
ಬಡಗುತಿಟ್ಟಿನ ಶೇಷ್ಠ ಭಾಗವತ, ಯಕ್ಷ ರಂಗದ ತಜ್ಞ ಭಾಗವತರೆಂದು ಗುರುತಿಸಲ್ಪಟ್ಟ ಸುಭ್ರಮಣ್ಯ ಧಾರೇಶ್ವರ್ ಇಂದು (ಏ.25)ಬೆಳ್ಳಿಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು, ಅವರಿಗೆ 67 ವರ್ಷ ಪ್ರಾಯವಾಗಿತ್ತು.
ಅವರು ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್, ಪುತ್ರಿ, ಹಾಗೂ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿರುವರು.
ಕೋಟ ಅಮೃತೇಶ್ವರಿ, ಶ್ರೀ ಪೆರ್ಡೂರು ಮೇಳದಲ್ಲಿ ಅವರು ಭಾಗವತರಾಗಿ, ಹೊಸ ರಾಗಗಳನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿರುವರು. ಅವರು ಸುಮಾರು 400ಕ್ಕೂ ಅಧಿಕ ಯಕ್ಷಗಾನದ ಅಡಿಯೋ ಕ್ಯಾಸೆಟ್ ಗೆ ದ್ವನಿಯಗಿದ್ದಾರೆ. ಪೆರ್ಡೂರು ಮೇಳದಲ್ಲಿ 26 ವರ್ಷ 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ಅವರು ನಿರ್ದೇಶಿಸಿದ್ದು, ಎಲ್ಲಾ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಅವರ ನಿಧನ ಯಕ್ಷರಂಗಕ್ಕೆ ತುಂಬಲಾರದ ನಷ್ಟ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ ಕುಂದಾಪುರ ತಾಲೂಕಿನ ನಾಗೂರಿನ ಅವರ ಸ್ವಗ್ರಹದಲ್ಲಿ ನಡೆಯಲಿದೆ.