September 6, 2026
Mumbai News Kannada
ಪ್ರಕಟಣೆ

ಶ್ರೀ ಚಕ್ರಪೀಠ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ





ಉಡುಪಿ, ಸೆಪ್ಟೆಂಬರ್ 22: ಉಡುಪಿಯ ದೊಡ್ಡಣ್ಣ ಗುಡ್ಡೆಯಲ್ಲಿರುವ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವತಿಯಿಂದ ಶರನ್ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಮಹೋತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಿರಂತರ ಅನ್ನಸಂತರ್ಪಣೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು

​ಮಹೋತ್ಸವದ ಅಂಗವಾಗಿ ಪ್ರತಿದಿನ ಭಕ್ತರ ಸೇವಾರೂಪದಲ್ಲಿ ಜೋಡಿ ಚಂಡಿಕಾಯಾಗ, ಶ್ರೀ ದುರ್ಗಾ ನಮಸ್ಕಾರ ಪೂಜೆ, ಸಹಸ್ರನಾಮ ಅರ್ಚನೆ, ರಂಗಪೂಜೆ, ದೀಪಾರಾಧನೆ, ತುಲಾಭಾರ ಸೇವೆ ಮತ್ತು ವಿದ್ಯಾರಂಭಗಳು ನೆರವೇರಲಿವೆ.

  • ಸೆಪ್ಟೆಂಬರ್ 24: ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿ ಸನ್ನಿಧಾನದಲ್ಲಿ ಲಕ್ಷ್ಮಿ ಸಹಸ್ರನಾಮ ಮಹಾಯಾಗ ನಡೆಯಲಿದೆ.
  • ಸೆಪ್ಟೆಂಬರ್ 27 (ಲಲಿತಾ ಪಂಚಮಿ): ಶ್ರೀ ಲಲಿತಾ ಸಹಸ್ರ ಕದಳೀ ಯಾಗ ನಡೆಯಲಿದೆ.
  • ಅಕ್ಟೋಬರ್ 2 (ವಿಜಯದಶಮಿ): ಸಾಮೂಹಿಕವಾಗಿ ತ್ರಿಶಕ್ತಿ ಮಹಾಯಾಗ, ಸಂಜೆ ಬಲಿ ಉತ್ಸವದ ಜೊತೆಗೆ ಆರಾಧನಾ ರಂಗಪೂಜಾ ಮಹೋತ್ಸವ, ಮಹಾ ಸಂಪ್ರೋಕ್ಷಣೆ ಮತ್ತು ಮಹಾ ಮಂತ್ರಾಕ್ಷತೆ ಸಂಪನ್ನಗೊಳ್ಳಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

​ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾನ, ನಾಟ್ಯ ಹಾಗೂ ನಾದಪ್ರಿಯರಾದ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ವಿವಿಧ ಕಲಾವಿದರಿಂದ ನಾಟ್ಯ ಸೇವೆ, ಸಂಗೀತ ಸೇವೆ ಮತ್ತು ನಾದ ಸೇವೆಗಳು ಸಮರ್ಪಿತವಾಗಲಿವೆ. ಈ ಬಗ್ಗೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಅವರು ಮಾಹಿತಿ ನೀಡಿದ್ದಾರೆ.



Related posts

ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸ್ಥಳೀಯ ಸಮಿತಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿ ಡೊಂಬಿವಲಿ ಶಾಖೆ ಜಂಟಿ ಅಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಮಹಿಳೆಯರಿಗಾಗಿ (ಕರ್ಕರೋಗ)ಕ್ಯಾನ್ಸರ್ ತಪಾಸಣೆ :

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ೨೦೨೫-೨೬ ರ ಸಾಫಲ್ಯ ಭಾಗ್ಯ ಹಾಗು ವಿದ್ಯಾರ್ಥಿಗಳಿಗೆ ಸಹಾಯ ನಿಧಿಗೆ ಅರ್ಜಿ ಸ್ವೀಕಾರ.

Mumbai News Desk

ಫೆ. 1, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಸೆ. 22 ರಿಂದ ಅ. 2 ರ ವರೆಗೆ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ 2025

Mumbai News Desk

ಡೊಂಬಿವಲಿಯಲ್ಲಿ ಇಂದು( ಜುಲೈ 15) ಅದ್ದೂರಿ ಬಡಗು ಯಕ್ಷ ಸಂಭ್ರಮ: ‘ಶ್ರೀ ಕಾಜಳ್ಳಿ ಕ್ಷೇತ್ರ ಮಹಾತ್ಮೆ’ ಪ್ರದರ್ಶನ, ಸಾಧಕರಿಗೆ ಸನ್ಮಾನ

Mumbai News Desk