
ಬೆಂಗಳೂರು ಜೂ 30 ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪುತ್ರಿ ಜೂ29 ರಂದು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಪುತ್ರಿ ಹಂಸ ಮೊಯ್ಲಿ ಸಾವಿನ ಸುದ್ದಿ ತಿಳಿದು ಛತ್ತೀಸ್‌ಘಡದಲ್ಲಿದ್ದ ವೀರಪ್ಪ ಮೊಯ್ಲಿ ರಾತ್ರಿಯೇ ವಾಪಾಸ್ ಆಗಿದ್ದಾರೆ. ಹಂಸ ಮೊಯ್ಲಿ ಅವರು ಭರತನಾಟ್ಯ ಕಲಾವಿದೆ ಆಗಿದ್ದರು. 46 ವರ್ಷದ ಹಂಸ ಮೊಯ್ಲಿ ಅವರು ಇತ್ತೀಚೆಗೆ ಅಸೌಖ್ಯದಿಂದ ಬಳಲುತ್ತಿದ್ದರು. ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದರು. ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಸಿನಿಮಾʻ ಶೃಂಗಾರಂʼನಲ್ಲಿ ನಟಿಸಿದ್ದರು.
ಅನಾರೋಗ್ಯದಿಂದಾಗಿ ಏಕಾಏಕಿ ಬಳಲಿದ್ದ ಅವರು, ನಿನ್ನೆ ಸಂಜೆ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವೀರಪ್ಪಮೊಯ್ಲಿ ಅವರ ಮೂರನೇ ಪುತ್ರಿಯಾಗಿದ್ದ ಹಂಸ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ʻಜನಾನುರಾಗಿʼ ಎಂಬ ಹೆಸರು ಪಡೆದಿದ್ದ ಅವರು, ತಮ್ಮದೇ ಆದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭರತ ನಾಟ್ಯ ಕಲಾವಿದರಾಗಿದ್ದ ಹಂಸ ಮೊಯ್ಲಿ ಅವರು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದರು.
ಹಂಸ ಮೊಯ್ಲಿ ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿ. ಇತ್ತೀಚೆಗೆ ಮಕ್ಕಳಿಗಾಗಿ ಹಿಂದಿ ನಾಟಕ, ಕ್ಯುನ್ ಕ್ಯುನ್ ಲಡ್ಕಿ, ಅದೇ ಹೆಸರಿನ ಮಹಾಶ್ವೇತಾ ದೇವಿಯವರ ಪುಸ್ತಕದಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ರವೀಂದ್ರನಾಥ ಟಾಗೋರ್ ಅವರು ಬರೆದ ಮಕ್ಕಳಿಗಾಗಿ ಇಂಗ್ಲಿಷ್ ನಾಟಕವನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ.