ಮುಂಬಯಿ ಜು 11. ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಹಿರಿಯ ಸದಸ್ಯ, ಬೋರಿವಲಿ ಪೂರ್ವ ರೆಹೇಜಾ ಕಾಂಪ್ಲೆಕ್ಸ್ ನಿವಾಸಿ ಪದ್ಮನಾಭ್ ಎ ಶೆಟ್ಟಿ ( ಪಿ ಎ ಶೆಟ್ಟಿ )(77) ಅವರು ಅಲ್ಪಕಾಲದ ಅನಾರೋಗ್ಯದಿಂದ ಜು11 ನಿಧಾನವಾಗಿದ್ದಾರೆ. ಮೂಲತ ಕುಂಜತ್ತಬೈಲು ಮೊಗರುಮನೆಯವರು ಮೃತರು ಪತ್ನಿ ಬೇಬಿ ಪಿ ಶೆಟ್ಟಿ, ಇಬ್ಬರು ಪುತ್ರಿಯರು, ಮತ್ತು ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳು ಅಗಲಿದ್ದಾರೆ,
ಪದ್ಮನಾಭ್ ಶೆಟ್ಟಿಯವರು ಗುರುದೇವ ಸೇವಾ ಬಳಗದ ಸಕ್ರಿಯ ಮತ್ತು ಪ್ರಮುಖ ಸದಸ್ಯರಾಗಿದ್ದಾರು. ಅವರ ಇಡೀ ಕುಟುಂಬವು ಬಳಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ದಿವ್ಯ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಹಾಗೂ ಗುರುದೇವಾ ಸೇವಾ ಬಳಗ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು. ಸದಸ್ಯರು. ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಪದಾಧಿಕಾರಿಗಳು ಸರ್ವ ಸದಸ್ಯರು ದುಃಖ ಸಂತಾಪ ಸೂಚಿಸಿದ್ದಾರೆ.
———