
ಮುಂಬಯಿ, ಮೇ.27: 2023-24 ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ರಾಜ್ಯ ಎಸ್ ಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಮಲಾಡ್ ಪೂರ್ವದ ಕುರಾರ್ ವಿಲೇಜಿನ ಸೈಂಟ್ ಜಾರ್ಜ್ ಹೈಸ್ಕೂಲಿನ ವಿದ್ಯಾರ್ಥಿ ಪ್ರಣವ್ ಬಾಲಕೃಷ್ಣ ಕೋಟ್ಯಾನ್ ಶೇ.95.60 ಅಂಕ ಪಡೆದು ಉತ್ತೀರ್ಣನಾಗಿದ್ದಾನೆ.
ಈತ ಮಲಾಡ್ ಕುರಾರ್ ವಿಲೇಜ್ ನಿವಾಸಿಗಳಾದ ಮೂಡಬಿದ್ರೆ ಬಾಲಕೃಷ್ಣ ಕೋಟ್ಯಾನ್ ಮತ್ತು ಕಟಿಪಾಡಿ ಮಟ್ಟು ರಾಜಶ್ರೀ ಕೋಟ್ಯಾನ್ ದಂಪತಿಗಳ ಪುತ್ರ.