
ಆಧುನಿಕ ಜೀವನ ಪದ್ದತಿಗೆ ಯೋಗ ಅತೀ ಅಗತ್ಯ – ಪ್ರೇಮನಾಥ ಶೆಟ್ಟಿ ಕೊಂಡಾಡಿ
ಮುಂಬಯಿ : ಹಿಂದಿನ ಕಾಲದ ಜೀವನ ಪದ್ದತಿ ಹಾಗೂ ಇಂದಿನ ಜೀವನ ಪದ್ದತಿಯು ಬಹಳ ಬಹಳ ವ್ಯತ್ಯಾಸವನ್ನು ಹೊಂದಿದ್ದು, ಹಿರಿಯರು ಈಗಿನವರಿಗಿಂತಲೂ ಶ್ರಮ ಜೀವಿಗಳಾಗಿದ್ದು ತಮ್ಮ ಜೀವನ ಪದ್ದತಿ ಹಾಗೂ ಆಹಾರ ಪದ್ದತಿಯಿಂದಾಗಿ ದೀರ್ಘ ಕಾಲ ಜೀವಿಸುತ್ತಿದ್ದರು. ಆದರೆ ಈಗ ಎಲ್ಲ ಅನುಕೂಲತೆಗಳು ಲಭ್ಯವಾಗಿದ್ದು ಮನುಷ್ಯರು ತಮ್ಮ ಜೀವನದಲ್ಲಿ ಮೊದಲಿನವರಷ್ಟು ಕಷ್ಟ ಪಡಬೇಕಾಗಿಲ್ಲ. ಆದುದರಿಂದ ಮಾನವನ ಆರೋಗ್ಯ ವೃದ್ದಿಗಾಗಿ ಆಧುನಿಕ ಜೀವನ ಪದ್ದರಿಯಲ್ಲಿ ಯೋಗ ಅತೀ ಅಗತ್ಯ ಎಂದು ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಅಭಿಪ್ರಾಯ ಪಟ್ಟರು.

ಜೂ. 21ರಂದು ಉದ್ಯಮಿ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಯವರ ಸಹಕಾರದಿಂದ, ಕಾಂದಿವಲಿ ಪಶ್ಚಿಮದ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಯವರ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಯ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಬಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದೆಯು ಎಲ್ಲಾ ಮಹಿಳೆಯರು ಹಾಗೂ ಸಮಿತಿಯ ಸದಸ್ಯರುಗಳು ಮಹಿಳಾ ವಿಭಾಗಕ್ಕೆ ಇದೇ ರೀತಿ ಪ್ರೋತ್ಸಾಹಿಸಿ ಸಹಕರಿಸಬೇಕೆಂದರು.
ಸಂಘದ ಪ್ರಾದೇಶಿಕ ಸಮಿತಿಯ ಹಿರಿಯ ಸಲಹೆಗಾರರಾದ ಮನೋಹರ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ವಿನೋದ ಡಿ ಶೆಟ್ಟಿ ಮತ್ತು ಪದ್ಮಾವತಿ ಬಿ ಶೆಟ್ಟಿ ಉಪಸ್ಥಿತರಿದ್ದರು.
ಅಂತರಾಷ್ಟ್ರೀಯ ಅಥ್ಲೀಟ್ ಮತ್ತು ಫಿಟ್ನೆಸ್ ತರಬೇತುದಾರ ಹಾಗೂ ಸಲಹೆಗಾರ್ತಿ ಶ್ರಿಮತಿ ಸುಚರಿತ ಶೆಟ್ಟಿ ಕಾರ್ಯಕ್ರಮದ ಅತಿಥಿಯಾಗಿ ಉಪಸ್ಥಿತರಿದ್ದು ಯೋಗ ಮತ್ತು ಫಿಟ್ನೆಸ್ ತರಬೇತಿಯನ್ನು ವಿಶೇಷ ರೀತಿಯಲ್ಲಿ ನಡೆಸಿದರು ಹಾಗೂ ಭಾಗವಹಿಸಿದ ಎಲ್ಲರನ್ನು ರಂಜಿಸಿದರು.
ಬಂಟರ ಸಂಘ ಮುಂಬಯಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಂಚಾಲಕರಾದ ನಿಟ್ಟೆ ಮುದ್ದಣ್ಣ ಜಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ಸಂಕೇಶ್ ಎಸ್. ಶೆಟ್ಟಿ, ಸದಸ್ಯತನ ಅಭಿಯಾನದ ಕಾರ್ಯಧ್ಯಕ್ಷ ಪ್ರವೀಣ್ ಜೆ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಮೊದಲಾದವರ ಸಹಕಾರದೊಂದಿಗೆ ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ಮತ್ತು ರವೀಂದ್ರ ಎಸ್. ಶೆಟ್ಟಿ ಮತ್ತು ಎರ್ಮಾಳು ಹರೀಶ್ ಶೆಟ್ಟಿ, ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗದ ಕಾರ್ಯಾಕಾರಿ ಸಮಿತಿಯ ಪದಾಧಿಕಾರಿಗಳಾದ ಸರಿತಾ ಶೆಟ್ಟಿ , ಶುಭಾಂಗಿ ಶೆಟ್ಟಿ, ಯೋಗಿನಿ ಶೆಟ್ಟಿ ,ಪ್ರಭಾವತಿ ಶೆಟ್ಟಿ ಮತ್ತು ಇತರ ಸದಸ್ಯರು ಕಾರ್ಯಕ್ರಮದ ಯಸಸ್ಸಿಗೆ ಸಹಕರಿಸಿದರು.