
ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) ಇದರ ಆಡಳಿತ ಸಮಿತಿಯ ಮಾರ್ಗದರ್ಶನದೊಂದಿಗೆ ಮಹಿಳಾ ವಿಭಾಗದ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ದಿನಾಂಕ : 29-3-2024ರ ಶುಕ್ರವಾರ ಅಪರಾಹ್ನ 3.00 ರಿಂದ ಮಾತೋಶ್ರಿ ಹವಾನಿಯಂತ್ರಿತ ಹಾಲ್, ಮೆಕ್ಸಿ ಗ್ರಾಂಡ್ ಎದುರುಗಡೆ, ಪಟೇಲ್ ಮಾರ್ಟ್ ಮೇಲ್ಗಡೆ, ಸಂತೋಷಿ ಮಾತಾ ರೋಡ್, ಕಲ್ಯಾಣ್ ಪಶ್ಚಿಮ ಇಲ್ಲಿ ನಡೆಯಲಿದೆ.
ಕನ್ನಡ ಸಾಂಸ್ಕೃತಿಕ ಕೇಂದ್ರ, ಕಲ್ಯಾಣ್ ನ ಅದ್ಯಕ್ಷಿ ಜ್ಯೋತಿ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಶ್ರೀಮತಿ ರೇವತಿ ಸದಾನಂದ ಶೆಟ್ಟಿ, (ಮಾಜಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಥಾಣೆ ಬಂಟ್ಸ್ ಅಸೋಸಿಯೇಶನ್, ಥಾಣೆ) ಗೌರವ ಅತಿಥಿಯಾಗಿ ಶ್ರೀಮತಿ ಮಂಜುಳಾ ಶೇಖರ್ ಶೆಟ್ಟಿ (ಮಾಜಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿ) ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಸದಸ್ಯೆ, ಸಾಹಿತಿ, ಲೇಖಕಿ ಡಾ. ದಾಕ್ಷಾಯಿಣಿ ಯಡಹಳ್ಳಿ ಯವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಕನ್ನಡ ಕಲಾ ತಂಡಗಳಿಂದ ಕನ್ನಡ ಜನಪದ ನೃತ್ಯ ಸ್ಪರ್ಧೆ ಮತ್ತು ಸಂಸ್ಥೆಯ ಸದಸ್ಯೆಯರಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜ್ಯೋತಿ ಪ್ರಕಾಶ್ ಹೆಗ್ಡೆ (ಅಧ್ಯಕ್ಷರು) ಮತ್ತು ಪದಾಧಿಕಾರಿಗಳು, ಗೌರವ ಅಧ್ಯಕ್ಷರು, ಸಲಹೆಗಾರರು, ಆಡಳಿತ ಸಮಿತಿ ಸದಸ್ಯರು ಹಾಗೂ
ಭಾರತಿ ಬಿ. ಶೆಟ್ಟಿ (ಕಾರ್ಯಾಧ್ಯಕ್ಷೆ : ಮಹಿಳಾ ವಿಭಾಗ)
ಮತ್ತು ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯೆಯರು ಪ್ರಕಟಣೆಯಲ್ಲಿ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.