
ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಸೇವೆಗಳು ನಡೆಯುವಂತಾಗಲಿ: ಮಾಜಿ ಸಚಿವ ನಾರಾಯಣ್ ಗೌಡ
ಮುಂಬಯಿ ಮಾ . ಮಲಾಡ್ ಪೂರ್ವ ಕನ್ನಡಿಗರು ಸ್ಥಾಪಿಸಿರುವ ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆ ಯ 12ನೆಯ ವಾರ್ಷಿಕ ಶ್ರೀ ಚಾಮುಂಡೇಶ್ವರಿಯ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮಗಳು ಪೆ 23. ನೇ ಶುಕ್ರವಾರ ಮಲಾಡ್ ಪೂರ್ವ ದ ವೇದಮೂರ್ತಿ ಸತೀಶ್ ಭಟ್ ಇವರ ಪೌರೋಹಿತ್ಯದಲ್ಲಿ ಶಿವಾಜಿ ಚೌಕ್, ದತ್ತರಿ ರೋಡ್, ಮಾಲಾಡ್ (ಪೂ.) ಇಲ್ಲಿ ನಡೆಯಿತು,

ಅಂದುಸಂಜೆ ಸಾರ್ವಜನಿಕ ಪ್ರಾರ್ಥನೆ, ಗಣಪತಿ ಪೂಜಾ, ನವಗ್ರಹ ಶಾಂತಿ , ಶನಿಶಾಂತಿ. ಚಾಮುಂಡೇಶ್ವರಿ ಪ್ರಿತಾರ್ಥ ಚಂಡಿಕಾ ಹವಣ, ಕುಮಾರಿಕ ಪೂಜಾ. ರಾತ್ರಿ ಮಹಿಳಾ ಸದಸ್ಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು,
ರಾತ್ರಿ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಭಜನಾ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು ಅನಂತರ ವೇದಮೂರ್ತಿ ಸತೀಶ್ ಭಟ್ ಅವರಿಂದ ಚಾಮುಂಡೇಶ್ವರಿ ಮಹಾ ಮಂಗಳಾರತಿ, ನಡೆಯಿತು ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು,

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಸಚಿವ ನಾರಾಯಣಗೌಡ ಆಗಮಿಸಿ ಆಗಮಿಸಿದ್ದರು ಅವರನ್ನು ಸಮಿತಿಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ನಾರಾಯಣ್ ಗೌಡ ಅವರು ಈ ಪರಿಸರದಲ್ಲಿ ಕನ್ನಡಿಗರು ಧಾರ್ಮಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಒಗ್ಗಟ್ಟಾಗಿ ಬೆಳೆಯುತ್ತಿದ್ದಾರೆ ಕನ್ನಡಿಗರಿಗೆ ವಿವಿಧ ರೀತಿಯ ಸಹಕಾರವನ್ನು ನೀಡಲು ಈ ಸಂಸ್ಥೆ ಇನ್ನಷ್ಟು ಸಾಮಾಜಿಕ ಸೇವೆಯನ್ನು ಮಾಡುವಂತಹ ಆಗಲಿ ಎಂದು ಹರಸಿದರು,
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಮಾಜದ ಮುಖಂಡರಾದ ರಂಗಪ್ಪ ಗೌಡರು , ಕೆ ಕೃಷ್ಣ ಗೌಡ್ರು,, ಜಿತೇಂದ್ರ ಗೌಡ ಮತ್ತಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಕೆ ಆರ್ ಪೇಟೆ ,ಚನ್ನರಾಯಪಟ್ಟಣ, ಮೈಸೂರು ಮತ್ತಿತರ ಪ್ರದೇಶದ ಮುಂಬೈಯಲ್ಲಿ ವಾಸ್ತವಿರುವ ಕನ್ನಡಿಗರು ಪಾಲ್ಗೊಂಡಿದ್ದರು ,
ಪೂಜೆಯಲ್ಲಿ ಪಾಲ್ಗೊಂಡ ವಿಶೇಷ ಗಣ್ಯರಿಗೆ ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆ ಯ ಅಧ್ಯಕ್ಷ ಕುಮಾರ್ ಗೌಡ, ಉಪಾಧ್ಯಕ್ಷ ಮಂಜುನಾಥ್ ಗೌಡ, ಕಾರ್ಯದರ್ಶಿ ನಾಗರಾಜ್ ಗೌಡ, ಕೋಶಧಿಕಾರಿ ನವೀನ್ ಕುಮಾರ್ ಗೌಡ, ಮತ್ತಿತರ ಸದಸ್ಯರು ಗೌರವಿಸಿದರು,