
ಉಡುಪಿಯ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠದ ನೂತನ ಬಾಲಭೋಜನಾಲಯ ಮತ್ತು ಧ್ಯಾನ ಮಂದಿರದ ಲೋಕಾರ್ಪಣ ಸಮಾರಂಭ ಮೇ 10ರ ಶುಕ್ರವಾರ ಜರಗಲಿದೆ.
ಅಂದು ಬೆಳಿಗ್ಗೆ 8.30 ಗಂಟೆಗೆ ಗಣಹೋಮ, ಬೆಳ್ಳಿಗ್ಗೆ 9.30ಕ್ಕೆ ಮಕ್ಕಳ ಭಜನಾ ಕುಣಿತ ಸ್ಪರ್ಧೆ, ಮದ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆದು ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ಆರಂಭವಾಗಲಿದೆ.
ಸಂಜೆ 6 ಗಂಟೆಗೆ ಉದ್ಯಮಿ, ಗುರುಗಳ ಪರಮ ಭಕ್ತ ಕೆ. ಕೆ. ಆವರ್ಸೆಕರ್ ಅವರ ಅಧ್ಯಕ್ಷೆತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು, ಶ್ರೀಧಾಮ ಮಾಣಿಲ ದ ಪರಮಾಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು.’ಆನಂದಾಶ್ರಮ’, ಬೇವಿನಕೊಪ್ಪ ದ ಪರಮಾಪೂಜ್ಯ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ ಶುಭಾಶಂಸನೆ ಗೈಯಲಿರುವರು.

ಮುಖ್ಯ ಅತಿಥಿಗಳಾಗಿ ಮುಂಬೈಯ ಉದ್ಯಮಿ, ದಾನಿ ಸುರೇಂದ್ರ ಕಲ್ಯಾಣಪುರ, ಶ್ಯಾಮಿಲಿ ಪ್ಯಾಮಿಲಿ ಟ್ರಸ್ಟ್ ನ ಪ್ರವರ್ಥಕ ನಾಡೋಜ ಜಿ ಶಂಕರ್ ಸಮಾರಂಭದಲ್ಲಿ ಉಪಸ್ಥಿತರಿರುವರು.
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ – ಉಡುಪಿಯ ಆಡಳಿತ ಟ್ರಷ್ಟಿ ಕೆ ಕೆ ಆವರ್ಸೆಕರ್, ಎಕ್ಸಿಕ್ಯೂಟಿವ್ ಟ್ರಷ್ಟಿ ಕೆ ದಿವಾಕರ ಶೆಟ್ಟಿ ತೋಟದಮನೆ, ಜಾಯಿಂಟ್ ಎಕ್ಸಿಕ್ಯೂಟಿವ್ ಟ್ರಷ್ಟಿ ಮೋಹನ್ಚಂದ್ರನ್ ನಂಬಿಯಾರ್, ಕಾರ್ಯದರ್ಶಿ ತೋನ್ಸೆ ನವೀನ್ ಶೆಟ್ಟಿ ಮುಂಬಯಿ, ಕೋಶಧಿಕಾರಿ ನರಸಿಂಹ ಶೆಣೈ ಎಂ, ಸುರೇಂದ್ರ ಕಲ್ಯಾಣಪುರ ಮುಂಬೈ, ಪುರುಷೋತ್ತಮ ಪಿ ಶೆಟ್ಟಿ ಉಡುಪಿ, ಮಾಜಿ ಸಚಿವ ಬಿ ನಾಗರಾಜ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ ಮುಂಬೈ, ನಿತ್ಯಾನಂದ ಖೋಡೆ ಬೆಂಗಳೂರು, ರವಿ ಎಸ್ ಶೆಟ್ಟಿ ಸಾಯಿರಾಧ ಮುಂಬೈ, ಸೂರ್ಯಪ್ರಕಾಶ್ ಕೆ ಹರ್ಷ ಗ್ರೂಪ್ ಉಡುಪಿ, ರವೀನಾಥ್ ವಿ ಶೆಟ್ಟಿ ಅಂಕಲೇಶ್ವರ, ಕೆ ನಟರಾಜ್ ಹೆಗ್ಡೆ ಪಳ್ಳಿ, ಸತೀಶ್ ಶೆಟ್ಟಿ ಪಟ್ಲ, ಪ್ರಕಾಶ್ ಕೆ ಬೆಂಗಳೂರು, ಆಶಿಶ್ ಕೆ ಆವರ್ಸೆಕರ್ ಮುಂಬೈ, ಸಿ ಕೆ ಪಾಟೀಲ್ ಸಿಎ ಮುಂಬೈ, ಶಾರದಾ ಸೂರು ಕರ್ಕೇರ ಉಡುಪಿ, ಸಿಬಿಡಿ ಭಾಸ್ಕರ್ ಶೆಟ್ಟಿ ಮುಂಬೈ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಬನ್ನಂಜೆ, ಪ್ರಧಾನ ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿಟ್ಪಾಡಿ, ಕೋಶಾಧಿಕಾರಿ ಶಶಿಕುಮಾರ್ ಶೆಟ್ಟಿ ಗೋವಾ, ಕಾರ್ಯಕಾರಿ ಸಮಿತಿ ಹಾಗೂ ಸೇವಾ ಸಮಿತಿ ಸದಸ್ಯರು ಗುರು ಮೇ.10ರಂದು ಜರಗುವ ಸಮಾರಂಭಕ್ಕೆ ಎಲ್ಲರನ್ನೂ ಸ್ವಾಗತಿಸಿದ್ದಾರೆ.
ವಿಶೇಷ ಸೂಚನೆ : ದಿನಾಂಕ 9, ಗುರುವಾರ ಸಂಜೆ 4 ಗಂಟೆಯಿಂದ ರಾತ್ರಿ 7.30ರ ತನಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ” ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಏರ್ಮಾಳು” ಅವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.