
ಧಾರ್ಮಿಕ ಕೇಂದ್ರಗಳು ಮಕ್ಕಳಿಗೆ ಧಾರ್ಮಿಕ ಪ್ರಜ್ಞೆಗಳು ಮೂಡಿಸುವಂತ ಕಾರ್ಯ ಆಗಬೇಕು: ಶ್ರೀನಿವಾಸ ಸಾಪಲ್ಯ
ಮುಂಬಯಿ ಜು2. ಮಲಾಡ್ ಪೂರ್ವ ದ ಕುರಾರ್ ವಿಲೇಜ್ ನ ಲಕ್ಷ್ಮಣ್ ನಗರದಲ್ಲಿರುವ ಶ್ರೀ ಶನಿಮಂದಿರದ ಆಡಳಿತ ಸಂಸ್ಥೆ ಶನಿ ಮಹಾತ್ಮಾ ಪೂಜಾ ಸಮಿತಿಯ ಅಂಗ ಸಂಸ್ಥೆಯಾದ ಶ್ರೀ ಶನಿ ಮಹಾತ್ಮಾ ಚಾರಿಟೇಬಲ್ ಸೊಸೈಟಿ ವತಿಯಿಂದ ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ಪರಿಸರ ದಲ್ಲಿ ನೆಲೆಸಿರುವ ಬಡ ವಿದ್ಯಾರ್ಥಿಗಳಿಗೆ ಮತ್ತು ಪರಿಸರ ದಲ್ಲಿ ಇರುವ ಮುನಿಸಿಪಲ್ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಸ್ಕೂಲ್ ಬ್ಯಾಗ್ ಮತ್ತು ಇತರ ಸಾಮಗ್ರಿಗಳ ನೀಡಿ. ಮಕ್ಕಳಿಗೆ ಆದ್ಯಾತ್ಮಿಕ ಬೆಳವಣಿಗೆಯ ಒಟ್ಟಿಗೆ ಶೈಕಣಿಕ ಪ್ರೋಸ್ತಾವ ನೀಡುತ್ತಾ ಸಮಾಜ ಸೇವೆ ಮಾಡುತ್ತ ಬಂದಿದೆ.

೧೬ ಜೂನ್ ೨೦೨೪ ರ ಭಾನುವಾರ ಬೆಳಿಗ್ಗೆ ದೇವಸ್ಥಾನದ ದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ತುಂಗಾ ರಾಘವೇಂದ್ರ ಭಟ್ ಅವರು ಪೂಜಾ ಕಾರ್ಯಗಳನ್ನು ನಡೆಸಿ ವಿಶೇಷ ಪ್ರಾರ್ಥನೆಯನ್ನು ಪ್ರಾರ್ಥಿಸಿದ ಬಳಿಕ. ಪೂಜಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸಾಪಲ್ಯ ರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ 50 ವರ್ಷಗಳಿಂದ ಪರಿಸರದಲ್ಲಿ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇವೆಗಳನ್ನು ಪೂಜಾ ಸಮಿತಿ ನಡೆಸುತ್ತ ಬರುತ್ತಿದ್ದು ಅದರೊಂದಿಗೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಲ ಸಾಮಗ್ರಿಗಳನ್ನು ನೀಡಿ ಪ್ರೋತ್ಸಾಹಿಸುತ್ತೇವೆ. ಈ ಕಾರ್ಯಕ್ಕೆ ಬಹಳಷ್ಟು ದಾನಿಗಳು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮಕ್ಕಳಿಗೆ ಬಾಲ್ಯದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದರೆ ಅವರು ಮುಂದಿನ ದಿನಗಳಲ್ಲಿ ಧರ್ಮದ ನಡೆಯಲ್ಲಿ ನಡೆಯಲು ಸಾಧ್ಯವಾಗುತ್ತದೆ ಅದಕ್ಕಾಗಿ ಪೂಜಾ ಸಮಿತಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸುತ್ತಾ ಧರ್ಮ ಜಾಗೃತಿಯ ಕೆಲಸವನ್ನು ನಡೆಸುತ್ತಿದೆ ಎಂದು ನುಡಿದರು.
ಅತಿಥಿಗಳಾಗಿ ಸಮಾಜ ಸೇವಕರು ಉದಯ್ ಮೊಗವೀರ, ಫೈನ್ ಜ್ಯೂವೆಲ್ಲರ್ಸ್ ಮಾಲಕರು ನರೇಶ್ , ಯೋಗಿ ಕ್ಲಾಸ್ ಮಾಲಕರುದ ಯೋಗೇಶ್ ಶ್ರೀ ಯಾನ್, ಮತ್ತು ಜೆ. ಬಿ. ಅಡ್ವಾಣಿ & ಕಂಪನಿ ಮುಂಬೈ ಯ ಜನರಲ್ ಮ್ಯಾನೇಜರ್ ಜತಿನ್ ಪೋಕರ್ಣೇ, ಮತ್ತಿತರರು ಪಾಲ್ಗೊಂಡಿದ್ದರು
. ಅತಿಥಿ ಗಣ್ಯರಿಗೆ ಪೂಜಾ ಸಮಿತಿಯ ಹಿರಿಯ ಸದಸ್ಯರಾದ ನಾರಾಯಣ ಶೆಟ್ಟಿ ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಪೆತ್ರೀ ,ರಮೇಶ್ ಆಚಾರ್ಯ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ,ಕೋಶಧಿಕಾರಿ ಹರೀಶ್ ಜೆ ಸಾಲಿಯನ್. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೀತಲ್ ಕೋಟ್ಯಾನ್. ಚಾರಿಟೇಬಲ್ ಸೊಸೈಟಿ ಕಾರ್ಯಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಉಪಾಕಾಧ್ಯಕ್ಷರಾದ ಶಿವಾನಂದ ದೇವಾಡಿಗ, ಕಾರ್ಯದರ್ಶಿ ಮಹೇಶ್ ಸಾಲಿಯಾನ್, ಜೊತೆ ಕಾರ್ಯದರ್ಶಿ ದಯಾನಂದ ಶೆಟ್ಟಿ, ಕೋಶಾಧಿಕಾರಿ ರಾಜಶ್ರೀ ಪೂಜಾರಿ, ಜೊತೆ ಕೋಶಾಧಿಕಾರಿ ಭರತ್ ಕೋಟ್ಯಾನ್ ಗೌರವಿಸಿದರು