
ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಸಮಾಜ ಸೇವಕ, ಉದ್ಯಮಿ, ಕಲಾಪೋಷಕ ಚೆಂಬೂರು ನಿವಾಸಿ ವಿಜಯ್ ಬಿ ಹೆಗ್ಡೆಯವರು (63) ಅನಾರೋಗ್ಯದಿಂದ ಇಂದು, ತಾರೀಖು 26-05-2024 ನರ ರವಿವಾರದಂದು ಚೆಂಬೂರಿನ ಸ್ವಗ್ರಹದಲ್ಲಿ ನಿಧನರಾದರು.
ಹೆಗ್ಗಡೆ ಸೇವಾ ಸಂಘದ ಉನ್ನತಿಯಲ್ಲಿ ಮುಂಚೂಣಿಯಲ್ಲಿ ನಿಂತು ದುಡಿದು ಹೆಗ್ಗಡೆ ಭವನ ಕಟ್ಟಡ ನಿರ್ಮಾಣದಲ್ಲಿ ಕೈ ಜೋಡಿಸಿದ ವಿಜಯ ಹೆಗ್ಡೆ ಅವರು ಸಂಸ್ಥೆಯಲ್ಲಿ ವಿವಿದ ಹುದ್ದೆಗಳಲ್ಲಿ ದುಡಿದು ಸುಮಾರು 8 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. ಅವರ ಸೇವಾ ಕಾಲದಲ್ಲಿ ಅದೆಷ್ಟೋ ಉತ್ತಮ ಸಮಾಜಪರ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಸಮಾಜದ ಬಡ ಕುಟುಂಬಗಳಿಗೆ ಸಂಸ್ಥೆಯ ವತಿಯಿಂದ ಸಹಾಯ ಹಸ್ತವನ್ನು ನೀಡಿರುವರು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.