

ಸಮಾಜವನ್ನು ಸದಾ ಗೌರವದಿಂದ ಬೆಳೆಸಿಕೊಂಡವರು: ಗಂಗಾಧರ್ ಜೆ ಪೂಜಾರಿ
ಮುಂಬಯಿ ಮೇ 24. :ಬಿಲ್ಲವರ ಅಸೋಸಿಯೇಶನ್ ಮುಂಬಯಿ ಯ ಯುವ ಅಭ್ಯುದಯದ ಮಾಜಿ ಕಾರ್ಯಧ್ಯಕ್ಷ ಹಾಗೂ ಸೇವಾದಳದ ಕಾರ್ಯಧ್ಯಕ್ಷರಾದ ನಾಗೇಶ್ ಕೋಟ್ಯಾನ್ ರವರು ಹ್ರಧಯಘಾತದಿಂದ ದೈವದೀನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಕಾಂದಿವಲಿ ಸ್ಥಳೀಯ ಕಚೇರಿಯು ಮೇ.23ರಂದು ಆಯೋಜಿಸಿತ್ತು. ಕಾಂದಿವಲಿ ಪಶ್ಚಿಮದ ಸ್ತಳಿಯ ಕಛೇರಿಯಲ್ಲಿ ನಡೆದ ಸಭೆಯಲ್ಲಿ, ಭಾರತ್ ಬ್ಯಾಂಕ್ ನ ನಿರ್ದೇಶಕರೂ, ಕಾಂದಿವಲಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಧ್ಯಕ್ಷರು ಆದ ಗಂಗಾಧರ್ ಜೆ ಪೂಜಾರಿ, ಬಿಲ್ಲವ ಸಮಾಜದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಮಹಿಳಾ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ನುಡಿ ನಮನವನ್ನು ಸಲ್ಲಿಸಿದ ಗಂಗಾಧರ್ ಜೆ ಪೂಜಾರಿಯವರು ನಾಗೇಶ್ ಅವರು ಅಸೋಸಿಯೇಷನ್ ನಲ್ಲಿ ಸುಧೀರ್ಘಕಾಲದಿಂದಲೂ ವಿವಿಧ ಜವಾಬ್ದಾರಿಯನ್ನು, ಹುದ್ದೆಯನ್ನು ಅಲಂಕರಿಸಿ, ನಿಸ್ವಾರ್ಥ ಸೇವೆಗೈದು, ಸಮಾಜವನ್ನು ಸದಾ ಗೌರವದಿಂದ ಬೆಳೆಸಿಕೊಂಡವರು. ಯುವ ಸಮುದಾಯಕ್ಕೆ ಅವರು ಆದರ್ಶರಾಗಿದ್ದರು ಎಂದು ನುಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ಯೋಗೇಶ್ ಕೆ ಹೆಜ್ಮಾಡಿ, ಮಾಜಿ ಗೌರವ ಕಾರ್ಯಧ್ಯಕ್ಷ ಭಾಸ್ಕರ್ ಎಮ್ ಪೂಜಾರಿ, ಜೊತೆ ಕಾರ್ಯದರ್ಶಿ ವಾರಿಜಾ ಎಸ್ ಕರ್ಕೇರ, ಪ್ರಧಾನ ಕಚೇರಿಯ ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಸಬಿತಾ ಪೂಜಾರಿ, ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷ ರಮೇಶ್ ಬಂಗೇರ, ಗೌರವ ಕೋಶಾಧಿಕಾರಿ ಯಮುನಾ ಬಿ ಸಾಲಿಯಾನ್ ನಾಗೇಶ್ ಕೋಟ್ಯಾನ್ ಅವರ ವ್ಯಕ್ತಿತ್ವ, ಸೇವೆಗಳನ್ನು ಸ್ಮರಿಸುತ್ತಾ, ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಕಾರ್ಯಕರ್ತರು, ವಿಶೇಷ ಆಮಂತ್ರಿತರರು, ಯುವಕ ವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು.b ದಿವಂಗತ ನಾಗೇಶ್ ಕೋಟ್ಯಾನ್ ರವರ ಪವಿತ್ರ ಧಿವ್ಯಆತ್ಮಕ್ಕೆ ಪರಮಾತ್ಮನು ಚಿರಶಾಂತಿ,ಸದ್ಗತಿ ನೀಡಲೆಂದು ಮೌನ ಪ್ರಾರ್ಥನೆ ಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು .