
ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಗೋಕುಲ,ಮಹಿಳಾ ವಿಭಾಗವು ಮಹಿಳಾ ದಿನಾಚರಣೆಯನ್ನು ಶನಿವಾರ ದಿನಾಂಕ ೩೦. ೩. ೨೦೨೪ ರಂದು ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಸಹನಾ ಪೋತಿಯವರ ನೇತೃತ್ವದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸಿತು.

ಸಾಹಿತ್ಯಿಕ ಕಾರ್ಯಕ್ರಮದ ಅಂಗವಾಗಿ “ಭಾರತೀಯ ನಾರಿ” ವಿಷಯಾಧಾರಿತ ಪ್ರಬಂಧ ಬರೆಯುವುದರಲ್ಲಿ ಸುಮಾರು ೧೫ ಮಹಿಳೆಯರು/ಪುರುಷರು ತಮ್ಮ ಅನಿಸಿಕೆಗಳನ್ನು ಲೇಖನದ ಮೂಲಕ ವ್ಯಕ್ತ ಪಡಿಸಿದರು.

ಪ್ರೇಮಾ ರಾವ್ ಆಗಮಿಸಿದ ಸದಸ್ಯರನ್ನೆಲ್ಲಾ ಸ್ವಾಗತಿಸಿದ ಬಳಿಕ ಸಂಘದ ಹಿರಿಯ ಸದಸ್ಯೆ ದ್ರೌಪದಿಯವರು ಮಹಿಳಾ ದಿನಾಚರಣೆಯ ಬಗ್ಗೆ ಮಾತನಾಡಿದರು. ನಂತರ ನಡೆದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಹಿಳೆಯರು ಸಂಗೀತ, ನೃತ್ಯ, ಯೋಗ ನೃತ್ಯ, ಯೋಗ ಪ್ರದರ್ಶನ, ಚಿತ್ರ ಕಲೆ, ಏಕ ವ್ಯಕ್ತಿ ಅಭಿನಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಪ್ರಶಾಂತ್ ಹೆರ್ಲೆಯವರು, ಸದಸ್ಯರಿಗೆ ವಿವಿಧ ಮೋಜಿನ ಆಟಗಳನ್ನು ಏರ್ಪಡಿಸಿ ಮನರಂಜಿಸಿದರು. ವಿಠಲ ಭಜನಾ ಮಂಡಳಿ, ಮೀರಾ ರೋಡ್ ಸದಸ್ಯೆಯರಿಂದ ಹಾಸ್ಯ ಹರಟೆ, ಗೋಕುಲದ ಮಹಿಳಾ ವಿಭಾಗದವರಿಂದ “ಕಟ್ಟೆ ಪುರಾಣ” ಎಂಬ ಹಾಸ್ಯಮಯ ಕಿರು ಪ್ರಹಸನ, ಡೆನ್ನನ ನೃತ್ಯ ಇತ್ಯಾದಿ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು. ಮಹಿಳಾ ವಿಭಾಗದ ಸಂಚಾಲಕಿ ಸ್ಮಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು.ಪ್ರೇಮಾ ರಾವ್ ಧನ್ಯವಾದ ಸಮರ್ಪಣೆ ಗೈದರು. ಅಧ್ಯಕ್ಷರು ಡಾ. ಸುರೇಶ್ ರಾವ್,ಗೌ. ಕಾರ್ಯದರ್ಶಿ ಎ.ಪಿ.ಕೆ. ಪೋತಿ, ಕೋಶಾಧಿಕಾರಿ, ಹರಿದಾಸ್ ಭಟ್, ಜತೆ ಕಾರ್ಯದರ್ಶಿ ವೈ. ಮೋಹನ್ ರಾಜ್, ಕಾರ್ಯಕಾರಿ ಸಮಿತಿ ಸದಸ್ಯರು, ಸಂಘದ ಪ್ರಥಮ ಮಹಿಳೆ ವಿಜಯಲಕ್ಷ್ಮಿ ಸುರೇಶ್ ರಾವ್ , ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯೆ ಶೈಲಿನಿ ರಾವ್ ಸಹಿತ ಸುಮಾರು ೧೩೦ ಮಿಕ್ಕಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು


