
.
ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಕೋಟೆ, ನಾಲಸೋಪರ ಪಶ್ಚಿಮ, ನಾಲಾಸೋಪರ -ವಿರಾರ್ ಲಿಂಕ್ ರೋಡ್, ಶ್ರೀ ಪ್ರಸ್ತದಲ್ಲಿ ನಿರ್ಮಿಸಿದ ಭವ್ಯ ಶನಿ ಮಂದಿರದ ಶ್ರೀ ನಾಗದೇವರ ಪ್ರತಿಷ್ಟಾಪನ ದಿನಾಚರಣೆ ಜೂನ್ 19ರ, ಬುಧವಾರ ಜರಗಲಿದ್ದು, ಅಂದು ಶ್ರೀ ನಾಗದೇವರ ಸನ್ನಿದಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಬ್ರಹ್ಮ ಶ್ರೀ ನಂದ ಕುಮಾರ್ ತಂತ್ರಿ ಅವರ ಪೌರೋಹಿತ್ಯದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳ್ಳಿಗ್ಗೆ 9 ಗಂಟೆಯಿಂದ ನವಕ ಕಲಶ, ಪ್ರಧಾನ ಹೋಮ, ಆಶ್ಲೇಷ ಬಲಿ ನಡೆಯಲಿದೆ.
ಮಧ್ಯಾಹ್ನ 1 ಗಂಟೆಗೆ ತೀರ್ಥ ಪ್ರಸಾದ, ಅನ್ನ ಸಂತರ್ಪಣೆ.
ಪೂಜಾ ಕಾರ್ಯಕ್ರಮಕ್ಕೆ ಭಕ್ತರು ಸ್ವಪರಿವಾರ ಸಮೇತ ಆಗಮಿಸಿ ಶ್ರೀ ನಾಗದೇವರ ಕ್ರಪೆಗೆ ಪಾತ್ರರಾಗುವಂತ್ತೆ, ಸಮಿತಿಯ ಟ್ರಸ್ಟಿಗಳು, ಆಡಳಿತ ಸಮಿತಿ, ಪೂಜಾ ಸಮಿತಿ, ಮಹಿಳಾ ವಿಭಾಗದ ಪದಾಧಿಕಾರಿಗಳು, ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.
ವಿಶೇಷ ಸೂಚನೆ : ನಾಗದೇವರಿಗೆ ತನು ಸೇವೆ ಕೊಡಲು ಇಚ್ಚಿಸುವ ಭಕ್ತರು ರೂಪಾಯಿ 250/ರ ಪಾವತಿ ಮಾಡಿ ತಮ್ಮ ಹೆಸರನ್ನು ನೊಂದಾಯಿಸುಕೊಳ್ಳಬೇಕಾಗಿ ವಿನಂತಿ.
ಹೆಚ್ಚಿನ ವಿವರಗಳಿಗೆ – 9322390999 ನ್ನು ಸಂಪರ್ಕಿಸಬಹುದು.