
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಜು2. ಅಂತರಾಷ್ಟ್ರೀಯ ಸಂಗೀತ ಕಲಾವಿದೆ. ಮನಮೋಹಕ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಸಾವಿರಾರು ಜನರನ್ನು ಮನರಂಜಿಸಿದ ಕನ್ನಡದ ಕಲಾವಿದೆ ಸ್ಮಿತಾ ಬೆಳ್ಳೂರ್ ಇವರು ಮೈಸೂರು ಅಸೋಸಿಯೇಶನ್ ಮುಂಬೈ ಯಲ್ಲಿ ಜೂ 29 ಶನಿವಾರ ಸಂಗೀತ ಕಾರ್ಯಕ್ರಮವನ್ನು ನೀಡಿದರು

ಸಂಗೀತದ ಬಗ್ಗೆ ಆಸಕ್ತಿವುಳ್ಳ ಕಲಾಭಿಮಾನಿಗಳು ಸೇರಿಕೊಂಡಿದ್ದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಸ್ಮಿತಾ ಬೆಳ್ಳೂರ್ ಯವರು ದಾಸರ ಪದಗಳು, ಭಾವಗೀತೆಗಳು, ಶಿಶುನಾಳ ಶರೀಫರ ಪದಗಳು ಮತ್ತು ಸೂಫಿ ಸಂಗೀತವನ್ನು ಹಾಡುಗಳನ್ನು ಹಾಡಿ ಸಂಗೀತ ಪ್ರೇಮಿಗಳನ್ನು ಮನರಂಜಿಸಿದರು.
ಸ್ಮಿತಾ ಬೆಳ್ಳೂರ್ ಅವರ ಭಾವಪೂರ್ಣ ಗಾಯನ ಪರಿಪೂರ್ಣ ಸ್ವರ, ಆಳವಾದ ಗಾಯನ ಅನೇಕ ಭಾಷೆಗಳಲ್ಲಿ (ಹಿಂದಿ, ಉರ್ದು, ಕನ್ನಡ, ಪಂಜಾಬಿ) ಸುಂದರವಾಗಿ ಹಾಡಿ ಪ್ರೇಕ್ಷಕರೊಂದಿಗೆ ಹಾಡುತ್ತಾ ಸಂಭ್ರಮ ಹಂಚಿಕೊಂಡರು
ಸಂಗೀತಕ್ಕ ಕಚೇರಿಯಲ್ಲಿ ತಬಲಾದಲ್ಲಿ ಮೃಣ್ಮಯ್ ಚವಾಣ್ ಹಾಗೂ ಹಾರ್ಮೋನಿಯಂನಲ್ಲಿ ವಿನೋದ್ ಪಾಡ್ಗೆ ಅವರ ಸಹಕರಿಸಿದ್ದರು.
ಮೈಸೂರು ಅಸೋಸಿಯೇಷನ್ ವತಿಯಿಂದ.ಸ್ಮಿತಾ ಬೆಳ್ಳೂರ್ ತಂಡವನ್ನು ಗೌರವಿಸಲಾಯಿತು