30 C
Mumbai
April 24, 2026
Mumbai News Kannada
ಮುಂಬಯಿ

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ – ಆಟಿಡ್ ಒಂಜಿ ದಿನತ ಸಂಭ್ರಮ





ಡೊಂಬಿವಲಿ ಪರಿಸರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಶ್ರೀ ಮಹಾವಿಷ್ಣು ಮಂದಿರ ಇದರ ಅಧ್ಯಕ್ಷರಾದ ಶ್ರೀಯುತ ಇಂದುಶೇಖರ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ ಸಾಲಿಯಾನ್ ಇವರ ಮುಂದಾಳತ್ವದಲ್ಲಿ ಹಾಗೂ ಎಲ್ಲಾ ಪದಾಧಿಕಾರಿಗಳ ಸಂಪೂರ್ಣ ಸಹಕಾರದೊಂದಿಗೆ ಆಗಸ್ಟ್ 3 ರಂದು ಡೊಂಬಿವಲಿ ಪಶ್ಚಿಮದ ಕ್ಷಿತಿಜ ಮತಿ ಮಂದ ಶಾಲೆಯ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಆಟಿಡ್ ಒಂಜಿ ದಿನ ಕಾರ್ಯಕ್ರಮವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು. ಮಹಿಳಾ ಸದಸ್ಯೆಯ ರಿಂದ ಒಂದು ತಾಸಿನ ಭಜನಾ ಕಾರ್ಯಕ್ರಮ ಶ್ರೀ ಮಹಾ ವಿಷ್ಣು ದೇವರ ಸಾನಿಧ್ಯದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬೈ- ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಮಂಜುಳಾ ಶೇಖರ್ ಶೆಟ್ಟಿ ಹಾಗೂ ಬಂಟರ ಸಂಘ ಮುಂಬೈ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿ ಶ್ರೀಮತಿ ಸುಧಾ ಹೇಮಂತ್ ಶೆಟ್ಟಿ ಅವರು ಆಗಮಿಸಿದ್ದರು.
ಸಂಸ್ಥೆಯ ಗೌರವ ಅಧ್ಯಕ್ಷರಾದ ಶ್ರೀಯುತ ನಿತಿನ್ ಪ್ರಕಾಶ್ ಪುತ್ರನ್, ಅಧ್ಯಕ್ಷರಾದ ಶ್ರೀಯುತ ಇಂದುಶೇಖರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ್ ಸಾಲಿಯಾನ್ ಅವರ ಉಪಸ್ಥಿತಿಯೊಂದಿಗೆ ಅತಿಥಿ ಗಣ್ಯರು ಕಲ್ಪವೃಕ್ಷದ ಹೂವನ್ನು ಅರಳಿಸಿ ಕಾರ್ಯಕ್ರಮಕೆ ಚಾಲನೆ ನೀಡಿದರು. ಈ ಸಂದರ್ಭ ಮಹಿಳಾ ಸದಸ್ಯೆಯರಾದ ಭಾರತಿ ಶ್ರೀಯನ್, ಯಶೋದಾ ಕರ್ಕೇರ ಹಾಗೂ ಪ್ರೇಮಾ ಸುವರ್ಣ ಪ್ರಾರ್ಥನೆ ಮಾಡಿದರು.

ಅಧ್ಯಕ್ಷರಾದ ಇಂದುಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತಾಡುತ್ತ ಅತಿಥಿ ಗಣ್ಯರನ್ನು ಹಾಗೂ ನೆರೆದ ಸಭಿಕರನ್ನು ಸ್ವಾಗತಿಸಿದರು. ಅತಿಥಿ ಗಣ್ಯರನ್ನು ಸದಸ್ಯೆಯರಾದ ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಹಾಗೂ ಶ್ರೀಮತಿ ಚೇತನ ಶರದ್ ಕೋಟಿಯನ್ ಅವರು ಪರಿಚಯಿಸಿದರು. ಪದಾಧಿಕಾರಿಗಳು ಶಾಲು ಹೊದಿಸಿ, ಹೂಗುಚ್ಚಗಳೊಂದಿಗೆ ಗೌರವಿಸಿದರು.

ಅತಿಥಿ ಶ್ರೀಮತಿ ಮಂಜುಳಾ ಶೇಖರ್ ಶೆಟ್ಟಿ ಅವರು ಆಟಿ ತಿಂಗಳ ಮಹತ್ವ ಅಂದು ಮತ್ತು ಇಂದು ಇದರ ಬಗ್ಗೆ ಮಾತನ್ನಾಡುತ್ತಾ ಅಂದಿನ ಆಟಿ ತಿಂಗಳು ಮತ್ತು ಇಂದಿನ ಆಟಿ ತಿಂಗಳ ನಮ್ಮ ಆಚರಣೆಯಲ್ಲಿ ಅಜಗಜಂತರ ವ್ಯತ್ಯಾಸವಿದೆ. ಅಂದು ನಮ್ಮ ಪೂರ್ವಜರು ಬಹಳ ಕಷ್ಟದ ಜೀವನವನ್ನು ಈ ತಿಂಗಳಲ್ಲಿ ಕ್ರಯಿಸಿದ್ದರು ಇಂದು ನಮಗೆ ಅಂತಹ ಕಷ್ಟವೇನೂ ಇಲ್ಲ ನಾವು ಆ ದಿನದ ನೆನಪನ್ನು ಮರೆಯಬಾರದು ಎಂಬ ಉದ್ದೇಶದಿಂದ ಈ ಒಂದು ದಿನವನ್ನು ಇಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚಾಗಿ ಪಾಲ್ಗೊಳ್ಳಬೇಕು. ಅವರಿಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಬಗ್ಗೆ ಅರಿವು ಮೂಡಿಸಬೇಕು. ಇಂದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಿರುವುದು ಕಂಡು ಸಂತಸವಾಯಿತು. ಆಟಿ ತಿಂಗಳಲ್ಲಿ ನಾವು ಒಂದು ದಿನ ಮನೆಯಲ್ಲಿ ನಮ್ಮ ಮಕ್ಕಳೊಂದಿಗೆ ಗಂಜಿ ಚಟ್ನಿ ಊಟ ಮಾಡುವುದರ ಮೂಲಕ ನಮ್ಮ ಪೂರ್ವಜರ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳಬೇಕು ಮಕ್ಕಳಿಗೆ ಈ ಬಗ್ಗೆ ನಾವು ತಿಳಿ ಹೇಳಬೇಕು ಹೀಗಾದಲ್ಲಿ ನಮ್ಮ ನಂತರವೂ ನಾವು ನಮ್ಮ ಸಂಪ್ರದಾಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸಬಹುದೆಂದರು. ಸದಸ್ಯರು ಸಾದರ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತ ಶುಭ ಹಾರೈಸಿದರು. ಮಹಿಳಾ ಸದಸ್ಯೆರಿಂದ ನಡೆದ ತುಳು ಕಿರು ಹಾಸ್ಯ ನಾಟಕ ಚಿರಿ. ಪಿರಿ ಸಂಸಾರ ನೆರೆದ ಸಭಿಕರ ಮನಸೆಳೆಯಿತು. ಸದಸ್ಯರುಗಳಾದ ಶ್ರೀಯುತ ಸಂಜೀವ ಕರ್ಕೇರಾ ಮತ್ತು ಮಹೇಶ್ ಶ್ರೀಯಾನ್ ತುಲು ಪಾಡ್ದನಕೆ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದರು.

ಆಟಿ ತಿಂಗಳಲ್ಲಿ ನೆನಪಾಗುವ ದೈವ ಆಟಿ ಕಳಂಜನ ಬಗ್ಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಾಲಿಯಾನ್ ಸುವಿಸ್ತಾರವಾಗಿ ವಿವರಿಸಿದರು. ಮಕ್ಕಳಾದ ದ್ರುವಿ ಶೆಟ್ಟಿ ಹಾಗೂ ಶಬರೀಶ್ ಹೆಮ್ಮಾಡಿ ಆಟಿ ಕಳಂಜನ ಪ್ರಾತ್ಯಕ್ಷಿಕೆ ಪ್ರದರ್ಶಸಿದರು. ಕುಮಾರಿ ಸಾಕ್ಷಿ ಪ್ರಕಾಶ್ ಸಾಲಿಯಾನ್ ಅತೀ ಸುಂದರವಾಗಿ ಭರತನಾಟ್ಯ ಪ್ರಸ್ತುತ ಪಡಿಸಿದರು ಹಾಗೂ ಸದಸ್ಯರ ಮಕ್ಕಳಿಂದ ಜಾನಪದ ನೃತ್ಯ ಅಲ್ಲದೆ ಮಹಿಳಾ ಸದಸ್ಯೆಯರು ಸಮೂಹ ಗೀತೆ… ಪಾಡ್ದಾನ ಪ್ರಸ್ತುತ ಪಡಿಸಿದರು.
ಅರವಿಂದ್ ಪದ್ಮಶಾಲಿ ನೆರೆದ ಸಭಿಕರಿಗೆ ಪ್ರಶ್ನಾವಳಿ ಕಾರ್ಯಕ್ರಮ ನಡೆಸಿಕೊಟ್ಟರು ವಿಜೇತರಿಗೆ ಅತಿಥಿ ಗಣ್ಯರಿಂದ ಬಹುಮಾನಗಳನ್ನು ವಿತರಿಸಲಾಯಿತು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಸಚಿನ್ ಜಿ. ಪೂಜಾರಿ ಮಾಡಿದರು. ಕೊನೆಗೆ ಆಟಿ ತಿಂಗಳಲ್ಲಿಯ ಸುಮಾರು 60 ವಿವಿಧ ಭಕ್ಷ ಭೋಜನಗಳಿಂದ ಕಾರ್ಯಕ್ರಮವು ಮುಕ್ತಾಯಗೊಂಡಿತು



Related posts

ಸಾಫಲ್ಯ ಸೇವಾ ಸಂಘ ಮುಂಬೈ: ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಮಹಿಳೆಯರಿಗೆ ಫರ್‌ಘಂಟಿ ವಿತರಣೆ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬೈ ಡೊಂಬಿವಲಿ ಸ್ಥಳೀಯ ಕಛೇರಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ

Mumbai News Desk

ಕಲಾ ಜಗತ್ತು ಮುಂಬಯಿ ಮತ್ತು ಡಾ. ಸದಾನಂದ ಶೆಟ್ಟಿ ಅಭಿನಂದನಾ ಬಳಗ ಇವರ ಸಹಯೋಗದಲ್ಲಿ ಡಾ. ಸದಾನಂದ ಶೆಟ್ಟಿ ಯವರಿಗೆ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ.

Mumbai News Desk

ಗಣಪನ ಭಕ್ತಿ ಸಿಂಚನದಲ್ಲಿ ತೇಲಿದ ಕಾಂದಿವಲಿ ಕನ್ನಡ ಸಂಘ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ ಕೋಟ್ಯಾನ್ ಆಯ್ಕೆ.

Mumbai News Desk

ವರ್ಲಿ ಶ್ರೀ ಅಪ್ಪಾಜಿ ಬೀಡು ಫೌಂಡೇಶನ್: ರಮೇಶ್ ಗುರುಸ್ವಾಮಿ ಗೆ ನುಡಿ ನಮನ.

Mumbai News Desk