
ಮುಂಬಯಿ ಜೂ11.ಮಲಾಡ್ ಪೂರ್ವ ಕುರಾರ್ ವಿಲೇಜ್ ಇಲ್ಲಿ ೬ -೬ ೨೦೨೪ ನೇ ಗುರುವಾರ ಬೆಳಿಗ್ಗೆ ರಿಂದ ಸಂಜೆ ಯ ತನಕ ಶ್ರೀ ಶನಿ ಜಯಂತಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ದೇವಸ್ಥಾನದ ಪ್ರಧಾನ ಅರ್ಚಕ ತುಂಗಾ ರಾಘವೇಂದ್ರ ಭಟ್ ಅವರು ಪುರೋಹಿತ್ಯದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಸಾಪಲ್ಯ, ಮತ್ತು ರಸಿಕ ಸಾಪಲ್ಯ ದಂಪತಿಯ ಯಜಮಾನಿಕೆಯಲ್ಲಿ ನಡೆಯಿತು




ಬೆಳಿಗ್ಗೆ ಹೋಮ ನಂತರ ಮಹಾ ಅಭಿಷೇಕ ಶ್ರೀ ಶನಿದೇವರಿಗೆ ನಂತರ ಪ್ರಸಾದ ವಿತರಣೆ ನಡೆಯಿತು.
ಸಂಜೆ ದೇವಸ್ಥಾನದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಿತು.
ರಾತ್ರಿ ದೇವರ ಪಾಲಕಿ ಮೆರವಣಿಗೆಯ ಮೂಲಕ ಸಂತ್ ಫ್ರಾನ್ಸಿಸ್ ಹೈ ಸ್ಕೂಲ್ ಮೈದಾನದಗೆ ಕರೆತರಲಾಯಿತು ಆನಂತರ ಸಾಮೂಹಿಕ ತಿಲ ದೀಪೋತ್ಸವ ಭಕ್ತಿ ಶ್ರದ್ಧೆಯೊಂದಿಗೆ ನಡೆಯಿತು
ಈ ಪುಣ್ಯ ಕಾರ್ಯಕ್ರಮದಲ್ಲಿ ಯಶಸ್ವಿಗೆ ಶ್ರೀ ಶನಿ ಪೂಜಾ ಸಮಿತಿಯ ಉಪಾದ್ಯಕ್ಶರುಗಳದ ವಿಶ್ವನಾಥ್ ಪೇತ್ರಿ , ರಮೇಶ್ ಆಚಾರ್ಯ, ಪ್ರದಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಜೊತೆ ಕಾರ್ಯದರ್ಶಿಗಳದ ಆನಂದ್ ಕೋಟ್ಯಾನ್.ಶಾಲಿನಿ ಶೆಟ್ಟಿ, ಮತ್ತು ಕೋಶಾಧಿಕಾರಿ ಹರೀಶ್ ಸಾಲಿಯಾನ್ ಮತ್ತು ಜೊತೆ ಕೋಶಾಧಿಕಾರಿಗಳದ ಚಂದ್ರಕುಮಾರ್ ಶೆಟ್ಟಿ ಮತ್ತು ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್, ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗ ಸಹಕರಿಸಿದರು.
ಪೂಜಾ ಕಾರ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶನಿ ದೇವರ ಪ್ರಸಾದವನ್ನು ಸ್ವೀಕರಿಸಿಕೊಂಡರು