
ಭಾಯಂದರ್ ಎ 12. ಭಾಯಂದರ್ ಪೂರ್ವದಲ್ಲಿ ಅನಾದಿ ಕಾಲದಿಂದ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು ಸಕಾಲದಲ್ಲಿ ಈಡೇರಿಸುವ ಶ್ರೀ ಮೂಕಾಂಬಿಕಾ ಶಾಂತ ದುರ್ಗಾ ದೇವಿಯ ವಾರ್ಷಿಕ ಮಹಾಪೂಜೆಯು ಶ್ರೀ ಸುಂದರಿ ಶೆಟ್ಟಿ ಪರಿವಾರ,ಸಮಿತಿಯ ಸದಸ್ಯರು ಹಾಗೂ ಭಾಕ್ತಾಭಿಮಾನಿಗಳ ಇಚ್ಛೆಯಂತೆ ಬಹು ವಿಜೃಂಭಣೆಯಿಂದ ಧರ್ಮ ಸೇವಕ ಶೇಖರ್ ಶೆಟ್ಟಿಯವರ ಶುಭ ಹಸ್ತದಿಂದ ಪ್ರತಿವರ್ಷದಂತೆ ಈ ವರ್ಷವೂ ಸನ್ನಿಧಾನದಲ್ಲಿ (ಜಿ .03 ನ್ಯೂ ಕೃಷ್ನ ಪ್ಯಾಲೇಸ್, ನರೇಶ್ ಸ್ಟೀಲ್ ಸಮೀಪ, ಎಸ್ ವಿ ರೋಡ್, ಭಾಯಂಧರ್ ಪೂರ್ವ ಇಲ್ಲಿ)ಜರಗಲಿದೆ.*
ಬೆಳಿಗ್ಗೆ. 7.30ಕ್ಕೆ ವನದುರ್ಗಾ ಹೋಮ.
ಬೆಳಿಗ್ಗೆ 10.00 ರಿಂದ ಭಜನೆ ಬೆಳಿಗ್ಗೆ 11.30ಕ್ಕೆ ಪುಷ್ಪ ಅಲಂಕಾರ.ಶ್ರೀ ದೇವಿ ದರ್ಶನದೊಂದಿಗೆ.ಮಂಗಳಾರತಿ..
ಮಧ್ಯಾನ್ಹ 12.30 ನಂತರ ಮಹಾ ಪ್ರಸಾದ ಅನ್ನ ಸಂತರ್ಪಣೆ ನಡೆಯಲಿದೆ..
*ಹಾಗೂ ಅಂದೆ ದಿನ ಸಂಜೆ 6.00 ರಿಂದ ಮಾತೆ ಶಾಂತದುರ್ಗೆಗೆ ಭಜನೆ,.7.00 ಗಂಟೆಗೆ ಹೂವಿನ ಪೂಜೆ ಮಂಗಳಾರತಿ.ರಾತ್ರಿ 8.00ರಿಂದ ಅನ್ನ ಸಂತರ್ಪಣೆ ಜರಗಲಿದೆ,
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವು ತಮ್ಮ ಬಂಧು ಇಷ್ಟ ಮಿತ್ರ ರೊಂದಿಗೆ ಆಗಮಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಿ ತೀರ್ಥ ಪ್ರಸಾದ ಮತ್ತು ಅನ್ನ ಪ್ರಸಾದವನ್ನು ಸ್ವೀಕರಿಸ ಬೇಕೆಂದು.. ಧರ್ಮ ಸೇವಕ ಶೇಖರ್ ಶೆಟ್ಟಿ, ಮತ್ತು ಸುಂದರಿ ಶೆಟ್ಟಿ ಪರಿವಾರ. ಮೂಕಾಂಬಿಕಾ ಶಾಂತ ದುರ್ಗಾ ಸೇವಾ ಸಮಿತಿ ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ