
ಅಂಧೇರಿ ಪೂರ್ವ ಜೆರಿಮರಿಯ ಶ್ರೀ ಕ್ಷೇತ್ರ ಉಮಾಮಹೇಶ್ವರಿ ದೇವಾಸ್ಥಾನದ ವರ್ಷಾವಧಿ ಉತ್ಸವವು ಮಾರ್ಚ್ 9ರಿಂದ ಮಾ.10ರ ತನಕ ವೇದಮೂರ್ತಿ ಜಾರ್ಕಳ ಶ್ರೀಪ್ರಸಾದ ತಂತ್ರಿ ಮತ್ತು ಪ್ರಧಾನ ಅರ್ಚಕರಾದ ಎಸ್. ಎನ್. ಉಡುಪ ಅವರ ನೇತೃತ್ವದಲ್ಲಿ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು :
ಮಾ.9ಕ್ಕೆ ಬೆಳ್ಳಿಗೆ 8ರಿಂದ 12ರ ತನಕ ಶ್ರೀ ಉಮಾ ಮಹೇಶ್ವರಿ ಅಮ್ಮನವರಿಗೆ ಕಲಶಾಭಿಷೇಕ, ಪ್ರಧಾನ ಹೋಮ, ಚಂಡಿಕಾ ಹೋಮ ಜರಗಲಿದೆ.
12.30ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ ಒಂದರಿಂದ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 5 ರಿಂದ ಭಜನೆ, 6.30ಕ್ಕೆ ಮಹಾಪೂಜೆ, ಸಂಜೆ ಏಳು ಗಂಟೆಗೆ ರಂಗ ಪೂಜೆ,ಉತ್ಸವ ಬಲಿಕ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಮಾರ್ಚ್ 10ರಂದು ರವಿವಾರ ಬೆಳಿಗ್ಗೆ 8ರಿಂದ 9.30ರ ತನಕ ಸಂಪ್ರೂಕ್ಷಣೆ, ಮಂತ್ರಾಕ್ಷತೆ.
ವಾರ್ಷಿಕ ಮಹಾಪೂಜೆಯಲ್ಲಿ ಶ್ರೀ ಭಕ್ತಾದಿಗಳು ಆಗಮಿಸಿ, ಶ್ರೀದೇವರ ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ಸ್ಥಾಪಕ ಟ್ರಸ್ಟಿಗಳಾದ ಲಲಿತ ಬಿ.ಕೆ ಶ್ರೀನ, ಅರ್ಚಕವೃಂದ,ಭಜನ ಮಂಡಳಿ, ಹಾಗೂ ಭಕ್ತ ಮಂಡಳಿಯವರು ವಿನಂತಿಸಿದ್ದಾರೆ.