
ಮುಂಬಯಿ ಮಾ 22. ಬಾಂದ್ರಾ ಪಶ್ಚಿಮದ ಸಂಕಿಸ್ಟ್ ಕಟ್ಟಡದ ನಿವಾಸಿ ದಿ. ಸಿ .ಎ. ವೈ ಆರ್. ಶೆಟ್ಟಿ ಯವರ ಧರ್ಮ ಪತ್ನಿ ನಿಟ್ಟೆಗುತ್ತು ಸುಮಿತ್ರಾ ಆರ್. ಶೆಟ್ಟಿ (95) ಯವರು ಅಲ್ಪ ಕಾಲದ ಅಸೌಖ್ಯದಿಂದ ಮಾ :18 . ರಂದು ನಿಧನರಾಗಿದ್ದಾರೆ.
ಸುಮಿತ್ರಾ ಆರ್. ಶೆಟ್ಟಿ ಯವರು ಪುತ್ರರಾದ ಸಿ. ಎ.ಆತ್ಮಾನಂದ ಆರ್. ಶೆಟ್ಟಿ, ಸಿ .ಎ. ಅಭಯಾನಂದ ಆರ್. ಶೆಟ್ಟಿ ಹಾಗು ಹೃದಯಾನಂದ ಆರ್. ಶೆಟ್ಟಿ ಮತ್ತು ಸೊಸೆಯಂದಿರಾದ ಸಂದ್ಯಾ ಎ. ಶೆಟ್ಟಿ, ಸಮತಾ ಎ. ಶೆಟ್ಟಿ, ಸರಿತಾ ಎಚ್ .ಶೆಟ್ಟಿ ಹಾಗು ಮೊಮ್ಮಕ್ಕಳು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಸುಮಿತ್ರಾ ಆರ್. ಶೆಟ್ಟಿ ನಿಧನಕ್ಕೆ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಅವರು ದುಃಖ ಸಂತಾಪ ಸೂಚಿಸಿರುವರು