
ಕರ್ನಾಟಕ ಸಂಘ ಮುಂಬಯಿ ಯ ಅಧ್ಯಕ್ಷ, ರಂಗ ನಿರ್ದೇಶಕ ಡಾ. ಭರತ್ ಕುಮಾರ್ ಪೊಲಿಪು, ಅವರ ಮಾತೃಶ್ರೀ ಕಮಲ ಕುಂದರ್ (92) ದಿನಾಂಕ 05-04-2024ರಂದು ನಿಧನರಾದರು.
ಉಡುಪಿ ತಾಲೂಕು ಕಾಪು, ಪೊಲಿಪು ಬಂಗಾರು ಮನೆಯ ಯವರಾದ ಅವರು ಡಾ. ಭರತ್ ಕುಮಾರ್ ಸಹಿತ ಇಬ್ಬರು ಪುತ್ರರನ್ನು, ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವು ಇಂದು (ತಾ. 6) ಬೆಳ್ಳಿಗ್ಗೆ ಕಾಪು ರುದ್ರ ಭೂಮಿಯಲ್ಲಿ ನೆರವೇರಿತು.
ಕಮಲ ಕುಂದರ್ ಅವರ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಪೊಲಿಪು ಮೊಗವೀರ ಮಹಾಸಭಾದ ಅಧ್ಯಕ್ಷ ಶ್ರೀಧರ್ ಕಾಂಚನ್, ಕರ್ನಾಟಕ ಸಂಘ ಮುಂಬಯಿ ಯ ಪದಾಧಿಕಾರಿಗಳು ಹಾಗೂ ಮುಂಬೈಯ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.