
ಮುಂಬಯಿ ಮಾ 12, ಬಂಟರ ಸಂಘ ಮುಂಬೈಯ
ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯರಿಂದ ಮಾ 8 ರಂದು ಮಹಾ ಶಿವರಾತ್ರಿಯ ಶುಭದಿನ ಬೊರಿವಲಿ ಪಶ್ಚಿಮದ ಜಯರಾಜ್ ನಗರದ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸ್ಮರಣೀಯ ಭಜನೆ ಸಂಕೀರ್ತನೆ ಜರಗಿತು,
ಬೆಳಿಗ್ಗೆ ಭಜನೆ ಕಾರ್ಯಕ್ರಮ ಇಂಚರ ತಂಡದ ರಜನಿ ಶೆಟ್ಟಿ ಮತ್ತು ಶೊಭಾ ಶೆಟ್ಟಿಯವರ ನೇತೃತ್ವದಲ್ಲಿ ಜರಗಿತು. ಭಜನೆ ಮಹಿಳಾ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ಸೇವೆ ಸಲ್ಲಿಸಿದರು.

ಆ ಬಳಿಕ ಮಹಿಳ ಸದಸ್ಯರಿಂದ ಆತ್ಮವು ಸೂರೆಗೊಳ್ಳುವ ಭಜನೆಯು ಎಲ್ಲರೂರನ್ನು ಭಕ್ತಿ ಭಾವ ರನ್ನಾಗಿ ಮಾಡಿತು,
. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಮತ್ತು ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಸುನೀತಾ ಹೆಗ್ಡೆ ಅವರು ಭಜನೆ ಹಾಡಿದ ಎಲ್ಲಾ ಸದಸ್ಯರಿಗೆ ನಿತ್ಯ ಪ್ರಾರ್ಥನೆಯ ಪುಸ್ತಕವನ್ನು ವಿತರಿಸಿ ಅವರ ಅಧ್ಯಾತ್ಮಿಕ ಸಾಧನೆಗೆ ಸ್ಪೂರ್ತಿ ನೀಡಿದರು.
ಮಧ್ಯಾಹ್ನ ಮಹಾ ಆರತಿ ಜರಗಿ ದೇವರ ಕೃಪೆಯಿಂದ ವಾತಾವರಣವು ಮಂಗಲಮಯವಾಗಿ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಪಾಲ್ಗೊಂಡ ಭಕ್ತರಲ್ಲರಿಗೂ ಪ್ರಸಾದರೂಪವಾಗಿ ಅನ್ನ ಸಂತರ್ಪಣೆ ನಡೆಯಿತು