
ಸಂಘದ ಮೂಲಕ ಬಡವರ ಕಣ್ಣೀರೊರಸುವ ಕಾರ್ಯ ನಡೆಯಲಿ: ಕೆ ಡಿ ಶೆಟ್ಟಿ
ಚಿತ್ರ ವರದಿ : ದಿನೇಶ್ ಕುಲಾಲ್
ನವಿಮುಂಬಯಿ : ಕರ್ನಾಟಕ ಸಂಘ ಪನ್ವೆಲ್ ಇದರ ವಾರ್ಷಿಕೋತ್ಸವ ಸಮಾರಂಭವು ಮಾ. 29 ರಂದು ಕರ್ನಾಟಕ ಸಂಘ ಪನ್ವೆಲ್ ನ ಸಂಘ ಪಕ್ಕದಲ್ಲಿರುವ ಮೈದಾನದ ಹಾವಂಜೆ ಅರುಣ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಜರಗಿತು.
ಪನ್ವೆಲ್ ಮಹಾನಗರ ಪಾಲಿಕೆಯ ಮಾಜಿ ಸಭಾಪತಿ ಸಂಘದ ಕಾರ್ಯಾಧ್ಯಕ್ಷ ಸಂತೋಷ್ ಜಿ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಪದ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜನಪ್ರಿಯ ಉದ್ಯಮಿಗಳಾದ ಕುಸುಮೋಧರ ಡಿ. ಶೆಟ್ಟಿ (ಸಿಎಮ್ ಡಿ. ಭವಾನಿ ಶಿಪ್ಪಿಂಗ್ ಸರ್ವಿಸಸ್ (ಇಂಡಿಯಾ) ಪ್ರೈ.ಲಿ) ಮತ್ತು ನಗ್ರಿಗುತ್ತು ಹರಿಪ್ರಸಾದ ಶೆಟ್ಟಿ (ವೆರಿಜೋನ್ ಇಂಡಸ್ಟ್ರೀಸ್, ತಲೋಜ) ಇವರು ಆಗಮಿಸಿದ್ದರು.

ಸಂತೋಷ್ ಜಿ ಶೆಟ್ಟಿ ಯವರು ಮಾತನಾಡುತ್ತಾ ಮುಂಬಯ ಹೆಬ್ಬಾಗಿಲು ಪನ್ವೆಲ್, ಮುಂಬಯಿಗೆ ಹೋಗಬೇಕಾದರೆ ಪನ್ವೆಲ್ ನಿಂದಾಗಿ ಹೋಗಬೇಕು ಈ ಪರಿಸರದ ಕನ್ನಡಿಗರು 23ವರ್ಷದ ಮೊದಲು ತುಳು ಕನ್ನಡಿಗರು ಒಗ್ಗಟ್ಟಾಗಿರಬೇಕು ಎನ್ನುವ ನಿಟ್ಟಿನಲ್ಲಿ ಸಂಘ ಸ್ಥಾಪನೆಯಾಗಿದ್ದರಿಂದ ಇಂದು ಸಂಘವು ಹೆಮ್ಮರವಾಗಿ ಬೆಳೆದಿದೆ. ಇದರಿಂದ ಬಹಳಷ್ಟು ಉಪಯೋಗ ಈ ಪರಿಸರದ ಜನರಿಗೆ ಆಗುತ್ತಿದೆ,
ಸಂಘದ ಮಹಿಳೆಯರಿಂದ ಪ್ರತೀ ತಿಂಗಳು ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರಿಂದಾಗಿ ಸಂಘವು ಉನ್ನತ ಮಟ್ಟಕ್ಕೆ ಬೆಳೆದು ನಿಂತಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಜನಪ್ರಿಯ ನೇತ್ರ ತಜ್ನ ಡಾ. ಸುಹಾಸ್ ಹಳ್ದೀಪುರ್ಕರ್ ದಂಪತಿಯನ್ನು ಸನ್ಮಾನಿಸಿದ್ದು. ಅವರ ಸನ್ಮಾನ ಪತ್ರವನ್ನು ಸಂಘದ ಸಮಿತಿಯ ಸದಸ್ಯರಾದ ಶ್ವೇತಾ ಸಂತೋಶ್ ಶೆಟ್ಟಿ ವಾಚಿಸಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ. ಸುಹಾಸ್ ಹಳ್ದೀಪುರ್ಕರ್ ಅವರು ಪನ್ವೆಲ್ ಗೆ ಬಹಳ ಹಿಂದೆಯೇ ನಾನು ಆಗಮಿಸಿದ್ದು ಇದೀಗ ಬಹಳ ಅಭಿವೃದ್ದಿಯಾಗಿದೆ. ನಮ್ಮ ಸಂಘವು ಉತ್ತಮ ನಿವೇಶಣವನ್ನು ಹೊಂದಿದ್ದು, ಸಂಘದ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿರುವೆನು. ನಾನೂ ಈ ಸಂಘದ ಒಂದು ಬಾಗವಾಗಿದ್ದೇನೆ ಸಂತೋಷವಾಗಿತ್ತಿದೆ ಎಂದರು.
ಸ್ಥಳೀಯ ನಗರ ಸೇವಕ ರಾಜು ಸೋನಿಯವರನ್ನೂ ಸನ್ಮಾನಿಸಲಾಗುದ್ದು ಅವರನ್ನು ಸ್ವಾತಿ ಶೆಟ್ಟಿ ಯವರು ಪರಿಚಯಿಸಿದರು.

ಸಮಾರಂಭದ ಮುಖ್ಯ ಅತಿಥಿ ಕೆ ಡಿ ಶೆಟ್ಟಿ ಯವರು ಮಾತನಾಡುತ್ತಾ ಇಂದು ಕರ್ನಾಟಕ ಸಂಘ ಪನ್ವೆಲ್ ಇದರ ವರ್ಷಾವದಿ ಜಾತ್ರೆಯಂತಿದೆ. ಸುಂದರ ಸಂಜೆಯಲ್ಲಿ ಕನ್ನಡದ ಬಾಂಧವರು ನಮ್ಮ ಈ ನ್ಯೂ ಪನ್ವೆಲ್ ನಲ್ಲಿ ಸೇರಿ ಸುಂದರವಾದ ಸಮಾರಂಭವನ್ನೇ ನಡೆಸುತ್ತಿದ್ದಾರೆ. ನಮ್ಮ ನಾಡಿನ ಎಲ್ಲ ಸಮುದಾಯದವರು ಇಲ್ಲಿದ್ದು ಇದು ಎಲ್ಲರಿಗೆ ಬೇಕಾದ ಸಂಘಟನೆಯಾಗಿದೆ. ಇದೇ ರೀತಿ ಒಗ್ಗಟ್ಟಿನಿಂದ ಸಂಘವನ್ನು ಮುಂದುವರಿಸೋಣ, ಸಂಘದ ಮೂಲಕ ಬಡವರ ಕಣ್ಣೀರೊರಸುವ ಕಾರ್ಯ ನಡೆಯಲಿ ಎಂದರು.
ಇನ್ನೋರ್ವ ಅತಿಥಿ ನಗ್ರಿಗುತ್ತು ಹರಿಪ್ರಸಾದ್ ಶೆಟ್ಟಿ ಯವರು ಮಾತನಾಡುತ್ತಾ ನಮ್ಮ ಮಾತೃಬಾಷೆಗಾಗಿ ಹಾಗೂ ಕನ್ನಡಿಗರ ಅಭಿವೃದ್ದಿಗಾಗಿ ದುಡಿಯುತ್ತಿರುವ ಕರ್ನಾಟಕ ಸಂಘ ಪನ್ವೆಲ್ ಗೆ ಅಭಿನಂದನೆ ಸಲ್ಲಿಸಿದರು. ನಮ್ಮವರಿಂದ ಕನ್ನಡಾಂಬೆಯ ಸೇವೆ ಇದೇ ರೀತಿ ಮುಂದುವರಿಯಲಿ ಎಂದರು.
ಗೀತಾ ಶೆಟ್ಟಿ ಮತ್ತು ಜ್ಯೋತಿ ಶೆಟ್ಟಿಯವರಿಂದ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮವನ್ನು ವೇದಿಕೆಯ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಕೋಶಾಧಿಕಾರಿ ಸುಧಾ ರಾವ್ ಎಲ್ಲರನ್ನೂ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ಯಾರು ಅವರು ಸಂಘದ ವಾರ್ಷಿಕ ಚಟುವಟಿಕೆಗಳ ಮಾಹಿತಿಯಿತ್ತರು.

ವೇದಿಕೆಯಲ್ಲಿ ಅತಿಥಿಗಳೊಂದಿಗೆ ಸಂಘದ ಕಾರ್ಯಧ್ಯಕ್ಷರಾದ ಸಂತೋಷ್ ಜಿ ಶೆಟ್ಟಿ, ಅಧ್ಯಕ್ಷರಾದ ಭಾಸ್ಕರ ಶೆಟ್ಟಿ (ಪದ್ಮ), ಉಪಾಧ್ಯಕ್ಷ ಗುರು ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸತೀಷ್ ಶೆಟ್ಟಿ ಕುತ್ಯಾರ್, ಕೋಶಾಧಿಕಾರಿ ಸುಧಾ ರಾವ್, ಜೊತೆ ಕಾರ್ಯದರ್ಶಿ ಕಾಂತಿ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಶಶಿಕಲಾ ದಾಪ್ಕೆ ಉಪಸ್ಥಿತರಿದ್ದರು.
ಸಂಘದ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ” ನೃತ್ಯ ವೈವಿಧ್ಯ ” ನಮ ತುಳುವೆರ್ ಕಲಾ ಸಂಘಟನೆ (ರಿ) ನಾಟ್ಯದೂರು ಮುದ್ರಾಡಿ, ಹೆಬ್ರಿ ತಾಲೂಕು, ಉಡುಪಿ ಇವರಿಂದ ” “ಅಂಬೆ” ಕನ್ನಡ ನಾಟಕ ಪ್ರದರ್ಶನವಿತ್ತು.
ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಶಿಕಲಾk ದಾಪ್ಕೆ ಯವರು ನಿರ್ವಹಿಸಿದರೆ ಸಭಾ ಕಾರ್ಯಕ್ರಮವನ್ನು shabuna ಸತೀಶ್ ಶೆಟ್ಟಿ ನಿರ್ವಹಿಸಿದರು. ಪ್ರಮಿಳಾ ಶೆಟ್ಟಿಯವರು ಕೊನೇಗೆ ವಂದನಾರ್ಪಣೆ ಮಾಡಿದರು.
——————
ಸಂಘ ಭಾಷೆ ಸಂಸ್ಕೃತಿ ಉಳಿವಿಗಾಗಿ ಸದಾ ಸಮಿತಿದೆ ಎಂದರು.
ಭಾಸ್ಕರ್ ಶೆಟ್ಟಿ (ಪದ್ಮ)
ಸಂಘದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ (ಪದ್ಮ) ಅವರು ಮಾತನಾಡುತ್ತಾ ಇಂದಿನ ಈ ಸಮಾರಂಭಕ್ಕೆ ಆಗಮಿಸಿದ ಇಬ್ಬರೂ ಅತಿಥಿಗಳು ಹಾಗೂ ಸನ್ಮಾನವನ್ನು ಸ್ವೀಕರಿಸಿದ ಇಬ್ಬರು ಗಣ್ಯರು ನಿಜವಾಗಿಯೂ ಅರ್ಹರು ಹಾಗೂ ಇವರೆಲ್ಲರ ಸಹಕಾರ ಹಾಗೂ ಪ್ರೋತ್ಸಾಹ ಹಿಂದಿನಂತೆ ಮುಂದೆಯೂ ನಮಗಿರಲಿ, ಭಾಷೆ ಸಂಸ್ಕೃತಿ ಉಳಿವಿಗಾಗಿ ಸದಾ ಸಮಿತಿದೆ ಎಂದರು.