
ನಿಷ್ಕಲ ಮನಸ್ಸಿನ ಸೇವೆಗೆ ಭಗವಂತ ಸಾಕ್ಷಾತ್ಕರಿಸುತ್ತಾನೆ ;- ಶ್ರೀನಿವಾಸ ಸಾಪಲ್ಯ ,
ಚಿತ್ರ ಭಾಸ್ಕರ್ ಕಾಂಚನ್, ವರದಿ ದಿನೇಶ್ ಕುಲಾಲ್,
ಮುಂಬಯಿ : ಭಕ್ತಿ ಇಲ್ಲದಿದ್ದಲ್ಲಿ ಮನುಷ್ಯನ ಜೀವನ ಶೂನ್ಯ ವಂತೆ, ಮುಕ್ತಿಯ ಸಾಗರದಲ್ಲಿ ಸೇರಬೇಕಾದರೆ ಭಕ್ತಿ ಬೇಕು, ಭಕ್ತಿಯನ್ನು ಪಡೆಯಲು ಮನಸ್ಸು ಅಚಲವಾಗಿರಬೇಕು ಮನಸ್ಸು ಕೇಂದ್ರಿಕಿತವಾಗಿರಬೇಕು. ಆಧ್ಯಾತ್ಮಿಕ ಚಿಂತನ ಮಂಥನದಿಂದ ಭಕ್ತಿಗೆ ಪ್ರೇರಣೆ ಸಾಧ್ಯ. ಅಲ್ಪಾವಧಿಯ ಮಾನವ ಜೀವನದಲ್ಲಿ ನಾನು, ನನ್ನದು ಎನ್ನುವುದಕ್ಕಿಂತ, ದೇವರು ಕೊಟ್ಟದ್ದು ಅಂತ ಹೇಳಿ ಬದುಕಿದರೆ ಮಾತ್ರ ಅದಕ್ಕಿಂತ ಮಿಗಿಲಾದ ಬದುಕು ಇನ್ನೊಂದಿಲ್ಲ,, ಪೂಜಾ ಸಮಿತಿಯ 25ನೇ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಸಮಿತಿಯಲ್ಲಿ ನಾನು ಕ್ರೀಯಾಶೀಲನಾಗಿದ್ದೆ, ಇದೀಗ ಸಮಿತಿಯ 50ನೇ ವರ್ಷದ ಸುವರ್ಣ ಮಹೋತ್ಸವದಲ್ಲಿ ನಾನು ಅಧ್ಯಕ್ಷನಾಗಿದ್ದೇನೆ. ಹತ್ತು ವರ್ಷ ಗಳಿಂದ ಅಧ್ಯಕ್ಷ ನಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಇದು ನನ್ನ ಸೌಭಾಗ್ಯ ಅಂತ ಹೇಳಬೇಕು. ನಮ್ಮ ದೇವಸ್ಥಾನವು ಕೇವಲ ಧಾರ್ಮಿಕ ಕೇತ್ರವಾಗಿರದೆ, ಭಕ್ತಿ ಕೇಂದ್ರವಾಗಿ, ಶ್ರದ್ದಾ ಕೇಂದ್ರವಾಗಿ, ನ್ಯಾಯ ಕೇಂದ್ರವಾಗಿ , ಶಿಕ್ಷಣ ಹಾಗೂ ಕಲಾ ಕೇಂದ್ರ ವಾಗಿದೆ , ದೇವಸ್ಥಾನದಲ್ಲಿ ನಿತ್ಯ ವಿವಿಧ ರೀತಿಯಲ್ಲಿ ಸೇವೆ ಮಾಡುವ ಸೇವಕರಿಗೆ ಕೇವಲ ಪಂಚಕಜ್ಜಾಯ ಮಾತ್ರ ಸಿಗುತ್ತದೆ, ಸೇವಕರೆಲ್ಲರೂ ನಿಷ್ಕಲ ಮನಸ್ಸಿನ ಸೇವೆಗೆ ಭಗವಂತ ನಮಗೆ ಗೋಚರಿಸದಂತೆ ಬೇರೆ ಬೇರೆ ವಿಧದಲ್ಲಿ ಸಾಕ್ಷಾತ್ಕರಿಸುತ್ತಾನೆ ಮುಕ್ತಿಯತ್ತ ಕೊಂಡೊಯ್ಯುತ್ತಾನೆ ಎಂದು ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ನುಡಿದರು.

ಮಲಾಡ್ ಪೂರ್ವ ಲಕ್ಷ್ಮಣ ನಗರ ಕುರಾರ್ ವಿಲೇಜ್ ನ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರಂಭವು ಎ. 7 ರಂದು ಲತಾ ಮಂಗೇಶ್ಕರ್ ನಾಟ್ಯಾಗೃಹ ಸಭಾಗೃಹ, ಮಹಾಜನ್ ವಾಡಿ, ಮೀರಾರೋಡ್ ಪೂರ್ವ ಇಲ್ಲಿ ಜರಗಿದ್ದು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸದಸ್ಯರೆಲ್ಲರ ಪ್ರೀತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು
ಶನಿಮಹಾತ್ಮ ಪೂಜಾ ಸಮಿತಿಯ ಸದಸ್ಯರು ನನಗೆ ನೀಡಿದ ಪ್ರೀತಿ ಪ್ರೇಮ ವಾತ್ಸಲ್ಯ ನನಗೆ ದೊರೆತ ಅತಿ ದೊಡ್ಡ ಸನ್ಮಾನ. . 12 ತಿಂಗಳು 18 ಕಾರ್ಯಕ್ರಮಕ್ಕೆ ಅದೆಷ್ಟೋ ಜನರು ವಿವಿಧ ರೀತಿಯಲ್ಲಿ ನಮಗೆ ಸಹಕರಿಸಿದ್ದಾರೆ. ತಿರುಪತಿಯಲ್ಲಿ ದೇವರ ಭಜನೆಗೆ ಅವಕಾಶವಿಲ್ಲದಿದ್ದರೂ ಕೂಡ ದೇವರ ಮುಂಬಾಗದಲ್ಲಿ ಭಜನೆ ಮಾಡಿದ್ದು ಆ ಸಮಯದಲ್ಲಿ ದೇವರೇ ಒಳಗಿಂದ ಹೊರಬಂದದ್ದು ನಮ್ಮ ಸೌಭಾಗ್ಯ. ಇಂದು ಮಹತ್ವಪೂರ್ಣವಾದ ವೇದಿಕೆಯಲ್ಲಿ ನನಗೆ ಸನ್ಮಾನ ಸಿಕ್ಕಿದ್ದು ನಿಜವಾಗಿಯೂ ನಾನು ಮಾಡಿದ ಪುಣ್ಯದ ಫಲ ಅಂತ ದೇವರ ಪ್ರಸಾದ ಅಂತ ಅದನ್ನ ಸ್ವೀಕರಿಸಿದ್ದೇನೆ. ನಾವು ಇಂದು ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಬಂಗಾರದ ಮನಸ್ಸಿನಿಂದ ಬೆಳ್ಳಿಯ ದೇವರ ಫೋಟೋ ಹೊಂದಿದ ನಾಣ್ಯವನ್ನು ಸದಸ್ಯರಿಗೆ ನೀಡಿದ್ದೇವೆ, ಇದನ್ನು ಶನಿ ದೇವರ ಪ್ರಸಾದದಂತೆ ಎಲ್ಲರೂ ಸ್ವೀಕರಿಸಿದ್ದಾರೆ. ಸಮಿತಿಯ ಮಹಿಳೆಯರು ಇಂದು ಉತ್ತಮ ಯಕ್ಷಗಾನವನ್ನು ಪ್ರದರ್ಶನವನ್ನು ನೀಡಿದ್ದಾರೆ ಅದೇ ರೀತಿ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ತಮವಾಗಿ ನಡೆದಿದೆ ಎಂದರು.
ಶ್ರೀ ಶನೀಶ್ವರ ಕ್ಷೇತ್ರ ಮಲಾಡ್ ಇದರ ಪುರೋಹಿತರಾದ ವೇದಮೂರ್ತಿ ರಾಘವೇಂದ್ರ ತುಂಗಾ ಭಟ್ ಇವರು ಆಶೀರ್ವಚನ ಮಾಡುತ್ತಾ ಕ್ಷೇತ್ರ ಕ್ಕೆ ಈ ವರ್ಷ ಸುವರ್ಣ ಮಹೋತ್ಸವ ವರ್ಷವಾಗಿದ್ದು , ಪ್ರತಿಯೊಂದು ತಿಂಗಳು ವಿಶೇಷ ಕಾರ್ಯಕ್ರಮಗಳ ವರ್ಷವಾಗಿದೆ. ಪ್ರತಿಯೊಂದು ಭಕ್ತರಿಗೆ ಹಾಗೂ ಸುವರ್ಣ ಮಹೋತ್ಸವಕ್ಕೆ ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೆ ಶನಿ ದೇವರ ಅನುಗ್ರಹ ಪ್ರಾಪ್ತಿಯವಾಗಲಿ. ಶ್ರೀ ಕ್ಷೇತ್ರದ ಮಹಾಸಂಕಲ್ಪ ಇವತ್ತು ಪರಿಪೂರ್ಣವಾಗಿದೆ. ಸುವರ್ಣ ಮಹೋತ್ಸವದ ದೊಡ್ಡ ಯಜ್ಞವನ್ನು ನಾವು ಆಚರಿಸಿದ್ದೇವೆ ಎಂದರು.
ಅತಿಥಿ ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷರಾದ ಶ್ಯಾಂಮ್ ಎನ್ ಶೆಟ್ಟಿ, ಯವರು ಮಾತನಾಡುತ್ತಾ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರಿನಿವಾಸ ಸಾಫಲ್ಯರು ಕುರಾರ್ ನ ಶನಿ ದೇವರ ಮುತ್ತಿನ ರತ್ನದಂತೆ. ಅವರು ಯಾವ ಸಂಸ್ಥೆ ಯಾ ದೇವಸ್ಥಾನದಲ್ಲಿದ್ದರು ಅಲ್ಲಿ ಯಾವುದಕ್ಕೂ ಕಡೆಮೆ ಇರಲು ಅಸಾಧ್ಯ. ಎಲ್ಲರಿಗೂ ಶನಿ ದೇವರು ಸುಖ ಸಂಪತ್ತು ನೀಡಿ ಕರುಣಿಸಲಿ ಎಂದರು.
ಬಂಟರ ಸಂಘ ಹುಬ್ಬಳ್ಳಿ- ಧಾರವಾಡ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ, ಯವರು ಅತಿಥಿಯಾಗಿ ಆಗಮಿಸಿದ್ದು ಈ ಸಂದರ್ಭದಲ್ಲಿ ಮಾತನಾಡುತ್ತಾ ನಮ್ಮ ಸಂಘಟನೆಯು 50 ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು ಇವತ್ತು ಶನಿ ಪೂಜಾ ಸಮಿತಿಯ 50 ನೇ ಸುವರ್ಣ ಸಮಾರಂಭದಲ್ಲಿ ಭಾಗಿಯಾಗಿದ್ದೇನೆ. ಇಲ್ಲಿ ಶಿಸ್ತಿನಿಂದ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲಾ ಸಮುದಾಯದವರು ಇದರಲ್ಲಿದ್ದು ಒಗ್ಗಟ್ಟನ್ನು ತೋರಿಸುತ್ತಿದೆ. ಸಮಿತಿಯ ಮಹಿಳೆಯರು ಉತ್ತಮ ಯಕ್ಷಗಾನವನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು ಅಬಿನಂದನೆಗಳು. ಇಂದಿನ ಸಮಾರಂಭದಲ್ಲಿ ಯುವ ಜನಾಂಗ ಹಾಗು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅಭಿನಂದನೀಯ ಎಂದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ಮಾತನಾಡಿ ಬಂಗಾರದ ಮಹೋತ್ಸವದಲ್ಲಿ ಬಂಗಾರದಂತಹ ಕಾರ್ಯಕ್ರಮ ನಡೆದಿದೆ. ಸಮಿತಿಯ ಅಧ್ಯಕ್ಷರಿಗೂ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು. ಎಲ್ಲರಿಗೂ ಶನಿ ದೇವರ ಅನುಗ್ರಹವಿರಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಲ್ಲವರ ಅಸೋಷಿಯೇಶನಿನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ಸಮಾರಂಭಕ್ಕೆ ಶುಭ ಹಾರೈಸಿದರು.
ಸ್ಮರಣ ಸಂಚಿಕೆಯನ್ನು ಪ್ರವೀಣ್ ಭೋಜ ಶೆಟ್ಟಿ ಯವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದಿವ್ಯಸಾಗರ್ ಗ್ರೂಪ್ ಆಫ್ ಹೋಟೆಲ್ ನಿರ್ದೇಶಕ ಹಾಗೂ ಸಮಾಜಸೇವಕ ಮುದ್ರಾಡಿ ದಿವಾಕರ್ ಎನ್ ಶೆಟ್ಟಿ, ಮತ್ತು ರೌನಕ್ ಕಿಚನ್ ಎಕ್ವಿಪ್ಮೆಂಟ್ಸ್ ಪ್ರೈ. ಲಿಮಿಟೆಡ್ ನ ನಿರ್ದೇಶಕರಾದ ಶಂಕರ್ ಎಂ. ಶೆಟ್ಟಿ ಮತ್ತು ಶೋಭಾ ಶಂಕರ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.



ಶನಿ ಮಹಾತ್ಮ ಪೂಜಾ ಸಮಿತಿಯ ಮಾಜಿ ಅಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.
ಕೆಲವು ಕಾರ್ಯಕ್ರಮಗಳ ಪ್ರಾಯೋಜಕರಾಗಿ ಸಹಕರಿಸಿದ ಸುರೇಶ್ ಶೆಟ್ಟಿ , ಸಂತೋಷ್ ಪೂಜಾರಿ, ಶೇಖರ್ ಸಸಿಹಿತ್ತ್ಲು, ವಿಶ್ವನಾಥ್ ಶೆಟ್ಟಿ ಪೇತ್ರಿ, ಪ್ರಭಾಕರ್ ಶೆಟ್ಟಿ, ರಮೇಶ್ ಆಚಾರ್ಯ ಶೀತಲ್ ಕೋಟ್ಯಾನ್ ಮತ್ತಿತರನ್ನು ಗೌರವಿಸಲಾಯಿತು.
ಪೂಜಾ ಸಮಿತಿಯ ಸದಸ್ಯರೆಲ್ಲರೂ ಶ್ರೀನಿವಾಸ್ ಸಾಪಲ್ಯ ದಂಪತಿಯನ್ನು ಬಹಳ ಅದ್ದೂರಿಯಿಂದ ಸನ್ಮಾನಿಸಿದರು. ಅವರ ಸನ್ಮಾನ ಪತ್ರವನ್ನು ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಪೇತ್ರಿ ಓದಿ ಹೇಳಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಸಾಲ್ಯಾನ್ ದಂಪತಿಯನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ , ಬಂಟರ ಸಂಘ ಮುಂಬಯಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಅಪ್ಪಣ್ಣ ಶೆಟ್ಟಿ, ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಪಿ. ಸಾಪಲ್ಯ , ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಗೌ. ಕೋಶಾಧಿಕಾರಿ ಹರೀಶ್ ಜೆ. ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಗೌ. ಅಧ್ಯಕ್ಷರಾದ ಪ್ರೇಮನಾಥ್ ಸಾಲ್ಯಾನ್, ಉಪ ಕಾರ್ಯಾಧ್ಯಕ್ಷರುಗಳಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ , ಪಣಿಯೂರು, ಭಾರತ್ ಬ್ಯಾಂಕಿನ ನಿರ್ದೇಶಕ ಸಂತೋಷ್ ಕೆ ಪೂಜಾರಿ, ಮತ್ತು ರಮೇಶ್ ರಾವ್ ಕಾರ್ಯಕ್ರಮ ಸಂಯೋಜಕರಾದ ಬಿ. ದಿನೇಶ್ ಕುಲಾಲ್, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷರಾದ
ಸುರೇಶ್ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಪೇತ್ರಿ ಯವರು ಪ್ರಾಸ್ತಾವನಿಯ ಮಾತುಗಳನ್ನಾಡಿದರು.
ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಪೇತ್ರಿ ವಂದನಾರ್ಪಣೆ ಮಾಡಿದರು. ದಿನೇಶ್ ರಾಯಿ ಬಂಟ್ವಾಳ ಮತ್ತು ಜೀವಿಕಾ ವಿ ಶೆಟ್ಟಿ ಪೇತ್ರಿ
ಯವರು ಅತಿಥಿಗಳನ್ನು ಪರಿಚಯಿಸಿ ಸನ್ಮಾನ ಪತ್ರವನ್ನು ವಾಚಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕಾರಿ ಸಮಿತಿ ಯ ಎಲ್ಲಾ ಸದಸ್ಯರುಗಳು, ಮಹಿಳಾ ವಿಭಾಗ, ಯುವ ವಿಭಾಗ, ನಿಧಿ ಸಂಗ್ರ ಸಮಿತಿ, ಸ್ಮರಣ ಸಂಚಿಕೆ ಸಮಿತಿ ಯ ಎಲ್ಲಾ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
===
ಸನ್ಮಾನಿತರ ನುಡಿ.
ಕಳೆದ ೨೦ ವರ್ಷಗಳಿಂದ ನಾನು ಕ್ಷೇತ್ರಕ್ಕೆ ನನ್ನಿಂದಾಗುವ ಸಣ್ಣ ಕೆಲಸ ಮಾಡುತ್ತಿದ್ದೆ. ಸಮಿತಿಯವರು ಇಂದು ನನ್ನನ್ನು ಹುಡುಕಿ ದೊಡ್ಡ ಮಟ್ಟದ ಸನ್ಮಾನ ನೀಡಿದ್ದಾರೆ. ನಿಮ್ಮೊಂದಿಗೆ ನಾನು ಇನ್ನು ಮುಂದೆಯು ಶನಿ ದೇವರ ಸೇವೆ ಮಾಡುವೆನು. ಶನಿ ದೇವರು ನಿಮೆಗೆಲ್ಲರಿಗೆ ಆರೋಗ್ಯ ಭಾಗ್ಯ, ಐಶ್ವರ್ಯ ಭಾಗ್ಯ ಹಾಗೂ ಸಮಾಜ ಮುಖಿ ಭಾಗ್ಯ ದೊರಕಿಸಲಿ ಎಂದು ಪ್ರಾರ್ಥಿಸುತ್ತೇನೆ. – ಮುದ್ರಾಡಿ ದಿವಾಕರ್ ಎನ್ ಶೆಟ್ಟಿ,
=====
ಇಂದಿನ ಈ ಕ್ಷಣ ಜೀವನ ಪರ್ಯಂತ ನೆನಪಿಡಬೇಕಾದ ಕ್ಷಣ. ಶನಿ ದೇವರ ಬಂಗಾರದ ಹಬ್ಬದಲ್ಲಿ ಶೃಂಗಾರವಾದ ಈ ವೇದಿಕೆಯಲ್ಲಿ ನಮಗೆ ಸನ್ಮಾನ ಸಿಕ್ಕಿದ್ದು ದೇವರ ದಯೆ, ತಂದೆ ತಾಯಂದಿರು ಹಾಗು ಹಿರಿಯರ ಆಶೀರ್ವಾದ ದಿಂದ ಸಾಧ್ಯ. ಸನ್ಮಾನವನ್ನು ಶನಿ ದೇವರ ಪ್ರಸಾದವಾಗಿ ಸ್ವೀಕರಿಸಿದ್ದೇವೆ. ಸಮಾಜ ಸೇವೆ ಮಾಡಲು ದೇವರು ನಮಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೆವೆ; – ಶೋಭಾ ಶಂಕರ್ ಶೆಟ್ಟಿ
—————-
ಮಲಾಡ್ ಪರಿಸರದಲ್ಲಿ ಶನಿದೇವರು ಮತ್ತು ವರಮಹಾಲಕ್ಷ್ಮಿ ದೇವರು ಮೆರೆದಾಡುತ್ತಿದ್ದಾರೆ,; ಪ್ರವೀಣ್ ಭೋಜ ಶೆಟ್ಟಿ
ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಯವರು ಕ್ಷೇತ್ರದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಸೂರ್ಯ ದೇವರ ಅಂಶ ಶನಿ ದೇವರು ಮತ್ತು ಯಮ ದೇವರು ಹಾಗೂ ಲಕ್ಷ್ಮೀದೇವರಿಗೂ ಹೆದರುತ್ತಾರೆ, ಆದರೆ ಮಲಾಡ್ ಪರಿಸರದಲ್ಲಿ ಶನಿದೇವರು ಮತ್ತು ವರಮಹಾಲಕ್ಷ್ಮಿ ದೇವರು ಮೆರೆದಾಡುತ್ತಿದ್ದಾರೆ, ವರ್ಷಪೂರ್ತಿ ಮಲ್ನಾಡ್ ಪರಿಸರದಲ್ಲಿ ಭಜನೆ ಸತ್ಸಂಗ ಹೀಗೆ ಅಧ್ಯಾತ್ಮಿಕದ ಚಿಂತನ ಕಾರ್ಯಗಳು ಅವಿರತ ನಡೆಯುತ್ತಿದೆ, ಈ ಪರಿಸರದವರೆಲ್ಲರೂ ಪುಣ್ಯವಂತರು,
. ದೇವಸ್ಥಾನದ ಸದಸ್ಯರ ಪರಿಶ್ರಮಕ್ಕೆ ಸುವರ್ಣ ಮಹೋತ್ಸವ ಸಂಭ್ರಮ ದ ನೆನಪಿಗಾಗಿ ಬೆಳ್ಳಿಯ ಶನಿದೇವರ ಪದಕ ನೀಡಿದ್ದೀರಿ , ಇದು ಸದಸ್ಯರನ್ನು ಸದಾ ನೆನಪಿಸುತ್ತದೆ, ಸಮಿತಿಗೆ 100ನೇ ವರ್ಷದಲ್ಲಿ ಬಂಗಾರದ ಪದಕವನ್ನು ನೀಡುವ ಶಕ್ತಿ ನೀಡಲಿ . ಬದುಕುವುದಾದರೆ ಸಾಫಲ್ಯರಂತೆ ಬದುಕಬೇಕು ,ನಯ ವಿನಯದೊಂದಿಗೆ ಇರಬೇಕಾದರೆ ಪೇತ್ರಿಯವರಂತಿರಬೇಕು ಎನ್ನುತ್ತಾ ಬಂಟರ ಸಂಘದ ಪರವಾಗಿ ಹಾಗೂ ತನ್ನ ವೈಯಕ್ತಿಕ ಪರವಾರಿ ಎಲ್ಲರಿಗೂ ಶನಿ ದೇವರ ಅನುಗ್ರಹ ಇರಲಿ ಎಂದು ಹಾರೈಸಿದರು.
——
ಶನಿ ದೇವರು ನಮ್ಮ ಬದುಕಿನಲ್ಲಿ ಪ್ರವೇಶವಾದವಾಗ ಸನ್ಮಾರ್ಗದಲ್ಲಿ ನಡೆಯಲು ಮಾರ್ಗಸೂಚಿಸುತ್ತಾರೆ*; ಶಶಿಧರ ಕೆ ಶೆಟ್ಟಿ ಇನ್ನಂಜೆ
ಬಂಟರ ಸಂಘ ಮುಂಬಯಿ ಜೊತೆ ಕೋಶಾಧಿಕಾರಿ, ಜನಪ್ರಿಯ ಉದ್ಯಮಿ ಸಮಾಜ ಸೇವಕ ಶಶಿಧರ ಕೆ ಶೆಟ್ಟಿ ಇನ್ನಂಜೆ, ಮಾತನಾಡುತ್ತಾ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಬಾಗವಹಿಸಿದ ನಾವೆಲ್ಲರೂ ಪುಣ್ಯವಂತರು. ಮನುಷ್ಯರೆಲ್ಲರೂ ಶನಿ ದೇವರಿಗೆ ಮತ್ತು ಲಕ್ಷ್ಮಿಗೆ ಹೆಚ್ಚಾಗಿ ಭಯಪಡುತ್ತಾರೆ,
ಶನಿ ದೇವರು ನಮ್ಮನ್ನು ಮುಟ್ಟದಿರಲಿ. ಲಕ್ಷ್ಮಿ ನಮ್ಮಿಂದ ದೂರವಾಗದಿರಲಿ ಎನ್ನುವ ಭಯ ಪ್ರತಿಯೊಬ್ಬರಲ್ಲಿರುತ್ತದೆ ಆದರೆ ಶನಿ ದೇವರು ನಮ್ಮ ಬದುಕಿನಲ್ಲಿ ಪ್ರವೇಶವಾದವಾಗ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯಲು ಮತ್ತು ಬದುಕಿನಲ್ಲಿ ಎಚ್ಚರದಿಂದ ನಡೆಯಲು ಮಾರ್ಗ ವನ್ನು ನೀಡುತ್ತಾರೆ ಆದ್ದರಿಂದ ಶನಿದೇವರು
ನಾಮ ಸ್ಮರಣೆಯಿಂದ ಕಷ್ಟ ಪರಿಹಾರವಾಗಲು ಸಾಧ್ಯ. ಪ್ರತೀ ಶನಿವಾರ ಶನಿ ದೇವರ ಆರಾದನೆ ಮಾಡಬೇಕು. ಮುಂದಿನ ದಿನ ಈ ಕ್ಷೇತ್ರವು ೭೫ ಹಾಗೂ ೧೦೦ ವರ್ಷವನ್ನು ಇನ್ನೂ ವಿಜ್ರಂಭಣೆಯಿಂದ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.