
ಪಡುಬಿದ್ರಿ ನಡಿಪಟ್ನ ಮೊಗವೀರ ಮಹಾಸಭಾ ಮುಂಬಯಿ ಶಾಖೆಯ 136 ನೇ ವಾರ್ಷಿಕ ಮಹಾಸಭೆಯು ದಿನಾಂಕ 16. 6.24ರಂದು ಶಾಖೆಯ ಅಧ್ಯಕ್ಷರಾದ ಮಾಧವ.ಟಿ.ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ಅಂಧೇರಿ ಪಶ್ಚಿಮ ಎಂ. ವಿ. ಎಂ ಶಾಲೆಯಲ್ಲಿ ನೆರವೇರಿತು.



ದೇವತಾ ಪ್ರಾಥರ್ನೆಯೊಂದಿಗೆ ಸಭೆಯನ್ನು ಆರಂಭಿಸಲಾಯಿತು.
ಗೌರವ ಕಾರ್ಯದರ್ಶಿ ನಾಗೇಶ್ ಪುತ್ರನ್ ಎಲ್ಲರನ್ನು ಸ್ವಾಗತಿಸಿ ಗತ ವರ್ಷದ ವರದಿಯನ್ನು ವಾಚಿಸಿದರೆ, ಗೌರವ ಕೋಶಾಧಿಕಾರಿ ಶೇಖರ್ ಕೋಟ್ಯಾನ್ ಆಯವ್ಯಯ ಪಟ್ಟಿಯನ್ನು ಸಭೆಗೆ ಮಂಡಿಸಿದರು. ಹಾಗೂ ಸಭೆಯಲ್ಲಿ ಅವುಗಳನ್ನು ಸರ್ವಾಮತದಿಂದ ಅಂಗೀಕರಿಸಲಾಯಿತು.
ಈ ಸಂದರ್ಭ ಕಳೆದು ವರ್ಷದ ಎಸ್. ಎಸ್.ಸಿ, ಎಚ್. ಎಸ್ ಸಿ., ಎಂ ಬಿ. ಎ, ಇಂಜಿನಿಯರಿಂಗ್ ಹಾಗೂ ಇನ್ನಿತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಳೆದ ವರ್ಷದ ಉತ್ತಮ ಕೆಲಸಗಾರ ಪ್ರಶಸ್ತಿಯನ್ನು ಭರತ್ ಸುವರ್ಣ ಹಾಗೂ ಈ ವರ್ಷದ ಪ್ರಶಸ್ತಿಯನ್ನು ತೇಜಪಾಲ್ ಸಿ ಪುತ್ರನ್ ಇವರಿಗೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಫ್ ಕಸ್ಟಮ್ಸ್ ಆಗಿ ಬಡ್ತಿ ಹೊಂದಿದ ಸದಸ್ಯರಾದ ಪ್ರಮೋದ್ ಎ ಮೆಂಡನ್ ರನ್ನು ಸನ್ಮಾನಿಸಲಾಯಿತು. ಮತ್ತು ನಿವೃತ್ತಿ ಜೀವನವನ್ನು ಊರಿನಲ್ಲಿ ಕಳೆಯಲು ನಿರ್ಧರಿಸಿದ ಹಿರಿಯ ಸದಸ್ಯರೂ, ಮಾರ್ಗದರ್ಶಕರೂ ಆಗಿರುವ ಕೆ ಎನ್ ಚಂದ್ರಶೇಖರ್ ರನ್ನು ಗೌರವಿಸಲಾಯಿತು.
ಹಿರಿಯ ಸದಸ್ಯರಾದ ನ್ಯಾಯವಾದಿ ಕೃಷ್ಣರಾಜ ಕೋಟ್ಯಾನ್, ಶಂಕರ್ ಪುತ್ರನ್, ಜನಾರ್ದನ ಜಿ ಮೆಂಡನ್, ಉಮೇಶ್ ಆರ್ ಕೋಟ್ಯಾನ್, ನಾರಾಯಣ ಆರ್ ಕೋಟ್ಯಾನ್ ಅವರು ಸಭೆಯ ಬೆಳವಣಿಗೆ ಬಗ್ಗೆ ಯೋಗ್ಯ ಸಲಹೆ- ಸೂಚನೆ ನೀಡಿದರು.
ಅಧ್ಯಕ್ಷರಾದ ಎಂ.ಟಿ. ಪುತ್ರನ್ ಮಾತನಾಡಿ ಸಭೆಗಳಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಮಹಿಳಾ ಮತ್ತು ಯುವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಕೊನೆಯಲ್ಲಿ ಕಾರ್ಯದರ್ಶಿ ನಾಗೇಶ್ ಪುತ್ರನ್ ವಂದನಾರ್ಪಣೆ ಮಾಡಿದರು.