
ಮುಲ್ಕಿ ತಾಲ್ಲೂಕಿನ ಉಳೆಪಾಡಿ ಗ್ರಾಮದ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಎಡಪದವು ಶ್ರೀ ವೆಂಕಟೇಶ ತಂತ್ರಿಗಳ ನೇತೃತ್ವದಲ್ಲಿ ಏಪ್ರಿಲ್ 23 ರಿಂದ 25 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
23 ರಂದು ಬೆಳಿಗ್ಗೆ: ಪುಣ್ಯಾಹ ವಾಚನ, ಕಲಶಾಭಿಷೇಕ, ಧ್ವಜಾರೋಹಣ. ಮಧ್ಯಾಹ್ನ: ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ: ಉತ್ಸವಬಲಿ, ಅನ್ನ ಸಂತರ್ಪಣೆ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಶ್ರೀ ವಿನಾಯಕ ಯಕ್ಷ ಕಲಾ ತಂಡ(ರಿ.), ಕೆರೆಕಾಡು ಮುಲ್ಕಿ ಇವರಿಂದ ಯಕ್ಷಗಾನ ಪ್ರಸಂಗ “ವೀರ ಮಾರುತಿ” ನಡೆಯಲಿದೆ.
ಏಪ್ರಿಲ್ 24 ರಂದು ಬೆಳಿಗ್ಗೆ: ಅಭಿಷೇಕ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಉಳೆಪಾಡಿ ಇವರಿಂದ ಭಜನಾ ಕಾರ್ಯಕ್ರಮ, ಶ್ರೀ ಕಾಳಿಕಾಂಬ ಮಹಿಳಾ ವೃಂದ, ಕಿನ್ನಿಗೋಳಿ ಇವರಿಂದ ಭಜನಾ ಕಾರ್ಯಕ್ರಮ. ಮಧ್ಯಾಹ್ನ : ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ: ಶ್ರೀ ಅಯ್ಯಪ್ಪ ಭಜನಾ ಮಂಡಳಿ ಸಂಕಲಕರಿಯ ಇವರಿಂದ ಭಜನಾ ಕಾರ್ಯಕ್ರಮ, ಕಟ್ಟೆ ಪೂಜೆ, ಉತ್ಸವ ಬಲಿ, ಭೂತ ಬಲಿ, ಕವಾಟ ಬಂಧನ, ಅನ್ನಸಂತರ್ಪಣೆ, ‘ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್, ಬೋಳಾರ್, ವಾಮಂಜೂರು ಅಭಿನಯದಲ್ಲಿ ಚಾಪರ್ಕ ಕಲಾವಿದರಿಂದ ವಿಭಿನ್ನ ಶೈಲಿಯ ನಾಟಕ “ಪುದರ್ ದೀದಾಂಡ್” ನಡೆಯಲಿದೆ.
ಏಪ್ರಿಲ್ 25 ರಂದು ಬೆಳಿಗ್ಗೆ: ಕವಾಟೋದ್ಘಾಟನೆ, ಚೂರ್ಣೋತ್ಸವ, ತುಲಾಭಾರ ಸೇವೆ ಭಜನಾ ಕಾರ್ಯಕ್ರಮ. ಮಧ್ಯಾಹ್ನ: ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ: ಅವಭ್ರತೋತ್ಸವ, ವಾರಾಹಿ ದೈವ – ಉಮಾಮಹೇಶ್ವರ ದೇವರ ಭೇಟಿ, ದ್ವಜಾವರೋಹಣ ಮಹಾಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾದಿಗಳಾದ ತಾವೆಲ್ಲರೂ ಬಂಧು ಮಿತ್ರರೊಡಗೂಡಿ ತನು ಮನ ಧನ ಗಳಿಂದ ಸಹಕರಿಸಿ, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಬೇಕಾಗಿ ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಅರುಣಾ ಕುಲಾಲ್, ಉಳೆಪಾಡಿ