ಸಾರಂತಾಯ ಗರೋಡಿ, ಉಲ್ಲಾಯ ದೈವಸ್ಥಾನ, ಸಸಿಹಿತ್ಲು, ಇದರ ಜೀರ್ಣೋದ್ಧಾರದ ಬಗ್ಗೆ ಕ್ಷೇತ್ರದಲ್ಲಿ ನಡೆದ ಊರಿನ ಆಡಳಿತ ಮಂಡಳಿ ಏರ್ಪಡಿಸಿದ ಬ್ರಹತ್ ಸಭೆಯಲ್ಲಿ, ದೈವಸ್ಥಾನ ಪೂರ್ಣ ರೀತಿಯಲಿ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಪುನರ್ ನಿರ್ಮಾಣಗೊಂಡು,ಬರುವ ವಾರ್ಷಿಕ ನೇಮೋತ್ಸವದ ಮೊದಲು ಸುಸಜ್ಜಿತವಾಗಿ, ಪರಿವಾರ ದೈವಗಳಿಗೆ ಸೇವೆ ಸಲ್ಲಿಸ ಬೇಕೆಂದು ಧೃಡೀಕರಿಸಿ, ಶಂಕು ಪೂಜೆ ಇತ್ಯಾದಿ ಕಾರ್ಯಕ್ರಮಗಳನ್ನ ನಡೆಸುವಂತ್ತೆ ನಿರ್ಧಾರ ಕೈಗೊಳ್ಳಲಾಗಿದೆ.
ಊರಿನ ಆಡಳಿತ ಕಮಿಟಿಯ ಪ್ರಕಾರ ಪುನರ್ ನಿರ್ಮಾಣದ ಅಂದಾಜು ಬಜೆಟ್ ವೆಚ್ಚ ಸುಮಾರು ಒಂದೂವರೇ ಕೋಟಿ (1.50 Crores) ತಗಲ ಬಹುದೆಂದು ಲೆಕ್ಕ ಹಾಕಲಾಗಿದೆ.
ಹಾಗಾಗಿ ಮುಂಬಯಿಯಲ್ಲಿ ನೆಲೆಸಿರುವ ನಾವುಗಳು ಆರಾಧಿಸಿಕೊಂಡು ಬಂದಿರುವಂತ ಪರಿವಾರ ದೈವಗಳ ಕ್ಷೇತ್ರ ಜೀರ್ಣೋದ್ಧಾರದ ಹಣ ಸಂಗ್ರಹಣೆ (ಫಂಡ್ ರೈಸಿಂಗ್) ಬಗ್ಗೆ ಚರ್ಚಿಸುವರೇ ಜೂ.23, ರಂದು ಭಾನುವಾರ, ಬೆಳಿಗ್ಗೆ 10.30 ಕ್ಕೆ ಸರಿಯಾಗಿ, ಗೋರೆಗಾಂವ್ ಪೂರ್ವದಲ್ಲಿರುವ, ಹೋಟೆಲ್ ಜಯ ಲೀಲಾದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
ಸಸಿಹಿತ್ಲು ಗ್ರಾಮಸ್ಥರು ,ಭಕ್ತರು ಅಧಿಕ ಸಂಖ್ಯೆಯಲ್ಲಿ ಕ್ಲಪ್ತ ಸಮಯಕ್ಕೆ ಸಭೆಯಲ್ಲಿ ಉಪಸ್ಥಿತಿರಿದ್ದು, ಸಲಹೆ -ಸೂಚನೆ ನೀಡುವಂತ್ತೆ
ಮುಂಬಯಿ ಸಮಿತಿಯ ಪರವಾಗಿ.
ಅಧ್ಯಕ್ಷರಾದ ಸತೀಶ್ ಕೋಟ್ಯಾನ್ ವಿನಂತಿಸಿಕೊಂಡಿದ್ದಾರೆ
ಹೆಚ್ಚಿನ ಮಾಹಿತಿಗಾಗಿ
ಮೊಬೈಲ್ : 9867603767 ಸಂಪರ್ಕಿಸಿ.