
ಮುಂಬಯಿ ಜೂ 7. ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ಕೈವಲ್ಯ ಶ್ರೀ ಪ್ರೇಮಾನಂದ ಸ್ವಾಮೀಜಿ ಸ್ಥಾಪಿಸಿರುವ ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಜೂ 7 ರಿಂದ 9 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಜೂ. 8-ನೇ ಶನಿವಾರ ಸೂರ್ಯೋದಯಕ್ಕೆ ಏಕಾಹ ಭಜನೆ ಮಂಗಳೋತ್ಸವ ,ಬೆಳಿಗ್ಗೆ 8.00ಕ್ಕೆ ದುರ್ಗಾಹೋಮ ಮಧ್ಯಾಹ್ನ 12.00ಕ್ಕೆ ಪೂರ್ಣಾಹುತಿ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಸಾಯಂಕಾಲ ದುರ್ಗಾ ನಮಸ್ಕಾರ ಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ,
ಜೂ. 9ನೇ ರವಿವಾರ ಬೆಳಿಗ್ಗೆ ಗಣಹೋಮ, ತದನಂತರ ಸತ್ಯನಾರಾಯಣ ಪೂಜೆ ,ಮಧ್ಯಾಹ್ನ ತೀರ್ಥಪ್ರಸಾದ ವಿತರಣೆ ಸಾಯಂಕಾಲ ದೀಪಾರಾಧನೆ, ಪ್ರಸನ್ನ ಪೂಜೆ. ಬಲಿ ಉತ್ಸವ, ದೇವಿ ದರ್ಶನ, ತೀರ್ಥ ಪ್ರಸಾದ , ಬಳಿಕ ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ದೇವಸ್ಥಾನದ ಧರ್ಮದರ್ಶಿ ಶ್ರೀ ವೇದಾನಂದ ಸ್ವಾಮೀಜಿ ಹಾಗೂ ಭಕ್ತ ಮಂಡಳಿ ವಿನಂತಿಸಿಕೊಂಡಿದ್ದಾರೆ
ಹೆಚ್ಚಿನ ಮಾಹಿತಿಗಾಗಿ 9869162517 ಸಂಪರ್ಕಿಸಿ