April 2, 2025
ತುಳುನಾಡು

ರೋಟರಿ ಕ್ಲಬ್ ಶಂಕರಪುರ ನೂತನ ಅಧ್ಯಕ್ಷರಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಆಯ್ಕೆ ,

    ಕಾಪು ಜೂ  29.   ಮಾಲಿನಿ ಶೆಟ್ಟಿ ಇನ್ನಂಜೆ ಇವರು ಕಾಪು ಮಹಿಳಾ ಮಂಡಲದ ಮಾಜಿ ಕಾರ್ಯದರ್ಶಿಯಾಗಿ ಮಾಲಿನಿ ಶೆಟ್ಟಿ ಇನ್ನಂಜೆ ಅವರು   ಶಂಕರಪುರ  ರೋಟರಿ ಕ್ಲಬ್  ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ,

ಕಾಪು ಪರಿಸರದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ.   ಮಾಲಿನಿ  ಶೆಟ್ಟಿಯವರು  ಇನ್ನಂಜೆ ಯುವತಿ ಮಂಡಲ ಇದರ ಪೂರ್ವ ಅಧ್ಯಕ್ಷರಾಗಿ, ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಇನ್ನಂಜೆ ಒಕ್ಕೂಟದ ಮಾಜಿ ಅಧ್ಯಕ್ಷರಾಗಿ, ಕಾಪು ಬಂಟರ ಸಂಘ ಇದರ ಸದಸ್ಯರಾಗಿ,  ರೋಟರಾಕ್ಟ್ ಸಮ್ಮೇಳನದಲ್ಲಿ Rotaract Queen ಆಗಿ ಮೂಡಿ ಬಂದ ಇವರು 2018-19 ರಲ್ಲಿ Rotaract District 3182 ನ  ಮೊದಲ ಮಹಿಳಾ ಜಿಲ್ಲಾ ಪ್ರತಿನಿಧಿಯಾಗಿ (DRR) ಸುಮಾರು 42 ಕ್ಲಬ್ ಗಳನ್ನು ಮಾಡಿ ಯಶಸ್ವಿ ಪರಿಚಯ ಕಾನ್ಫರೆನ್ಸ್ ಮಾಡಿದ ಹೆಗ್ಗಳಿಕೆ ಇವರದ್ದು. 2015 ರಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಇವರು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರಾಗಿ, 5 ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಇನ್ನಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

     2023 ರಲ್ಲಿ ಜೆಸಿಐ ಶಂಕರಪುರ ಜಾಸ್ಮಿನ್ ನ ಬೆಳ್ಳಿ ಹಬ್ಬದ ಅಧ್ಯಕ್ಷ ಚುಕ್ಕಾಣಿಯನ್ನು ಹಿಡಿದ ಇವರು ಜೆಸಿ ಸದಸ್ಯರ ಮತ್ತು ದಾನಿಗಳ ಸಹಕಾರದಿಂದ ಸುಮಾರು 7 ಲಕ್ಷ ರೂಪಾಯಿಯ ಶಾಶ್ವತ ಕೊಡುಗೆ ಬಸ್ಸು ತಂಗುದಾಣ, 4 ಕಡೆ ಹೈ ಮಾಸ್ಟ್ ಲೈಟ್, ಮಂಗಳೂರು ವಿಶೇಷ ಮಕ್ಕಳ ಶಾಲೆಗೆ ಕ್ಲಾಸ್ ರೂಮ್ ಗಳ ಕೊಡುಗೆ ನೀಡಿದ್ದು ಮಾತ್ರವಲ್ಲದೆ ಜೆಸಿಐ ಭಾರತದ ಅತೀ ದೊಡ್ಡ ಪ್ರಾಜೆಕ್ಟ್ ಆದ ಜೆಸಿಐ ಕ್ಲಾಕ್ ಟವರ್ ನ್ನು ನಿರ್ಮಿಸಿ ವಲಯದಲ್ಲಿ ಯಾರು ಮಾಡದ ಸಾಧನೆಗಾಗಿ 2023 ರಲ್ಲಿ ಬೆಂಗಳೂರು ನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಜೆಸಿಐ ಶಂಕರಪುರಕ್ಕೆ ಮೊತ್ತ ಮೊದಲ ಬಾರಿಗೆ 2 ನ್ಯಾಷನಲ್ ಅವಾರ್ಡ್ ನೊಂದಿಗೆ, ರಾಷ್ಟ್ರೀಯ ಅಧ್ಯಕ್ಷರ ವಿಶೇಷ ಮನ್ನಣೆಗೆ ಪಾತ್ರರಾದವರಾಗಿದ್ದಾರೆ.

ಬಿಜೆಪಿ ಕಾಪು ಕ್ಷೇತ್ರ ಕೋಶಾಧಿಕಾರಿಯಾಗಿ, ಇನ್ನಂಜೆ ಆಂಗ್ಲ ಮಾಧ್ಯಮದ PTA ಪ್ರೆಸಿಡೆಂಟಾಗಿ,ಜೆಸಿ ವಲಯ 15 ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕೋ ಆರ್ಡಿನೆಟರ್ ಕಾರ್ಯ ನಿರ್ವಹಿಸುತ್ತಿರುವ ಇವರು ರೋಟರಿ ಕ್ಲಬ್ ಶಂಕರಪುರ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷರು ಆಗಿ ಆಯ್ಕೆ ಆಗಿದ್ದಾರೆ.

      ಇವರನ್ನು, ಚಂದ್ರಸ್ ಗುರುಸ್ವಾಮಿ ಇನ್ನಂಜೆ. ಮುಂಬೈ ಬಂಟರ ಸಂಘದ ಜೊತೆ ಕೋಶಧಿಕಾರಿ ಶಶಿಧರ್ ಶೆಟ್ಟಿ ಇನ್ನಂಜೆ ಅಭಿನಂದಿಸಿದ್ದಾರೆ.

Related posts

ಹೆಜಮಾಡಿ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

Mumbai News Desk

ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನ ಅಮ್ಮ ರಕ್ಷೆಯಾಗಿದ್ದಾಳೆ : ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ

Mumbai News Desk

ಅದ್ಧೂರಿಯಾಗಿ ನಡೆದ ಮಂಗಳೂರು ದಸರಾ; ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತಿ ಕ್ಷೇತ್ರದ ಬ್ರಹ್ಮಕಲಸೋತ್ಸವ, ಧಾರ್ಮಿಕ ಸಭೆ;

Mumbai News Desk

ಹೊಸ ಅಂಗಣ ತಿಂಗಳ ಕಾರ್ಯಕ್ರಮ : ಕಿಟ್ಟ ಪಂಬದರಿಗೆ ಸನ್ಮಾನ

Mumbai News Desk

ಶ್ರೀಶ್ರೀಶ್ರೀ ವಿಶ್ವವಲ್ಲಭ ತೀರ್ಥ ರಿಂದ ಭೂತರಾಜರ ಸಾನ್ನಿಧ್ಯ ಸಂಕೋಚವನ್ನು ಮಾಡಿ ಜೀರ್ಣೋದ್ಧಾರಕ್ಕೆ ಚಾಲನೆ

Mumbai News Desk