30 C
Mumbai
April 24, 2026
Mumbai News Kannada
ಮುಂಬಯಿ

ಬೊರಿವಲಿ ಶ್ರೀ ಜಗದೀಶ್ವರಿ ಸೇವಾ ಸಮಿತಿ ಮತ್ತು ಬ್ರಹ್ಮ ಬೈದರ್ಕಲ ಗರಡಿ ದೇವಲಪಾಡ, 52 ನೇ ವಾರ್ಷಿಕ ಮಹಾಸಭೆ





ಮುಂಬಯಿ : ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿ ಮತ್ತು ಬ್ರಹ್ಮ ಬೈದರ್ಕಲ ಗರಡಿ ದೇವಲಪಾಡ, ಬೋರಿವಲಿ (ಪೂರ್ವ) ಇದರ 52 ನೇ ವಾರ್ಷಿಕ ಮಹಾ ಸಭೆಯು ಜೂನ್ 14 ರಂದು ಸಂಜೆ ಕಾಂದಿವಲಿ, ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನ ಹೋಟೆಲ್ ಸುರಭಿ ಪಾರ್ಟಿ ಹಾಲ್ ನಲ್ಲಿ, ಶ್ರೀ ಜಗದೀಶ್ವರಿ ಸೇವಾ ಸಮಿತಿಯ ಅಧ್ಯಕ್ಷ ರಾದ ಲಕ್ಷ್ಮಣ್ ಸಾಲ್ಯಾನ್ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು.

ಅಹ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರ ಆತ್ಮಕ್ಕೆ ಮೌನ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಸಭೆಯು ಪ್ರಾರಂಭವಾಯಿತು
ಪ್ರಧಾನ ಕಾರ್ಯದರ್ಶಿ ಅಭಿಜಿತ್ ಶೆಟ್ಟಿ ಇವರು ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು. ಶ್ರೀ ಜಗದೀಶ್ವರಿ ಸಮಿತಿಯ ನೂತನ ಪಧಾದಿಕಾರಿಗಳಾಗಿ ಅಧ್ಯಕ್ಷರಾಗಿ ಶ್ರೀ ಲಕ್ಷ್ಮಣ್ ಸಾಲ್ಯಾನ್, ಉಪಾಧ್ಯಕ್ಷರಾಗಿ ದಯಾನಂದ ಪೂಜಾರಿ ವಾರಂಗ ,ಪ್ರಧಾನ ಕಾರ್ಯದರ್ಶಿಯಾಗಿ ಸದಾಶಿವ ಸಾಲ್ಯಾನ್ ವಾರಂಗ ,ಜೊತೆ ಕಾರ್ಯದರ್ಶಿ ಯಾಗಿ ಕರುಣಾಕರ ಕಾಪು, ಕೋಶಾಧಿಕಾರಿಯಾಗಿ ಆಶಿಶ್ ಕೋಟ್ಯಾನ್, ಜೊತೆ ಕೋಶಾಧಿಕಾರಿಯಾಗಿ ಉಷಾ ಸಪಳಿಗ, ಇವರನ್ನು ಸಭೆಯು ಒಮ್ಮತದಿಂದ ನೇಮಿಸಿತು. ಬೈಲಾ (ಉಪನಿಯಮ) ಸಮಿತಿಯ ಅಧ್ಯಕ್ಷರಾಗಿ ವಿಶ್ವನಾಥ ಬಂಗೇರ, ಸದಸ್ಯರುಗಳಾಗಿ ವಿಠ್ಠಲ ಪೂಜಾರಿ, ಸುರೇಶ್ ಕೋಟ್ಯಾನ್, ಹರೀಶ್ ಸಾಲ್ಯಾನ್ ಇವರು ನೇಮಕಗೊಂಡರು. ಶ್ರೀ ಜಗದೀಶ್ವರಿ ಸೇವಾ ಸಮಿತಿಯ ಸಂಸ್ಥಾಪಕರಾದ ಶ್ರೀ ಶೇಖರ್ ಇಂದು ಸಾಲ್ಯಾನ್ ಅವರು ಜಗದೀಶ್ವರಿ ಮಾತೆಯ ಅನುಗ್ರಹದಿಂದ ನಡೆದುಕೊಂಡು ಬಂದಂತಹ ಈ ಧಾರ್ಮಿಕ ಸಂಸ್ಥೆಗೆ ಎಲ್ಲರೂ ಬೆನ್ನೆಲುಬಾಗಿದ್ದೀರಿ. ಇಲ್ಲಿ ಇನ್ನಷ್ಟು ಒಳ್ಳೆಯ ಸೇವಾ ಕಾರ್ಯಗಳು ನಡೆಯಲಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಲಕ್ಷ್ಮಣ್ ಸಾಲ್ಯಾನ್ ಅವರು ಸಭೆಯನ್ನುದ್ದೇಶಿಸಿ ” ಜಗದೀಶ್ವರಿ ಮಾತೆಯ ಮುಂದೆ ನಾವೆಲ್ಲರೂ ಸಮಾನರು. ನಮ್ಮಲ್ಲಿ ಯಾವುದೇ ರೀತಿಯ ವೈಮನಸ್ಯ ಇಟ್ಟುಕೊಳ್ಳದೆ ನಾವೆಲ್ಲರೂ ಒಗ್ಗಟ್ಟಾಗಿ ಈ ಸಂಸ್ಥೆಯನ್ನು ಮುನ್ನಡೆಸಬೇಕು”.ಎಂದು ನುಡಿದರು.
ಕರುಣಾಕರ ಕಾಪು ಅವರ ಧನ್ಯವಾದ ಸಮರ್ಪಣೆಯೊಂದಿಗೆ ಸಭೆಯು ಮುಕ್ತಾಯವಾಯಿತು.



Related posts

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ (ರಿ) ಮುಂಬಯಿ ನೂತನ ಅಧ್ಯಕ್ಷರಾಗಿ ರವೀಶ್ ಜಿ ಆಚಾರ್ಯ ಆಯ್ಕೆ 

Mumbai News Desk

ಶ್ರೀ ಅಯ್ಯಪ್ಪ ಸೇವಾ ಸಮಿತಿ ಫೋರ್ಟ್, ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಪರಿವಾರ ದೇವರಿಗೆ ರಜತ ಪೀಠ ಸಮರ್ಪಣೆ

Mumbai News Desk

ಜಯ ಸಿ ಸುವರ್ಣ ಅಭಿಮಾನಿಗಳಿಂದ ಗೊರೇಗಾಂವ್‌ನಲ್ಲಿ ನವರಾತ್ರಿ ನೃತ್ಯೋತ್ಸವ – 2025*

Mumbai News Desk

ಸೇವಾ ಪಥದಲ್ಲಿ ಮೂರು ದಶಕ: ಭಾರತ್ ಬ್ಯಾಂಕ್ ಬಾಂದ್ರಾ ಪೂರ್ವ ಶಾಖೆಯ 30ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಸಾಫಲ್ಯ ಸೇವಾ ಸಂಘ ಮಹಿಳಾ ವಿಭಾಗದ ವತಿಯಿಂದ ಆಟಿಡ್ ಒಂಜಿ ದಿನ ಕಾರ್ಯಕ್ರಮ

Mumbai News Desk

ಮೈಸೂರು ಅಸೋಸಿಯೇಷನ್‌ನಲ್ಲಿ ‘ಶ್ರೀರಂಗ ಸ್ಮರಣೆ’ ನಾಟಕೋತ್ಸವಕ್ಕೆ ಚಾಲನೆ

Mumbai News Desk