವಿಜಯಾ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಗ್ಲೋಬಲ್ ಅಸೋ ಸಿಯೇಶನ್ ಮುಂಬಯಿ ಉಪಾ ಧ್ಯಕ್ಷ ನ್ಯಾಯವಾದಿ ಶೇಖರ್ ಎಸ್. ಭಂಡಾರಿ, ಗೌರವ ಪ್ರಧಾನ ಕಾರ್ಯ ದರ್ಶಿ ಭಾಸ್ಕರ್ ಬಿ. ಶೆಟ್ಟಿ ಗೌರವ ಪ್ರಧಾನ ಕೋಶಾಧಿಕಾರಿ ಸಿಎ ರೋಹಿತಾಕ್ಷ ದೇವಾಡಿಗ ಉಪಸ್ಥಿತಿಯಿದರು,
ಇದೇ ಸಂದರ್ಭ ಕಾಲೇಜಿನಹಳೆ ವಿದ್ಯಾರ್ಥಿಗಳಗಿ ಮುಂಬೈ ನಗರದಲ್ಲಿ ಸಾಧನೆ ಮಾಡಿರುವ ಹೋಟೆಲ್ ಉದ್ಯಮಿ ಐಕಳ ವಿಶ್ವನಾಥ ಶೆಟ್ಟಿ. ಭಾರತ ಬ್ಯಾಂಕಿನ ನಿವೃತ್ತ ಉನ್ನತ ಅಧಿಕಾರಿ ಮೋಹನ್‌ದಾಸ್ ಹೆಜ್ಜಾಡಿ ಜಯಶ್ರೀ ಮೋಹನ್ ದಾಸ್ , ಉದ್ಯಮಿ ಶಶಿಕಾಂತ್ ಕೋಟ್ಯಾನ್, ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ವಾಗ್ಗೇವಿ ಕಾಂಚನ್ ಅವರಿಗೆ ವಿಶೇಷ ಸಾಧಕ ಗೌರವಿಸಲಾಯಿತು,

ಸನ್ಮಾನವನ್ನು ಸ್ವೀಕರಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ,ಭಾರತ ಬ್ಯಾಂಕಿನ ನಿವೃತ್ತ ಉನ್ನತ ಅಧಿಕಾರಿ ಮೋಹನ್‌ದಾಸ್ ಹೆಜ್ಜಾಡಿ ಮಾತನಾಡುತ್ತಾ ನಮ್ಮ ಕಾಲದ ವಿದ್ಯಾರ್ಥಿಗಳಿಗೂ ಈಗಿನ ವಿದ್ಯಾರ್ಥಿಗಳಿಗೂ ಬಹಳಷ್ಟು ವ್ಯತ್ಯಾಸಗಳು ಇದೆ ಯಾಕೆಂದರೆ ನಮ್ಮ ಕಾಲದ ವಿದ್ಯಾರ್ಥಿಗಳೆಲ್ಲರೂ ಸಾಧನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಮುಂಬೈ ಬಂಟರ ಸಂಘದಲ್ಲಿ ನಾಲ್ಕು ಮಂದಿ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ ಅದು ಸಾಮಾನ್ಯ ಕಾರ್ಯವಲ್ಲ ಅವರ ಸಂಘಟನಾ ಚತುರತೆ ಮತ್ತು ಕಾಲೇಜು ಜೀವನದ ಆದರ್ಶ ಅವರಿಗೆ ಶಕ್ತಿ ತುಂಬಿದೆ, ವಿಜಯ ಕಾಲೇಜಿ ನಮ್ಮ ಬದುಕನ್ನು ಯಶಸ್ವಿಗೊಳಿಸುವಲ್ಲಿ ಮಾರ್ಗದರ್ಶನವಾಗಿದೆ, ವಿಜಯ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಮುಂಬೈ ನಗರಕ್ಕೆ ಬಂದ ನಂತರ ನನಗೆ ಜೀವನದ ಬದುಕು ಕಟ್ಟುವುದಕ್ಕೆ ದಾರಿಯಾಗಿದ್ದು ಭಾರತ್ ಬ್ಯಾಂಕ್ ,ಈಎರಡು ಸಂಸ್ಥೆಗಳು ನನಗೆ ಮಂದಿರವಿದ್ದಂತೆ ಅದನ್ನು ಸದಾ ನೆನಪಿಸುತ್ತೇನೆ, ವಿಜಯ ಕಾಲೇಜಿ ಕೇವಲ ನನಗೆ ವಿದ್ಯೆಯನ್ನು ನೀಡಿದ ಅಲ್ಲ ಬದುಕು ರೂಪಿಸಲು ದಾರಿ ತೋರಿದೆ, ಭಾರತ್ ಬ್ಯಾಂಕ್ ನನ್ನ ಯಶಸ್ಸಿಗೆ ಸಹಕರಿಸಿದ, ಇತ್ತೀಚೆಗೆ ನಾವು ಕಾಲೇಜಿಗೆ ಭೇಟಿ ನೀಡಿದ್ದೆವು ಅಲ್ಲಿಯ ವ್ಯವಸ್ಥೆಗಳು ಬಹಳ ಸಂತೋಷವನ್ನು ನೀಡಿದೆ 60ನೇ ವರ್ಷದ ಸಂಭ್ರಮದಲ್ಲಿರುವ ವಿಜಯ ಕಾಲೇಜಿಗೆ ನನ್ನ ಬ್ಯಾಚಿನ ವಿದ್ಯಾರ್ಥಿಗಳೆಲ್ಲರೂ ಸೇರಿ ಸುಮಾರು ಒಂದು ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದರು,

ಮತ್ತೋರ್ವ ಸನ್ಮಾನಿತ ಉದ್ಯಮಿ ಐಕಳ ವಿಶ್ವನಾಥ ಶೆಟ್ಟಿ ಕೃತಜ್ಞತೆ ಸಲ್ಲಿಸುತ್ತಾ ಅಸೋಸಿಯೇಷನ್ ಅಧ್ಯಕ್ಷ ವಾಸುದೇವ ಸಾಲಿಯನ್ ಮತ್ತು ನಾನು ಇಬ್ಬರು ಒಂದೇ ತರಗತಿಯಗಿದ್ದೆವು, ಹಳೆ ವಿದ್ಯಾರ್ಥಿಗಳನ್ನು ನೋಡುವ ಇದೊಂದು ಒಳ್ಳೆಯ ಸೌಭಾಗ್ಯವಾಗಿದೆ, ಕಾಲೇಜ್ ದಿನಗಳನ್ನು ಮತ್ತೆ ನೆನಪಿಸುವಂತಾಗಿದೆ ಈ ಅಸೋಸಿಯೇಷನ್ ಸೇವಾ ಕಾರ್ಯಕ್ಕೆ ನನ್ನ ಸದಾ ಸಹಕಾರವಿದೆ ಎಂದು ನುಡಿದರು,
ಅಂತರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ ವಾಗ್ಗೇವಿ ಕಾಂಚನ್ ಸನ್ಮಾನಕ್ಕೆ ಉತ್ತರಿಸುತ್ತಾ ಬಾಲ್ಯದಲ್ಲಿ ತ್ರೋಬಾಲ್ ಆಟದಲ್ಲಿ ಆಸಕ್ತಿಯನ್ನು ಹೊಂದಿದ್ದ ನಾನು ವಿಜಯ ಕಾಲೇಜಿನಲ್ಲಿ ರಾಜ್ಯಮಟ್ಟ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡೆ ಇದೀಗ ಮುಂಬೈಯ ಎಲ್ಲಿ ಕೂಡ ನನ್ನ ಕ್ರೀಡಾ ಸ್ಪೂರ್ತಿ ಕಡಿಮೆಯಾಗಿಲ್ಲ ದೇಶದ ತ್ರೋಬಾಲ್ ಕ್ಯಾಪ್ಟನ್ ಆಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲು ವಿಜಯ ಕಾಲೇಜು ಕಾರಣ, ಕ್ರೀಡಾಂಗಣದಲ್ಲಿ ಆಡುವುದೆ ನನ್ನ ಬದುಕಾಗಿದೆ, ಈ ಸಂತೋಷದ ಕ್ಷಣ ಜೀವನದಲ್ಲಿ ಸದಾ ನೆನಪಿಸುತ್ತದೆ ಎಂದು ನುಡಿದರು,
ಸನ್ಮಾನಿತರನ್ನು ಸುನಿಲ್ ಶೆಟ್ಟಿ , ಸಿಎ ಕಿಶೋರ್ ಸುವರ್ಣ, ಸ್ವರ್ಣ ಜ್ಯೋತಿ, ಶಶಿಧರ್ ಬಂಗೇರ ಪರಿಚಯಿಸಿದರು,
ಸನ್ಮಾನಿತರನ್ನು ಗೌರವಿಸುವಾಗ ಭಾಸ್ಕರ್ ಎಮ್ ಸಾಲ್ಯಾನ್, ರಂಜನ್ ಶೆಟ್ಟಿ, ಲಾರೆನ್ಸ್ ಡಿ ಸೋಜಾ, ಕಿಶೋರ್ ಚೌಟ, ಸಿಎ ಶಂಕರ್ ಶೆಟ್ಟಿ, ಸಿಎ ಸೋಮನಾಥ್ ಕುಂದರ್,, ಅಶೋಕ್ ದೇವಾಡಿಗ ,ಸಿಎ ಲೀಲಾಧರ್, ಅಶೋಕ್ ಶೆಟ್ಟಿ ಕಲ್ನಾಡು, ಕೆ ಎನ್ ಸುವರ್ಣ, ಪೇಟೆಮನೆ ಪ್ರಕಾಶ್ ಶೆಟ್ಟಿ, ರವೀಂದ್ರ ಪುತ್ರನ್, ರತ್ನಾ ಶೆಟ್ಟಿ , ಸುರೇಶ್ ಬಿ ಶೆಟ್ಟಿ ಪಾಲ್ಗೊಂಡಿದ್ದರು
ಕಾರ್ಯಕ್ರಮವನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಪತ್ರಕರ್ತ ಹರೀಶ್ ಹೆಜಮಾಡಿ ನಿರೂಪಿಸಿದರು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಶಿಧರ್ ಬಂಗೇರ ಮಟ್ಟು ನಿರ್ವಹಿಸಿದ್ದರು, ಗೌರವ ಪ್ರಧಾನ ಕಾರ್ಯ ದರ್ಶಿ ಭಾಸ್ಕರ್ ಬಿ. ಶೆಟ್ಟಿ ಧನ್ಯವಾದ ನೀಡಿದರು,
——————–