
ಮೊಗವೀರ ಸಮಾಜದ ಬಂಧುಗಳು ಸ್ಥಾಪಿಸಿರುವ ಅಂಧೇರಿ ಪಶ್ಚಿಮ ದ ಶ್ರೀ ಮದ್ಭಾರತ ಮಂಡಳಿಯ ಆಡಳಿತದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದ22ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಮಾ-29ನೇ ಶುಕ್ರವಾರದಂದು. ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಂದಿರದ ಪ್ರಧಾನ ಅರ್ಚಕರಾದ ಗುರುಪ್ರಸಾದ್ ಭಟ್ ಅವರ ಮಾರ್ಗದರ್ಶನ ದಲ್ಲಿ ವಿಜ್ರಂಭಣೆಯಿಂದ ಜರಗಲಿರುವುದು.
ಬೆಳಿಗ್ಗೆ ಗಂಟೆ 8:30 ರಿಂದ ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾ ಹ ವಾಚನ, ಪ್ರಧಾನ ಹೋಮ, ನವ ಕಲಶ ಪೂಜೆ, ಪರಿವಾರ ಸಹಿತ ಶ್ರೀ ಲಕ್ಷ್ಮಿನಾರಾಯಣ ದೇವರಿಗೆ ಪಂಚಾಮೃತ ಮತ್ತು ಕಲಶಭಿಷೇಕ, ಮಹಾಪೂಜೆ, ತದನಂತರ ದೇವರ ಬಲಿ ಮೂರ್ತಿಯ ಉತ್ಸವ ಬಲಿ ನಡೆಯಲಿರುವುದು,ಬೆಳಿಗ್ಗೆ 10 ರಿಂದ 11ರ ತನಕ ಶ್ರೀ ಮಹಾಲಕ್ಷ್ಮಿ ಭಜನಾ ಮಂಡಳಿ ಅಂಧೇರಿ ಮತ್ತು ಮಹಿಷಮರ್ದಿನಿ ಭಜನಾ ಮಂಡಳಿ, ಬೊರಿವಲಿ ಇವರಿಂದ ಕುಣಿತ ಭಜನೆ. 12ರಿಂದ 3 ರ ವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ,
ಮಧ್ಯಾಹ್ನ 2ರಿಂದ 5.30ರ ತನಕ ಪುಷ್ಪ ಜಿ. ಬಂಗೇರ ಅವರಿಂದ ‘ಶ್ರೀ ಕೃಷ್ಣ ಬಾಲ ಲೀಲೆ ‘ ಹರಿಕಥೆ, ಸಂಜೆ4 ರಿಂದ 5 30ರ ವರೆಗೆ ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಬೋರಿವಲಿ,5 30 ರಿಂದ 6 30 ರ ವರೆಗೆ ಶ್ರೀ ಮಧ್ಭಾರತ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ. ರಾತ್ರಿ 6.30ಕ್ಕೆ ಮಂಟಪ ರಂಗ ಪೂಜೆ ನಡೆಯಲಿದೆ,
ದೇವರ ಸನ್ನಿಧಿಯಲ್ಲಿ ಜರಗಲಿರುವುದು.ಈ ಶುಭ ಸಮಾರಂಭದಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರ ರಾಗಬೇಕೆಂದು ಮಂಡಳಿ ಅಧ್ಯಕ್ಷ ಜಗನ್ನಾಥ್ ಪಿ. ಪುತ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಲೋಕನಾಥ್ ಪಿ. ಕಾಂಚನ್, ಕೋಶಾಧಿಕಾರಿ ಕೇಶವ್ ಪುತ್ರನ್ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ