
ವರದಿ : ಪ್ರಕಾಶ್ ಚಂದ್ರ ಎಂ ಆರ್
ಮುಂಬಯಿ : 2023 -24ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಸಿ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು.ಮುಂಬೈ ಕೋಟೆ ಪರಿಸರದಲ್ಲಿ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು, ತನ್ನ ಸ್ಥಾಪನೆಯ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡ ಸಂಸ್ಥೆ ವಿದ್ಯಾದಾಯಿನಿ ಸಭಾ, ಇದರ ಸಂಚಾಲಕತ್ವದಲ್ಲಿರುವ ಕೆನರಾ ವಿದ್ಯಾ ದಾಯಿನಿ ರಾತ್ರಿ ಶಾಲೆಗೆ ಶೇಕಡಾ 80 % ಫಲಿತಾಂಶವು ದೊರಕಿದೆ.
ಗಿರೀಶ್ ಬಸವರಾಜ ಮಿರಾಲಿ ಇವರು ಶೇಕಡ 64.8 % ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುದಲ್ಲದೆ ಮುಂಬೈಯ ಎಲ್ಲಾ ಕನ್ನಡ ಮಾಧ್ಯಮದ ರಾತ್ರಿ ಶಾಲೆಗಳಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ. ಇದಲ್ಲದೆ ಗಣೇಶ್ ನಾಗರಾಜ ಮಿರಾಲಿ ಅವರು ಶೇಕಡಾ 45.40% ಹಾಗೂ ರಘುನಾಥ ಲಿಂಗರಾಜ ಮಿರಾಲಿ ಅವರು 42.40% ಅಂಕಗಳೊಂದಿಗೆ ಕ್ರಮವಾಗಿ ದ್ವಿತೀಯ ಹಾಗು ತೃತೀಯ ಸ್ಥಾನಗಳಲ್ಲಿ ಅಲಂಕರಿಸಿದ್ದಾರೆ.
ಕಳೆದ 14 ವರ್ಷಗಳಿಂದ ಶಾಲೆಯನ್ನು ನಡೆಸಲು ಸರಿಯಾದ ಸ್ಥಳಾವಕಾಶದ ಕೊರತೆ ಇದ್ದರೂ ವಿದ್ಯಾ ದಾಯಿನಿ ಸಭೆಯು ಪ್ರಸ್ತುತ ತನ್ನ ಕಚೇರಿಯಲ್ಲೇ ಶಾಲಾ ತರಗತಿಗಳನ್ನು ಜರುಗಿಸುತ್ತಲ್ಲಿದ್ದು ವಿದ್ಯಾರ್ಥಿಗಳು ದಿನಂಪ್ರತಿ ಶಾಲೆಗೆ ಬಂದು ಪಾಠ ಪ್ರವಚನಗಳಲ್ಲಿ ಉತ್ಸಕತೆಯಿಂದ ಭಾಗವಹಿಸಿ, ಉತ್ತಮವಾದ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾದಾಯಿನಿ ಸಭೆಯ ಅಧ್ಯಕ್ಷರಾದ ಪುರುಷೋತ್ತಮ ಕೋಟ್ಯಾನ್, ಕಾರ್ಯಧ್ಯಕ್ಷರಾದ ಜಿ.ಸಿ ಸಾಲಿಯನ್,ಗೌರವ ಅಧ್ಯಕ್ಷರಾದ ಜೆಎಂ ಕೋಟ್ಯಾನ್, ಗೌರವ ಕಾರ್ಯದರ್ಶಿಗಳಾದ ಚಿತ್ರಾಪು ಕೆ.ಎಂಕೋಟ್ಯಾನ್, ಉಪಾಧ್ಯಕ್ಷರಾದ ಆರ್. ಕೆ .ಕೋಟ್ಯಾನ್, ಶಾಲಾಧಿಕಾರಿಯಾದ ಡಾ. ಪ್ರಕಾಶ್ ಮೂಡುಬಿದ್ರೆ, ಶಿಕ್ಷಕರಾದ ಸಿದ್ದರಾಮಯ್ಯ ಖಿಲಾರಿ, ಬಿಪಿನ್ ದುಬೆ,ಚಿತ್ರಲೇಖ ಮಾಲಿ,ಶಿಕ್ಷಕೇತರ ಸಿಬ್ಬಂದಿಗಳಾದ ಎಚ್.ಎಸ್. ಪೂಜಾರಿ, ವಿಜಯ ಪೂಜಾರಿ,ದಿನೇಶ್ ಪೂಜಾರಿ ಮತ್ತು ಮುಖ್ಯ ಶಿಕ್ಷಕರಾದ ಪ್ರಕಾಶ್ಚಂದ್ರ ಎಂ. ಆರ್. ಬಂಗೇರರವರು ಶಾಲೆಗೆ ಉತ್ತಮ ಫಲಿತಾಂಶ ಬರಲು ಕಾರಣರಾದ ಶಿಕ್ಷಕ -ಶಿಕ್ಷಕೇತರ ವರ್ಗದವರನ್ನು ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರವನ್ನು ಮುಕ್ತ ಕಂಠದಿಂದ ಮನದುಂಬಿ ಅಭಿನಂದಿಸಿದ್ದಾರೆ.
ಕೆನರಾ ವಿದ್ಯಾ ದಾಯಿನಿ ರಾತ್ರಿ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ 98 ವರ್ಷಗಳ ಸಾರ್ಥಕವಾದ ಸೇವೆಯನ್ನು ಸಲ್ಲಿಸಿ ಕಳೆದ 11 ವರ್ಷಗಳಿಂದ ಎಸ್ ಎಸ್ ಸಿ ಯಲ್ಲಿ ಶೇಕಡ 100% ಫಲಿತಾಂಶವನ್ನು ದಾಖಲಿಸುತ್ತಿದ್ದು. ಈ ಬಾರಿ ಓರ್ವ ವಿದ್ಯಾರ್ಥಿಯು ಮರಾಠಿ ವಿಷಯದಲ್ಲಿ ಒಂದೇ ಒಂದು ಅಂಕದಿಂದ ಅನುತ್ತೀರ್ಣನಾಗುದರೊಂದಿಗೆ ಶಾಲಾ ಯಶಸ್ಸಿನ ಶೇಕಡ 100 ಫಲಿತಾಂಶದ ಸರಣಿಯ ಕೊಂಡಿಯ ಮುರಿದರೂ ಶಾಲಾ ವಿದ್ಯಾರ್ಥಿಗಳು ಉತ್ತಮವಾದ ಸಾಧನೆಗೈಯಲ್ಲಿ ಸಫಲರಾಗಿದ್ದಾರೆ. ವಿದ್ಯಾದಾಯಿನಿ ಸಭಾವು ಹಲವಾರು ದಶಕಗಳಿಂದ 8 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ, ನೋಟ್ಸ್ ಪುಸ್ತಕ ,ಬಸ್ ಪಾಸ್ ,ಟ್ರೈನ್ ಪಾಸ್ ನೊಂದಿಗೆ ರಾತ್ರಿ ಶಾಲೆಗೆ ಉಚಿತ ಪ್ರವೇಶದೊಂದಿಗೆ ,ಸಂಪೂರ್ಣವಾದ ಶಿಕ್ಷಣವನ್ನು ಉಚಿತವಾಗಿ ನೀಡುತಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ನಮ್ಮ ಶಾಲೆಯು ಮುಂಬೈ ಮಹಾ ನಗರದಲ್ಲಿ ಶತಮಾನೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಶಾಲೆಗೆ 8 ರಿಂದ 10 ನೇ ತರಗತಿಗೆ ವಿದ್ಯಾರ್ಥಿಗಳನ್ನು ಸೇರಿಸುವ ಮುಖಾಂತರ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿರಿ ಎಂದು ವಿದ್ಯಾದಾಯಿನಿ ಸಭಾದ ಅಧ್ಯಕ್ಷರಾದ ಪುರುಷೋತ್ತಮ್ ಕೋಟ್ಯಾನ್ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಪ್ರಕಾಶ್ ಚಂದ್ರ ಎಂ ಆರ್
7021931365