
ಪ್ರಥಮ – ಚಿಣ್ಣರ ಬಿಂಬ ಬಾಯಂದರ್ ಶಿಬಿರ, ದ್ವಿತೀಯ – ಕುಲಾಲ ಸಂಘ ಮೀರಾ -ವಿರಾರ್ ಸ್ಥಳೀಯ ಸಮಿತಿ ತೃತೀಯ – ಅಮಿತಾ ಕಲಾ ಮಂದಿರ
ಮುಂಬಯಿ :ಮಲಾಡ್ ಪೂರ್ವ ಲಕ್ಷ್ಮಣ ನಗರ ಕುರಾರ್ ವಿಲೇಜ್ ನ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಮಾರಂಭವು ಎ. 7 ರಂದು ಲತಾ ಮಂಗೇಶ್ಕರ್ ನಾಟ್ಯಾಗೃಹ ಸಭಾಗೃಹ, ಮಹಾಜನ್ ವಾಡಿ, ಮೀರಾರೋಡ್ ಪೂರ್ವ ಇಲ್ಲಿ ಜರಗಿದ್ದು
ಸಮಾರಂಭದಲ್ಲಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ನೃತ್ಯ ಸ್ಪರ್ಧೆಯಲ್ಲಿ ಮಹಾನಗರ ಹಾಗೂ ಉಪನಗರಗಳ ಹನ್ನೊಂದು ತಂಡಗಳು ಬಾಗವಹಿಸಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಚಿಣ್ಣರ ಬಿಂಬ ಬಾಯಂದರ್ ತಂಡ ಪ್ರಥಮ ಸ್ಥಾನ ಗಳಿಸಿದರೆ ,ದ್ವಿತೀಯ ಬಹುಮಾನವನ್ನು ಕುಲಾಲ ಸಂಘ ಮೀರಾ ರೋಡ್ -ವಿರಾರ್ ಸ್ಥಳೀಯ ಸಮಿತಿ, ಹಾಗೂ ಮೂರನೇ ಬಹುಮಾನವನ್ನು ಅಮಿತ ಕಲಾ ಮಂದಿರದ ಕಲಾವಿದರು ಪಡೆದಿದ್ದಾರೆ.ತೀರ್ಪುಗಾರರಾಗಿ ಲತಾ ಧನರಾಜ್ ಕೋಟ್ಯಾನ್, ಅನನ್ಯ ಶೆಟ್ಟಿ, ಮತ್ತು ಕೀರ್ತನ ಕುಂದರ್ ಸಹಕರಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರಿನೀವಾಸ ಸಾಫಲ್ಯರು ವಹಿಸಿದ್ದರು,
ಶ್ರೀ ಶನೀಶ್ವರ ಕ್ಷೇತ್ರ ಮಲಾಡ್ ಇದರ ಪುರೋಹಿತರಾದ ವೇದಮೂರ್ತಿ ರಾಘವೇಂದ್ರ ತುಂಗಾ ಭಟ್ , ಮುಖ್ಯ ಅತಿಥಿಗಳಾದ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ,
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ಬಂಟರ ಸಂಘ ಹುಬ್ಬಳ್ಳಿ- ಧಾರವಾಡ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ, ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷರಾದ ಶ್ಯಾಂಮ್ ಎನ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಅಪ್ಪಣ್ಣ ಶೆಟ್ಟಿ, ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ , ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಗೌ. ಕೋಶಾಧಿಕಾರಿ ಹರೀಶ್ ಜೆ. ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್, ಸುವರ್ಣ ಮಹೋತ್ಸವ ಸಮಿತಿಯ ಗೌ. ಅಧ್ಯಕ್ಷರಾದ ಪ್ರೇಮನಾಥ್ ಸಾಲ್ಯಾನ್, ಉಪ ಕಾರ್ಯಾಧ್ಯಕ್ಷರುಗಳಾದ ನ್ಯಾ. ಜೆ.ಎನ್. ಶೆಟ್ಟಿ , ಸಂತೋಷ್ ಪೂಜಾರಿ, ಮತ್ತು ರಮೇಶ್ ರಾವ್ ಕಾರ್ಯಕ್ರಮ ಸಂಯೋಜಕರಾದ ಬಿ. ದಿನೇಶ್ ಕುಲಾಲ್, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷರಾದ
ಸುರೇಶ್ ಶೆಟ್ಟಿ, ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಪೇತ್ರಿ ವಂದನಾರ್ಪಣೆ ಮಾಡಿದರು. ದಿನೇಶ್ ರೈ ಮತ್ತು ಜೀವಿಕಾ ವಿ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.
ನೃತ್ಯ ಸ್ಪರ್ಧೆಯ ವಿಜೇತರು ಹೆಸರನ್ನು ಕಿರಣ್ ಕುಮಾರ್ ಸಭೆಗೆ ತಿಳಿಸಿದರು.